Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > Today’s almanac ಇಂದಿನ ಪಂಚಾಂಗ, ಮಾಘ ಮಾಸ ಕೃಷ್ಣ ಪಕ್ಷ ಏಕಾದಶಿ, 24-02-2025, ಸೋಮವಾರ
ಈ ದಿನಪಂಚಾಂಗಪ್ರಮುಖ

Today’s almanac ಇಂದಿನ ಪಂಚಾಂಗ, ಮಾಘ ಮಾಸ ಕೃಷ್ಣ ಪಕ್ಷ ಏಕಾದಶಿ, 24-02-2025, ಸೋಮವಾರ

Share
4 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಇಂದಿನ ಪಂಚಾಂಗ

ಮಾಘ ಮಾಸ ಕೃಷ್ಣ ಪಕ್ಷ ಏಕಾದಶಿ

24-02-2025, ಸೋಮವಾರ

# ವಿಜಯ ಏಕಾದಶಿ

# ಗೋಳವಲಕರ ಗುರೂಜಿ ಜಯಂತಿ

# ಕೇಂದ್ರ ಅಬಕಾರಿ ದಿನ

# ವಿಶ್ವ ಮುದ್ರಣ ದಿನ

—

ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕ – 24/02/2025
ತಿಂಗಳು – ಫೆಬ್ರವರಿ
ಬಣ್ಣ – ಬಿಳಿ
ವಾರ – ಸೋಮವಾರ

ತಿಥಿ – ಏಕಾದಶಿ ಈಝ13:44:20
ಪಕ್ಷ. – ಕೃಷ್ಣ
ನಕ್ಷತ್ರ. – ಪೂರ್ವಾಷಾಡ18:58:00
ಯೋಗ – ಸಿದ್ಧಿ 10:04:00
ಕರಣ – ಬಾಳವ 13:44:20
ಕರಣ – ಕೌಳವ 25:21:13*

ತಿಂಗಳು (ಅಮಾವಾಸ್ಯಾಂತ್ಯ) ಮಾಘ
ತಿಂಗಳು (ಹುಣ್ಣಿಮಾಂತ್ಯ). ಫಾಲ್ಗುಣ
ಚಂದ್ರ ರಾಶಿ – ಧನು till 24:54:58*
ಚಂದ್ರ ರಾಶಿ – ಮಕರ from 24:54:58*
ಸೂರ್ಯ ರಾಶಿ – ಕುಂಭ
ಋತು – ಶಿಶಿರ

ಸೂರ್ಯೋದಯ 06:39:13
ಸೂರ್ಯಾಸ್ತ 18:26:29
ಹಗಲಿನ ಅವಧಿ 11:47:16
ರಾತ್ರಿಯ ಅವಧಿ 12:12:13
ಚಂದ್ರಾಸ್ತ 14:58:26
ಚಂದ್ರೋದಯ 28:20:57*

ರಾಹು ಕಾಲ 08:08 – 09:36 ಅಶುಭ
ಯಮಘಂಡ ಕಾಲ 11:04 – 12:33 ಅಶುಭ
ಗುಳಿಕ ಕಾಲ 14:01 – 15:30
ಅಭಿಜಿತ್ 12:09 – 12:56 ಶುಭ
ದುರ್ಮುಹೂರ್ತ 12:56 – 13:44 ಅಶುಭ
ದುರ್ಮುಹೂರ್ತ 15:18- 16:05 ಅಶುಭ

—

ಇಂದಿನ‌ ಮಾತು

ನಿಮ್ಮ ಸಾಧನೆ ಮಾತಾಗಲಿ, ನಿಮ್ಮ ಮಾತುಗಳೇ ಸಾಧನೆಯಾಗಬಾರದು.

—

ಇಂದಿನ ಸುಭಾಷಿತ

ನ ತಥಾಸಿಸ್ತಥಾ ತೀಕ್ಷ್ಣಃ
ಸರ್ಪೋ ವಾ ದುರಧಿಷ್ಠಿತಃ |
ಯಥಾ ಕ್ರೋಧೋ ಹಿ ಜಂತೂನಾಂ
ಶರೀರಸ್ಕೋ ವಿನಾಶಕಃ ||
(ಆಪಸ್ತಂಬಸ್ಕೃತಿ)

ಕಾಣದೆ ತುಳಿಯಲ್ಪಟ್ಟ ಕತ್ತಿಯಾಗಲೀ ಹಾವಾಗಲೀ ಅಪಾಯವನ್ನುಂಟುಮಾಡುತ್ತವೆ.
ಆದರೆ ಅವುಗಳಿಗಿಂತ ಹೆಚ್ಚಾಗಿ ಶರೀರದಲ್ಲಿರುವ ಸಿಟ್ಟು ಪ್ರಾಣಿಗಳಿಗೆ ಹಾನಿಯನ್ನುಂಟು ಮಾಡುತ್ತದೆ.

