newsics.com
ಉಳ್ಳಾಲ(ದಕ್ಷಿಣ ಕನ್ನಡ): ಹುಡುಗಿ ಸಿಗಲಿಲ್ಲ ಎಂದು ಎಷ್ಟು ದಿನ ನೀವು ಹೇಳುತ್ತಲೇ ಇರುತ್ತೀರಿ? ಎಷ್ಟು ದಿನ ಅಂತ ನಮ್ಮದೇ ಹೆಣ್ಣು ಮಕ್ಕಳನ್ನು ನೋಡ್ತೀರಾ? ಅನ್ಯ ಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುತ್ತಾರೂನಲ್ಲಿ ಚಕ್ರವರ್ತಿ ಸೂಲಿಬೆಲೆ ಆಡಿದ ಮಾತು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಅನ್ಯ ಧರ್ಮದವರನ್ನು ಪ್ರೀತಿಸಿ, ಮದುವೆಯಾಗಿ ಎಂಬ ಚಕ್ರವರ್ತಿ ಸೂಲಿಬೆಲೆ ಹೇಳಿಕೆ ಪರ ವಿರೋಧ ಚರ್ಚೆಗೆ ಕಾರಣವಾಗಿದೆ.
ಎಲ್ಲಿವರೆಗೂ ಲವ್ ಜಿಹಾದ್ ಬಗ್ಗೆ ಮಾತನಾಡುತ್ತಿರೋಣ? ಸ್ವಲ್ಪ ಬದಲಾವಣೆ ತರೋಣ
ಎಂದರು.
ಮಂಗಳೂರಿನ ಕದ್ರಿ ಮಂಜುನಾಥ ಕ್ಷೇತ್ರದಿಂದ ಕುತ್ತಾರಿನ ಕೊರಗಜ್ಜ ಆದಿಕ್ಷೇತ್ರಕ್ಕೆ ನಡೆದ ʼಕೊರಗಜ್ಜನ ಆದಿ ಕ್ಷೇತ್ರಕ್ಕೆ ನಮ್ಮ ನಡೆʼ ಪಾದಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಸೂಲಿಬೆಲೆ, ಮತಾಂತರ, ಲವ್ ಜಿಹಾದ್ ವಿಚಾರಗಳನ್ನು ಬಿಟ್ಟು ಬಿಡಿ. ಹಿಂದೂ ಧರ್ಮದಿಂದ ಮತಾಂತರವಾದವರನ್ನು ಮತ್ತೆ ʼಘರ್ ವಾಪಸಿʼ ಮಾಡುವುದು ಹೇಗೆಂದು ನಮ್ಮ ಯುವಕರಿಗೆ ತರಬೇತಿ ನೀಡಿ. ಈಗ ಟೆಸ್ಟ್ ಮ್ಯಾಚ್‌ಗಳು ನಿಂತು ಹೋಗಿವೆ. ಇರುವ ಇಪ್ಪತ್ತು ಓವರ್‌ಗಳಲ್ಲೇ ಬಡಿಯಬೇಕು. ಈ ಸವಾಲುಗಳನ್ನ ಎದುರಿಸಲು ಸಜ್ಜಾಗಬೇಕು’ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂಗಳ ಪ್ರಮಾಣ 65%ಗೆ ತಲುಪಿದೆ. ಹಿಂದೂ ಯುವಕ, ಯುವತಿಯರು 25-30 ವಯಸ್ಸಿನೊಳಗೆ ಮದುವೆಯಾಗಿ ಕನಿಷ್ಠ ಎರಡು ಮಕ್ಕಳನ್ನು ಪಡೆಯುವಂತೆ ಜಾಗೃತಿ ಮೂಡಿಸಬೇಕೆಂದು ಸೂಲಿಬೆಲೆ ಕರೆ ನೀಡಿದರು.
Supreme Court judgement ಅತ್ಯಾಚಾರ ದೃಢಪಡಿಸಲು ಖಾಸಗಿ ಭಾಗದ ಗಾಯದ ಗುರುತು ಅಗತ್ಯವಿಲ್ಲ: ಸುಪ್ರೀಂ