Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > anorexia nervosa ಸೋಷಿಯಲ್ ಮೀಡಿಯಾ ಡಯೆಟ್: ಅನೋರೆಕ್ಸಿಯಾ ನರ್ವೋಸಾಗೆ ಪಿಯು ವಿದ್ಯಾರ್ಥಿನಿ ಬಲಿ
ಅನಾವರಣದೇಶಪ್ರಮುಖ

anorexia nervosa ಸೋಷಿಯಲ್ ಮೀಡಿಯಾ ಡಯೆಟ್: ಅನೋರೆಕ್ಸಿಯಾ ನರ್ವೋಸಾಗೆ ಪಿಯು ವಿದ್ಯಾರ್ಥಿನಿ ಬಲಿ

Share
2 Min Read
SHARE

newsics.com

ಕಣ್ಣೂರು(ಕೇರಳ): ತೂಕ ಇಳಿಸಿಕೊಳ್ಳಲು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಫಾಲೋ ಮಾಡ್ತಿದ್ದ ಹುಡುಗಿಯೊಬ್ಬಳು ಜೀವ ಕಳೆದುಕೊಂಡಿದ್ದಾಳೆ.

ಈ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಮಟ್ಟನೂರಿನ ಪಳಸ್ಸಿ ರಾಜ ಎನ್‌ಎಸ್‌ಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿಪೂರ್ವ ವಿದ್ಯಾರ್ಥಿನಿ ಎಂ. ಶ್ರೀನಂದಾ ಡಯಟ್‌ನಿಂದ ಸಾವನ್ನಪ್ಪಿದ್ದಾಳೆ.

ತೂಕ ಇಳಿಸಿಕೊಳ್ಳಲು ಶ್ರೀನಂದಾ ನಿರಂತರ ಪ್ರಯತ್ನ ನಡೆಸುತ್ತಿದ್ದರು. ತನ್ನ ತೂಕ ಹೆಚ್ಚಾಗಬಹುದು ಎನ್ನುವ ಕಾರಣಕ್ಕೆ 18ರ ಶ್ರೀನಂದಾ ಊಟ ಕೂಡ ಬಿಟ್ಟಿದ್ದರು. ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನಡೆಯುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶ್ರೀನಂದಾ ಸಾವನ್ನಪ್ಪಿದ್ದಾರೆ. ಶ್ರೀನಂದಾಗೆ ತೂಕ ಹೆಚ್ಚಾಗುವ ಭಯ ಇತ್ತು. ಯುಟ್ಯೂಬ್ ವಿಡಿಯೋವನ್ನು ಫಾಲೋ ಮಾಡಿ, ಡಯಟ್ ಮಾಡ್ತಿದ್ದರು. ಅಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ವ್ಯಾಯಾಮ ಮಾಡುತ್ತಿದ್ದರು. ತೂಕ ಹೆಚ್ಚಾಗುವ ಭಯದಲ್ಲಿ ಘನ ಆಹಾರವನ್ನು ಬಿಟ್ಟಿದ್ದರು. ಲಿಕ್ವಿಡ್ ಆಹಾರವನ್ನು ಮಾತ್ರ ಸೇವನೆ ಮಾಡ್ತಿದ್ದ ಶ್ರೀನಂದಾ, ಹಸಿವಿನಿಂದಲೇ ಉಸಿರು ಚೆಲ್ಲಿದ್ದಾಳೆ.
ಹಲವು ದಿನಗಳ ಹಿಂದೆಯೇ ಶ್ರೀನಂದಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತುರ್ತು ನಿಗಾ ಘಟಕದಲ್ಲಿ ಶ್ರೀನಂದಾ ಚಿಕಿತ್ಸೆ ಪಡೆಯುತ್ತಿದ್ದರು.

ಶ್ರೀನಂದಾ ಅನೋರೆಕ್ಸಿಯಾ ನರ್ವೋಸಾ (anorexia nervosa)ದಿಂದ ಬಳಲುತ್ತಿದ್ದರು ಎಂದು ಅವರಿಗೆ ಚಿಕಿತ್ಸೆ ನೀಡಿದ ವೈದ್ಯ ಡಾ. ನಾಗೇಶ್ ಪ್ರಭು ಹೇಳಿದ್ದಾರೆ. ಇದು ತೂಕ ಹೆಚ್ಚಾಗುವ ತೀವ್ರ ಭಯದಿಂದ ಉಂಟಾಗುವ ಅಸ್ವಸ್ಥತೆಯಾಗಿದೆ. ಶ್ರೀನಂದಾ ಸುಮಾರು ಆರು ತಿಂಗಳ ಹಿಂದೆ ಯುಟ್ಯೂಬ್ ನೋಡಿ ಈ ಡಯಟ್ ಶುರು ಮಾಡಿದ್ದರು. ಶ್ರೀನಂದಾಗೆ ಮೊದಲೇ ಚಿಕಿತ್ಸೆ ನೀಡುವಂತೆ ಕುಟುಂಬಸ್ಥರಿಗೆ ಆಪ್ತರು ಸಲಹೆ ನೀಡಿದ್ದರು. ಆದ್ರೆ ಕುಟುಂಬಸ್ಥರು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಪಾಶ್ಚಿಮಾತ್ಯ ದೇಶಗಳಲ್ಲಿ ಅನೋರೆಕ್ಸಿಯಾ ನರ್ವೋಸಾ ಪ್ರಚಲಿತವಾಗಿದೆ. ಅದ್ರೆ ಕೇರಳದಲ್ಲಿ ಇದು ಅಪರೂಪ ಎಂದು ವೈದ್ಯರು ಹೇಳಿದ್ದಾರೆ.