—

ಇಂದಿ‌ನ ಪದಾರ್ಥ

ಅತಿ ಕ್ಲೇಶ = Great distress
ಅತಿಗಂಧ = Having an overpowering smell

—

ಇಂದಿನ ಓದು

ಯೋಗೋ ಯೋಗವಿದಾಂ ನೇತಾ ಪ್ರಧಾನಪುರುಷೇಶ್ವರಃ |
ನಾರಸಿಂಹವಪುಃ ಶ್ರೀಮಾನ್ ಕೇಶವಃ ಪುರುಷೋತ್ತಮಃ || 3 ||

24) ಪುರುಷೋತ್ತಮಃ

ಪುರುಷೋತ್ತಮ ಎನ್ನುವ ನಾಮದ ಸಂಪೂರ್ಣ ಅರ್ಥವನ್ನು ಭಗವದ್ಗೀತೆಯಲ್ಲಿ ಕಾಣಬಹುದು.

ದ್ವಾವಿಮೌ ಪುರುಷೌ ಲೋಕೇ ಕ್ಷರಸ್ಚಾಕ್ಷರ ಏವ ಚ |
ಕ್ಷರಃ ಸರ್ವಾಣಿ ಭೂತಾನಿ ಕೂಟಸ್ಥೋऽಕ್ಷರ ಉಚ್ಚ್ಯತೇ || (ಅ-೧೫, ಶ್ಲೋ-೧೬)
ಉತ್ತಮಃ ಪುರುಷಸ್ತ್ವನ್ಯಃ ಪರಮಾತ್ಮೇತ್ಯುದಾಹೃತಃ |
ಯೋ ಲೋಕತ್ರಯಮಾವಿಶ್ಯ ಬಿಭರ್ತ್ಯವ್ಯಯ ಈಶ್ವರಃ || (ಅ-೧೫, ಶ್ಲೋ-೧೭)
ಯಸ್ಮಾತ್ ಕ್ಷರಮತೀತೋऽಹಮಕ್ಷರಾದಪಿ ಚೋತ್ತಮಃ |
ಅತೋऽಸ್ಮಿ ಲೊಕೇ ವೇದೇ ಚ ಪ್ರಥಿತಃ ಪುರುಷೋತ್ತಮಃ || (ಅ-೧೫, ಶ್ಲೋ-೧೮)

ಅಂದರೆ ಲೋಕದಲ್ಲಿ ಎರಡು ಬಗೆಯ ಪುರುಷರಿರುತ್ತಾರೆ. ಕ್ಷರಪುರುಷ ಮತ್ತು ಅಕ್ಷರಪುರುಷ. ಬ್ರಹ್ಮಾದಿ ಸಮಸ್ತ ಜೀವರೂ ಕ್ಷರಪುರುಷರು. ಈ ಚರಾಚರದ ಕೂಟವನ್ನು ಕೂಡಿಸಿಟ್ಟ ಚಿತ್ ಪ್ರಕೃತಿಯೇ ಅಕ್ಷರ ಪುರುಷಳೆನಿಸಿದ್ದಾಳೆ-(ಅ-೧೫, ಶ್ಲೋ-೧೭); ಈ ಎರಡಕ್ಕೂ ಮಿಗಿಲಾದವನು ಪುರುಷೋತ್ತಮ. ಅವನನ್ನೇ ಪರಮಾತ್ಮ ಎನ್ನುತ್ತಾರೆ. ಅಳಿವಿರದ ಆ ಪರಮೇಶ್ವರನೇ ಮೂರು ಲೋಕದೊಳಗಿದ್ದು ಸಲಹುತ್ತಾನೆ (ಅ-೧೫, ಶ್ಲೋ-೧೭).ನಾನು ಕ್ಷರವನ್ನು ಮೀರಿ ನಿಂತವನು. ಅಕ್ಷರಕ್ಕಿಂತಲೂ ಹಿರಿಯನು, ಅದಕ್ಕೆಂದೇ ಲೋಕದಲ್ಲೂ, ವೇದದಲ್ಲೂ ‘ಪುರುಷೋತ್ತಮ’ ಎಂದು ಹೆಸರಾಗಿದ್ದೇನೆ (ಅ-೧೫, ಶ್ಲೋ-೧೮).

