Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > poverty in China ಚೀನಾದಲ್ಲಿ ಹೆಚ್ಚಿತು ಬಡತನ, ಉಚಿತ ಊಟ ಬಯಸುವವರ ಸಂಖ್ಯೆ ಹೆಚ್ಚಳ: ಕೋಡ್ ವರ್ಡ್‌ಗೆ ಹೆಚ್ಚಿದ ಡಿಮಾಂಡ್
ಪ್ರಮುಖವಿದೇಶ

poverty in China ಚೀನಾದಲ್ಲಿ ಹೆಚ್ಚಿತು ಬಡತನ, ಉಚಿತ ಊಟ ಬಯಸುವವರ ಸಂಖ್ಯೆ ಹೆಚ್ಚಳ: ಕೋಡ್ ವರ್ಡ್‌ಗೆ ಹೆಚ್ಚಿದ ಡಿಮಾಂಡ್

Share
2 Min Read
SHARE

newsics.com

ಚೀನಾ: ಕಳೆದ ಕೆಲ ವರ್ಷಗಳಿಂದ ಚೀನಾ ದೇಶ ತುಸು ಆರ್ಥಿಕ ಹಿನ್ನಡೆಯನ್ನು ಅನುಭವಿಸುತ್ತಿದೆ. ಇದರ ಪರಿಣಾಮವಾಗಿ ಅಲ್ಲಿ ನಿರುದ್ಯೋಗ ಪ್ರಮಾಣ ಶೇ.16ಕ್ಕೆ ಏರಿದೆ.

ಊಟಕ್ಕೆ ಪರದಾಡುತ್ತಿರುವವರ ಸಂಖ್ಯೆಯೂ ಏರುತ್ತಿದೆ. ಹೀಗಾಗಿ ಊಟದ ಅವಶ್ಯಕತೆ ಇದ್ದವರ ಸಹಾಯಕ್ಕೆ ಅಲ್ಲಿನ ಸಮಾಜ ನಿಂತಿದೆ. ಅದರಲ್ಲೂ ಪ್ರಮುಖವಾಗಿ ಚೀನಾದ ಹಲವು ರೆಸ್ಟೋರೆಂಟ್‌ಗಳು ಇಂಥವರಿಗೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ಊಟ ಕೊಡುತ್ತಿವೆ.

ಚೆಂಗ್ಡು ಪ್ರಾಂತ್ಯದಲ್ಲಿ ಹುವಾಂಗ್ ಮಿಂಗ್ ಅವರು ರೆಸ್ಟೋರೆಂಟ್ ಆರಂಭಿಸಿದಾಗ ಉಚಿತ ಊಟದ ಒಂದು ಆಯ್ಕೆಯನ್ನೂ ನೀಡಿದ್ದರು. ಎಂಟು ವರ್ಷಗಳ ಹಿಂದೆ ತಿಂಗಳಿಗೆ ಕೆಲವೇ ಕೆಲ ಉಚಿತ ಊಟಕ್ಕೆ ಆರ್ಡರ್ ಬರುತ್ತಿದ್ದವು. ಆದರೆ, ಕಳೆದ ಎಂಟು ವರ್ಷದಲ್ಲಿ ಉಚಿತ ಊಟಕ್ಕೆ ಬೇಡಿಕೆ ಗಣನೀಯವಾಗಿ ಏರಿದೆ.

ರೆಸ್ಟೋರೆಂಟ್‌ಗಳಿಗೆ ಹೋಗಿ ಉಚಿತ ಊಟ ಕೊಡಿ ಎಂದು ಕೇಳುವುದು ಮುಜುಗರವಾಗಬಹುದು. ಆದರೆ, ಈ ಮುಜುಗರ ತಪ್ಪಿಸಲು ರೆಸ್ಟೋರೆಂಟ್ ಗಳು ಹೊಸ ಉಪಾಯ ಮಾಡಿವೆ. ಪಾನ್ ಕೇಕ್, ಪೆಪ್ಪರ್ ಬೀಫ್ ಸ್ಟಿರ್ ಫ್ರೈ, ಮಸ್ಟರ್ ಗ್ರೀನ್ ಮಿಶ್ರಿತ ಮೀನು ಇತ್ಯಾದಿ ಕೆಲ ಚೀನೀ ತಿನಿಸುಗಳ ಹೆಸರನ್ನು ಕೋಡ್ ವರ್ಡ್ಗಳಾಗಿ ಉಪಯೋಗಿಸಲಾಗುತ್ತಿದೆ.

