newsics.com
ಬೆಂಗಳೂರು: ಫ್ಲಿಪ್ಕಾರ್ಟ್ ತನ್ನ ಅಂಗಸಂಸ್ಥೆಯಾದ ಎಎನ್ಎಸ್ ಕಾಮರ್ಸ್ ಅನ್ನು ಮುಚ್ಚಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಉದ್ಯೋಗಿಗಳು, ಗ್ರಾಹಕರು ಸೇರಿದಂತೆ ಎಲ್ಲಾ ಭಾಗಿದಾರರಿಗೆ ಸಮಸ್ಯೆಯಾಗದ ರೀತಿಯಲ್ಲಿ ಇದನ್ನು ಅಂತ್ಯವಾಡಲು ಬದ್ಧವಾಗಿದ್ದೇವೆ,’ ಎಂದು ಫ್ಲಿಪ್ಕಾರ್ಟ್ನ ವಕ್ತಾರರು ಹೇಳಿದ್ದಾರೆ ಎನ್ನಲಾಗಿದೆ .
ಸಾಕಷ್ಟು ಯೋಚನೆ ಬಳಿಕ ಎಎನ್ಎಸ್ ಕಾಮರ್ಸ್ ಸಂಸ್ಥೆ ತನ್ನ ವ್ಯವಹಾರಗಳನ್ನು ನಿಲ್ಲಿಸಲು ನಿರ್ಧರಿಸಿದೆ.
ಗುರುಗ್ರಾಮ್ ಮೂಲದ ಎಎನ್ಎಸ್ ಕಾಮರ್ಸ್ ಸಂಸ್ಥೆ 2017ರಲ್ಲಿ ಆರಂಭವಾಗಿತ್ತು. ಆನ್ಲೈನ್ನಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಬಯಸುವ ಸಂಸ್ಥೆಗಳಿಗೆ ಮಾರ್ಕೆಟಿಂಗ್ ಟೂಲ್, ಸಂಗ್ರಹಗಾರ ಇತ್ಯಾದಿ ಬೆಂಬಲ ಸೇವೆಗಳನ್ನು ನೀಡುವ ಕಂಪನಿ ಅದು. 2022ರಲ್ಲಿ ಫ್ಲಿಪ್ಕಾರ್ಟ್ ಸಂಸ್ಥೆ 300 ಕೋಟಿ ರೂ ಮೊತ್ತಕ್ಕೆ ಎಎನ್ಎಸ್ ಕಾಮರ್ಸ್ ಅನ್ನು ಖರೀದಿ ಮಾಡಿತು. ಈಗ ಮೂರು ವರ್ಷದ ಬಳಿಕ ಅದನ್ನು ಮುಚ್ಚುತ್ತಿದೆ. ಯಾವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬುದು ಗೊತ್ತಾಗಿಲ್ಲ. ಫ್ಲಿಪ್ಕಾರ್ಟ್ನಿಂದ ಇನ್ನೂ ಅಧಿಕೃತ ಹೇಳಿಕೆ ಬಂದಿಲ್ಲ.
2022ರಲ್ಲಿ ಎಎನ್ಎಸ್ ಕಾಮರ್ಸ್ ಸಂಸ್ಥೆಯಲ್ಲಿ 600 ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು. ಈಗ ಅವರ ಸಂಖ್ಯೆ ಎಷ್ಟಿದೆ ಎನ್ನುವುದು ಗೊತ್ತಿಲ್ಲ. ಆದರೆ, ಆ ವಿಭಾಗದಲ್ಲಿ ಕೆಲಸ ಮಾಡತ್ತಿರುವ ಉದ್ಯೋಗಿಗಳಿಗೆ ಫ್ಲಿಪ್ಕಾರ್ಟ್ನಲ್ಲಿ ಸೂಕ್ತ ಹುದ್ದೆಗಳಿದ್ದರೆ ನೇಮಕವಾಗುವ ಅವಕಾಶ ಕಲ್ಪಿಸಲಾಗಿದೆ. ಬೇರೆ ಕಡೆ ಕೆಲಸ ಅರಸಲು ಸಹಾಯ ಕೂಡ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರಿನಲ್ಲಿ ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಎಂಬ ಸೋದರರಿಬ್ಬರು 2007ರಲ್ಲಿ ಸ್ಥಾಪಿಸಿದ ಸಂಸ್ಥೆ ಫ್ಲಿಪ್ಕಾರ್ಟ್. 2018ರಲ್ಲಿ ಅಮೆರಿಕದ ರೀಟೇಲ್ ದೈತ್ಯ ಸಂಸ್ಥೆ ವಾಲ್ಮಾರ್ಟ್ ಈ ಫ್ಲಿಪ್ಕಾರ್ಟ್ ಅನ್ನು ಖರೀದಿಸಿತು. ಬಳಿಕ ಎಎನ್ಎಸ್ ಕಾಮರ್ಸ್, ಮಿನ್ತ್ರಾ ಇತ್ಯಾದಿ ಹಲವು ಆನ್ಲೈನ್ ಬ್ರ್ಯಾಂಡ್ ಮತ್ತು ಕಾಮರ್ಸ್ ಕಂಪನಿಗಳನ್ನು ಫ್ಲಿಪ್ಕಾರ್ಟ್ ಮೂಲಕ ಖರೀದಿ ಮಾಡಲಾಗಿದೆ.