ಪುರುಷೋತ್ತಮ ಎನ್ನುವ ನಾಮವನ್ನು ಮೂರು-ನಾಲ್ಕು ಬಗೆಯಿಂದ ಪ್ರಯೋಗಿಸುತ್ತಾರೆ. ಉತ್ತಮಪುರುಷ ; ಮಹಾಪುರುಷ; ಪರಮಪುರುಷ ಮತ್ತು ಪುರುಷೋತ್ತಮ. ಎಲ್ಲವೂ ಸುಮಾರಾಗಿ ಒಂದೇ ಅರ್ಥವನ್ನು ಕೊಡುತ್ತವೆ. ಉತ್ತಮಪುರುಷ ಎಂದರೆ ಪುರುಷರಲ್ಲಿ ಉತ್ತಮ. ಕ್ಷರಪುರುಷ ಎಂದರೆ ಕ್ಷರವಾದ ಪುರದಲ್ಲಿ ಇರುವ ಎಲ್ಲಾ ಜೀವರು. ನಾಶವಾಗುವ ಹದಿನೈದು ಬೇಲಿಯಿಂದ ಬದ್ಧನಾದ ಶರೀರದಲ್ಲಿರುವ ಜೀವ ಕ್ಷರಪುರುಷ. ಈಗ ಜೀವರನ್ನು ಬಂಧಿಸಿರುವ ಹದಿನೈದು ಬೇಲಿಗಳನ್ನು ನೋಡೋಣ.

೧) ಶ್ರದ್ಧೆಯ ಬೇಲಿ: ಇದರಲ್ಲಿ ಎರಡು ವಿಧ. ಜೀವ ಸ್ವರೂಪಭೂತವಾದ ಬೇಲಿ (ಕಿತ್ತೆಸೆಯಲು ಆಗದ ಬೇಲಿ) ಹಾಗೂ ಜೀವ ಸ್ವಭಾವದ ಬೇಲಿ(ಕಿತ್ತೆಸೆಯಬೇಕಾದ ಬೇಲಿ). ಮನೆತನ , ಕುಟುಂಬ , ಬೆಳೆದ ವಾತಾವರಣದ ಪ್ರಭಾವದಿಂದ ಬಂದ ಶ್ರದ್ಧೆ, ಪರಿಸರದ ಪ್ರಭಾವ, ಮನೆತನದ ಅನುವಂಷಿಕ(ಜೀನ್ಸ್)ಪ್ರಭಾವದಿಂದ ಬಂದ ಶ್ರದ್ಧೆ, ಇತ್ಯಾದಿಯನ್ನು ಮೀರಿನಿಂತು ನೋಡಿದಾಗ ಮಾತ್ರ ನಿಜವಾದ ಶ್ರದ್ಧೆ ಎಂದರೆ ಏನು ಎಂದು ಅರ್ಥವಾಗುತ್ತದೆ.

೨-೬)ಪಂಚಭೂತಗಳ ಬೇಲಿ: ಮಣ್ಣು-ನೀರು(ಅನ್ನಮಯ ಕೋಶ), ಬೆಂಕಿ-ಗಾಳಿ-ಆಕಾಶ (ಪ್ರಾಣಮಯ ಕೋಶ).

೭)ಇಂದ್ರಿಯಗಳ ಬೇಲಿ: ಕೆಟ್ಟದ್ದನ್ನು ಮಾಡುವ ಐದು ಜ್ಞಾನೇಂದ್ರಿಯಗಳು(ಕಿವಿ, ಮೂಗು, ಕಣ್ಣು, ನಾಲಗೆ ಮತ್ತು ಚರ್ಮ) ಮತ್ತು ಐದು ಕರ್ಮೇಂದ್ರಿಯಗಳು(ಕೈ, ಕಾಲು, ಮುಖ, ಉಪಸ್ಥ ಮತ್ತು ಗುದ).

೮) ಅಂತಃಕರಣದ ಬೇಲಿ: ಕೆಟ್ಟದ್ದನ್ನು ಯೋಚಿಸುವ ಮನಸ್ಸು

೯)ಅನ್ನದ ಬೇಲಿ: ಆಹಾರ.