ರೆಸ್ಟೋರೆಂಟ್ಗಳಲ್ಲಿ ಗ್ರಾಹಕರು ಈ ತಿನಿಸುಗಳ ಹೆಸರು ಹೇಳಿದರೆ, ಅದು ಉಚಿತ ಊಟದ ಅವಶ್ಯಕತೆ ಇದೆ ಎಂಬುದು ಅಲ್ಲಿನ ಸಿಬ್ಬಂದಿಗೆ ಅರಿವಾಗುತ್ತದೆ. ಊಟವನ್ನು ಉಚಿತವಾಗಿ ನೀಡಲಾಗುತ್ತದೆ. ಈ ಸಂಪ್ರದಾಯ ಬಹಳ ದಿನಗಳಿಂದಲೂ ಇದೆ. ಆದರೆ, ಕೋಡ್ ವರ್ಡ್‌ಗಳನ್ನು ಬಳಸುವ ಗ್ರಾಹಕರ ಸಂಖ್ಯೆ ಇತ್ತೀಚೆಗೆ ಏರಿಕೆ ಆಗುತ್ತಿದೆ.
ಅಲ್ಲದೆ, ಹಿರಿಯ ನಾಗರಿಕರ ಕ್ಯಾಂಟೀನ್ಗಳಲ್ಲೂ ಯುವಜನರು ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ನಾಗರಿಕರಿಗೆಂದು ರೂಪಿಸಲಾಗಿರುವ ಕ್ಯಾಂಟೀನ್ಗಳಲ್ಲಿ ರಿಯಾಯಿತಿ ದರದಲ್ಲಿ ಪೌಷ್ಟಿಕಾಂಶಯುತ ಊಟ ಲಭ್ಯ ಇರುತ್ತದೆ. ಇಲ್ಲಿ ಚಿಕ್ಕ ವಯಸ್ಸಿನವರೂ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.
ಹಾಗೆಯೇ, ಮಾಲ್‌ಗಳಲ್ಲಿ ಅಗ್ಗದ ದರದಲ್ಲಿ ಊಟ ಸಿಗುವ ಫೂಡ್ ಕೋರ್ಟ್, ಆಫೀಸ್ ಬಿಲ್ಡಿಂಗ್‌ಗಳ ಅಗ್ಗದ ಕ್ಯಾಂಟೀನ್ಗಳಿರುತ್ತವೆ. ಇಂಥ ಸ್ಥಳಗಳಲ್ಲಿ ಊಟಕ್ಕೆ ಹೋಗುವವರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದೆ ಎಂದು ಎಕನಾಮಿಸ್ಟ್ ಪತ್ರಿಕೆಯ ವರದಿ ವಿವರಿಸಿದೆ.
ಊಟದ ನೆರವು ರೆಸ್ಟೋರೆಂಟ್ಗಳಿಗೆ ಮಾತ್ರ ಸೀಮಿತವಾಗಿಲ್ಲ. ಶಾಂಘೈ, ಶೆಂಜೆನ್ ಮೊದಲಾದ ನಗರಗಳಲ್ಲಿ ಶಾಪಿಂಗ್ ಮಾಲ್‌ಗಳು ಹೊರಗೆ ಲಾಕ್ ಮಾಡದ ಫ್ರೀಜರ್‌ಗಳನ್ನು ಇಟ್ಟಿವೆ. ದಾನಿಗಳು ನೀಡಿದ ಆಹಾರವನ್ನು ಇಲ್ಲಿ ಇಟ್ಟಿರಲಾಗುತ್ತದೆ. ಕೊರಿಯರ್ ಬಾಯ್ಗಳು, ಸ್ವಚ್ಛತಾ ಕರ್ಮಿಗಳು ಮೊದಲಾದವರಿಗೆಂದು ಈ ವ್ಯವಸ್ಥೆ ಮಾಡಲಾಗಿದೆ.

ಸಾಕಷ್ಟು ಖಾಸಗಿ ಸಂಸ್ಥೆಗಳು, ಸಂಘಟನೆಗಳು, ವ್ಯಕ್ತಿಗಳು ತಮ್ಮ ಶಕ್ತ್ಯಾನುಸಾರವಾಗಿ ಆಹಾರವಸ್ತುಗಳನ್ನು ಮನೆ ಬಾಗಿಲುಗಳಿಗೆ ತಲುಪಿಸುವ ಕೆಲಸ ಮಾಡುತ್ತಿವೆ.

Karnataka ರಾಜ್ಯದಲ್ಲಿ ಮುಂದಿನ 5 ದಿನ ತಾಪಮಾನ ಹೆಚ್ಚಳ ನಡುವೆ ಮಳೆ ಮುನ್ಸೂಚನೆ

Expensive grape ಈ ದ್ರಾಕ್ಷಿ ಬಲು ದುಬಾರಿ, ಕೆ.ಜಿ.ಗೆ ಎಂಟು ಲಕ್ಷ ರೂಪಾಯಿ!

Chaithra Achar: ಚೈತ್ರಾ ಆಚಾರ್ ನ್ಯೂ ಫೋಟೋಶೂಟ್ ಲುಕ್ ವೈರಲ್

TAGGED:Increased poverty in China
Share This Article
Facebook Twitter Copy Link Print
Previous Article Muddusose Serial:ʼಬಿಗ್‌ ಬಾಸ್ʼ‌ ಮುಗಿತಿದ್ದಂತೆ ಹೆಣ್ಣು ನೋಡಲು ಹೋದ ತ್ರಿವಿಕ್ರಮ್;‌ ಹುಡುಗಿ ಇವಳೇ ನೋಡಿ
Next Article Today’s almanac ಇಂದಿನ ಪಂಚಾಂಗ, ಮಾಘ ಮಾಸ ಕೃಷ್ಣ ಪಕ್ಷ ಏಕಾದಶಿ, 24-02-2025, ಸೋಮವಾರ

Popular Posts

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?