ಏನಿದು ಅನೋರೆಕ್ಸಿಯಾ ನರ್ವೋಸಾ:

ಅನೋರೆಕ್ಸಿಯಾ ನರ್ವೋಸಾ ತಿನ್ನುವ ಅಸ್ವಸ್ಥತೆಯಾಗಿದೆ. ಅನೋರೆಕ್ಸಿಯಾ ಇರುವ ಜನರು ತಮ್ಮ ವಯಸ್ಸು ಮತ್ತು ಎತ್ತರಕ್ಕೆ ಅನುಗುಣವಾಗಿ ತಮ್ಮ ತೂಕವನ್ನು ಸಾಮಾನ್ಯವಾಗಿ ಅಥವಾ ಅದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇರಿಸಿಕೊಳ್ಳಲು ಹೆಣಗಾಡುತ್ತಾರೆ. ಅನೋರೆಕ್ಸಿಯಾ ಸಮಸ್ಯೆ ಹೆಚ್ಚಾಗಿ ಹದಿಹರೆಯದಲ್ಲಿ ಶುರುವಾಗುತ್ತದೆ. ಇದು ಹೆಚ್ಚಾಗಿ ಪ್ರೌಢಾವಸ್ಥೆಯವರೆಗೂ ಮುಂದುವರಿಯುತ್ತದೆ.

ಅನೋರೆಕ್ಸಿಯಾ ಇರುವ ಜನರು ಹೆಚ್ಚಾಗಿ ತೂಕ ಹೆಚ್ಚಾಗುವ ತೀವ್ರ ಭಯವನ್ನು ಅನುಭವಿಸುತ್ತಾರೆ. ತೂಕ ಹೆಚ್ಚಾಗುವುದನ್ನು ತಡೆಯಲು ಹಲವು ಚಟುವಟಿಕೆಗಳನ್ನು ಮಾಡುತ್ತಾರೆ. ದೇಹದ ತೂಕ ಕಡಿಮೆಯಾಗುವುದು ಎಷ್ಟು ಗಂಭೀರ ಎಂಬುದನ್ನು ಅವರು ಪರಿಗಣಿಸುವುದಿಲ್ಲ. ತೂಕ ಇಳಿಸಿಕೊಳ್ಳಲು, ಅನೋರೆಕ್ಸಿಯಾ ಪೀಡಿತ ಜನರು ಆಹಾರವನ್ನು ನಿರ್ಬಂಧಿಸುತ್ತಾರೆ. ಹೆಚ್ಚು ವ್ಯಾಯಾಮ ಮಾಡುತ್ತಾರೆ. ಇದು ಮಾನಸಿಕ ಅಸ್ವಸ್ಥತೆಯಾಗಿದೆ. ಅನೋರೆಕ್ಸಿಯಾಕ್ಕೆ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಹೋದರೆ ಜೀವಕ್ಕೆ ಹಾನಿ ನಿಶ್ಚಿತ.

Love and marry ಎಷ್ಟು ದಿನ ನಮ್ಮ ಹುಡುಗಿಯರನ್ನೇ ನೋಡ್ತೀರಿ, ಅನ್ಯ ಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ: ಚಕ್ರವರ್ತಿ ಸೂಲಿಬೆಲೆ

Supreme Court judgement ಅತ್ಯಾಚಾರ ದೃಢಪಡಿಸಲು ಖಾಸಗಿ ಭಾಗದ ಗಾಯದ ಗುರುತು ಅಗತ್ಯವಿಲ್ಲ: ಸುಪ್ರೀಂ

Ranya gold smuggling ರನ್ಯಾ ಕೇಸ್: ಏಟ್ರಿಯಾ ಹೋಟೆಲ್ ಓನರ್ ಮೊಮ್ಮಗ ಅರೆಸ್ಟ್, ರನ್ಯಾ ಜೈಲುಪಾಲು, ಕೇಸ್‌ನಲ್ಲಿ ಇಬ್ಬರು ಸಚಿವರ ಹೆಸರು!

TAGGED:Social media diet: PU student succumbs to anorexia nervosa
Share This Article
Facebook Twitter Copy Link Print
Previous Article Today’s prediction ಶುಭ ದಿನ, ಇಂದಿನ ರಾಶಿ ಭವಿಷ್ಯ, 11-03-2025, ಮಂಗಳವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?
Next Article Two ministers words war ಕಾಂಗ್ರೆಸ್ ಶಾಸಕಾಂಗ ಸಭೆ ಬಳಿಕ ಕೈಕೈ ಮಿಲಾಯಿಸುವ ಹಂತ ತಲುಪಿದ ಸಚಿವರಿಬ್ಬರ ವಾಗ್ಯುದ್ಧ? ಅಷ್ಟಕ್ಕೂ ಏನಾಯ್ತು?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?