೧೦)ವೀರ್ಯದ ಬೇಲಿ: ಶಕ್ತಿ .

೧೧-೧೩) ತಪಃ-ಮಂತ್ರಃ-ಕರ್ಮಃ. ಹಾಗಾಗಬೇಕು ಹೀಗಾಗಬೇಕು ಅನ್ನುವ ಆಲೋಚನೆ (ತಿರುಕನ ಕನಸಿನಂತೆ)-ತಪಃ. ತನ್ನ ಕನಸನ್ನು ನನಸು ಮಾಡಲು ಆಡುವ ಮಾತುಗಾರಿಕೆ ಮಂತ್ರಃ.ಮತ್ತು ಅದನ್ನು ಸಾಧಿಸಲು ಮಾಡುವ ಕರ್ಮ.

೧೪)ಲೋಕಗಳು: ಸ್ತಿರ-ಚರ ಸೊತ್ತುಗಳು (ನಾನು ಮಾಡಿದ್ದು, ನನ್ನದು ಅನ್ನುವ ಸೊತ್ತುಗಳು).

೧೫)ನಾಮದ ಬೇಲಿ: Name and fame, ಕೀರ್ತಿ. ಈ ಮೇಲಿನ ನಾಶವಾಗತಕ್ಕಂತಹ ಹದಿನೈದು ಬೇಲಿ ಒಳಗೆ ಸಿಕ್ಕಿ ಹಾಕಿಕೊಂಡಿರುವುದೇ ಹದಿನಾರನೇ ಜೀವ. ಜೀವಿಗೆ ಈ ಮೇಲಿನ ಬೇಲಿ ಎನ್ನುವ ಅಂಗಿ ಹಾಕಿ ಈ ಪ್ರಪಂಚಕ್ಕೆ ಶಿಕ್ಷಣಕ್ಕಾಗಿ ಕಳಿಸಿರುವ ಚಿತ್ತ್ ಪ್ರಕೃತಿ ಲಕ್ಷ್ಮಿ ಹದಿನೇಳನೇ ಅಕ್ಷರಪುರುಷಳು. ಈ ಮೇಲಿನ ಕ್ಷರ-ಅಕ್ಷರಗಳಿಗಿಂತ ಅತೀತನಾದ ಹದಿನೆಂಟನೆಯ ಭಗವಂತ ಪುರುಷೋತ್ತಮ. ಮೇಲಿನ ಬೇಲಿಯಿಂದ ಜೀವಿಯನ್ನು ಬಿಡಿಸಿ ಮುಕ್ತಿಯನ್ನು ಕರುಣಿಸುವವನು ಪುರುಷೋತ್ತಮ!

TAGGED:today's almanac magha masa Krishna Paksha ekadashi monady 24-2-2025
Share This Article
Facebook Twitter Copy Link Print
Previous Article poverty in China ಚೀನಾದಲ್ಲಿ ಹೆಚ್ಚಿತು ಬಡತನ, ಉಚಿತ ಊಟ ಬಯಸುವವರ ಸಂಖ್ಯೆ ಹೆಚ್ಚಳ: ಕೋಡ್ ವರ್ಡ್‌ಗೆ ಹೆಚ್ಚಿದ ಡಿಮಾಂಡ್
Next Article Fraud ಕುಡಿಯುವ ನೀರು ಮಾರಾಟದಲ್ಲಿ ಮಹಾ ವಂಚನೆ ಬಯಲು

Popular Posts

Today Gold Rates In Bangalore| ಬೆಂಗಳೂರು ಚಿನ್ನ-ಬೆಳ್ಳಿ ದರ ಇಂದು: ಚಿನ್ನ ಸ್ಥಿರ, ಬೆಳ್ಳಿ ದರದಲ್ಲಿ ಅಲ್ಪ ಬದಲಾವಣೆ

2 Min Read

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read

You Might Also Like

ಜ್ಯೋತಿಷ್ಯಪ್ರಮುಖ

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read
ದೇಶಪ್ರಮುಖ

Sonum Wangchuk Hunger Protest | ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಮೂರು ಷರತ್ತುಗಳು ?

2 Min Read
ಕರ್ನಾಟಕಪ್ರಮುಖ

Rain Rain ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಯಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read
ಕರ್ನಾಟಕಕೃಷಿದೇಶಪ್ರಮುಖವೈರಲ್

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?