newsics.com
ಮುಂಬೈ: ನಟಿ ಪ್ರಿಯಾಂಕಾ ಚೋಪ್ರಾ ಅವರ ಜೀವನಶೈಲಿ ಯಾವ ರಾಣಿಗೂ ಕಡಿಮೆ ಇಲ್ಲ. ಕೋಟಿ ಕೋಟಿ ಬೆಲೆಬಾಳುವ ಆಭರಣಗಳನ್ನು ಧರಿಸಿಯೇ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಳ್ಳುತ್ತಿರುತ್ತಾರೆ. ಪ್ರಿಯಾಂಕಾ ಧರಿಸುವ ಔಟ್ಫಿಟ್ ಬೆಲೆಯಲ್ಲಿ ಮಧ್ಯಮವರ್ಗದ ಜನತೆ ಸುಂದರವಾದ ಮನೆಯೊಂದನ್ನು ಕಟ್ಟಿಕೊಳ್ಳಬಹುದು.
ಲೈಫ್ಸ್ಟೈಲ್ ಏಶಿಯಾ ವರದಿ ಪ್ರಕಾರ, 2016ರ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದ ಪ್ರಿಯಾಂಕಾ ಚೋಪ್ರಾ ಧರಿಸಿದ್ದ ಆಭರಣಗಳು ಕೋಟಿ ಕೋಟಿ ಬೆಲೆಯನ್ನು ಹೊಂದಿದ್ದವು. ಅಂದು ಪ್ರಿಯಾಂಕಾ ಚೋಪ್ರಾ 21.75 ಕೋಟಿ ಬೆಲೆ ಬಾಳುವ ಕಿವಿಯೊಲೆ ಮತ್ತು 2 ಕೋಟಿ ಮೌಲ್ಯದ 50 ಕ್ಯಾರಟ್ ವಜ್ರದ ಉಂಗುರ ಧರಿಸಿದ್ದರು. ಪ್ರಿಯಾಂಕಾ ಧರಿಸಿದ್ದ ಔಟ್ಫಿಟ್ ಸಹ ಕೋಟಿ ಮೌಲ್ಯದಾಗಿತ್ತು. ಇವೆಂಟ್ಗಳಲ್ಲಿ ಕಾಣಿಸಿಕೊಳ್ಳುವಾಗ ಪ್ರಿಯಾಂಕಾ ಧರಿಸುವ ಔಟ್ಫಿಟ್ ಮೌಲ್ಯ ಕೋಟಿಗಳಲ್ಲಿರುತ್ತದೆ. ಒಂದು ಇವೆಂಟ್ನಲ್ಲಿ 72 ಕೋಟಿ ಮೌಲ್ಯದ ರಾಲ್ಫ್ ರೂಸೋ ಗೌನ್ ಧರಿಸಿದ್ದರು. ಇನ್ನು ಮೆಟ್ ಗಾಲಾದಲ್ಲಿ ಪ್ರಿಯಾಂಕಾ ಕನಿಷ್ಠ 45 ಕೋಟಿ ಮೌಲ್ಯದ ಔಟ್ಫಿಟ್ನಲ್ಲಿ ಮಿಂಚಿದ್ದರು.
2018ರಲ್ಲಿ ಪಾಪ್ ಸಿಂಗರ್ ನಿಕ್ ಜೋನಸ್ ಜತೆಯಲ್ಲಿ ಪ್ರಿಯಾಂಕಾ ಚೋಪ್ರಾ ಅವರ ಮದುವೆ ನಡೆದಿತ್ತು. GQ ವರದಿ ಪ್ರಕಾರ, ಪ್ರಿಯಾಂಕಾ ಅವರ ನಿಶ್ಚಿತಾರ್ಥ ಉಂಗುರದ ಮೌಲ್ಯ 2.1 ಕೋಟಿ ರೂಪಾಯಿ ಆಗಿತ್ತು. ಸದ್ಯ ಪ್ರಿಯಾಂಕಾ ಚೋಪ್ರಾ ಲಾಸ್ ಏಂಜಲಿಸ್ನ 160 ಕೋಟಿ ಮೌಲ್ಯದ ಮನೆಯಲ್ಲಿ ವಾಸಿಸುತ್ತಿದ್ದಾರೆ. ವರದಿಗಳ ಪ್ರಕಾರ, ಪ್ರಿಯಾಂಕಾ ಚೋಪ್ರಾ 650 ಕೋಟಿಯ ಒಡತಿ ಎಂದು ಹೇಳಲಾಗುತ್ತದೆ.
Kavya Gowda ಶ್ರೀಮಂತ ಗಂಡ ಎಂದು ಕೊಂಕು ಮಾಡುತ್ತಿದ್ದವರಿಗೆ ಈ ನಟಿ ಹೇಳಿದ್ದೇನು?