newsics.com
ಹೈದರಾಬಾದ್: ದೇಶದಲ್ಲಿ ಇದೇ ಮೊದಲ ಬಾರಿಗೆ ತೆಲಂಗಾಣ ಪೊಲೀಸರ ಗರುಡ ಪಡೆಗೆ ಹದ್ದು, ಗಿಡುಗ ಸೇರಿದಂತೆ ಇತರೆ ಜಾತಿಯ ಪಕ್ಷಿಗಳನ್ನು ಸೇರಿಸಲಾಗಿದೆ.
ಹದ್ದು, ಗಿಡುಗ ಮತ್ತಿತರ ಪಕ್ಷಿಗಳಿಗೆ ತರಬೇತಿ ನೀಡಿ ಅವುಗಳಿಗೆ ಡ್ರೋನ್‌ಗಳನ್ನು ಬೇಟೆಯಾಡಿ ಹೊಡೆದುರುಳಿಸುವ ತರಬೇತಿಯನ್ನು ನೀಡಲಾಗುತ್ತಿದೆ.
ರಾಜ್ಯದಲ್ಲಿ ವಿಐಪಿ, ವಿವಿಐಪಿ ಭೇಟಿ ವೇಳೆ ಡ್ರೋನ್‌ಗಳಿಂದ ಭದ್ರತೆಗೆ ಸಮಸ್ಯೆ ಉಂಟಾಗುವುದನ್ನು ತಡೆಗಟ್ಟಲು ಹದ್ದುಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದಾರೆ.
ಹೈದರಾಬಾದ್ ನಗರದ ಮೊಯಿನಾಬಾದ್‌ನ ಇಂಟಿಗ್ರೇಟೆಡ್ ಇಂಟೆಲಿಜೆನ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ (ಐಐಟಿಎ) ತರಬೇತಿ ನೀಡಲಾಗುತ್ತಿದೆ. ಡ್ರೋನ್‌ಗಳ ವಿರುದ್ಧದ ಭದ್ರತಾ ಕ್ರಮಗಳು ಮತ್ತು ಕಣ್ಗಾವಲು ಅಗತ್ಯಗಳಿಗಾಗಿ ಇವುಗಳನ್ನು ಬಳಸಲಾಗುತ್ತದೆ.
ರಾಜ್ಯದಲ್ಲಿ ವಿಐಪಿ, ವಿವಿಐಪಿ ಭೇಟಿ ವೇಳೆ ಡ್ರೋನ್ (ಯುಎವಿ) ಹಾರಾಟದಿಂದ ಭದ್ರತಾ ಬೆದರಿಕೆ ಉಂಟಾಗುವ ಸಂದರ್ಭದಲ್ಲಿ ಹದ್ದುಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದಾರೆ.
ದೇಶದಲ್ಲಿ ಮೊದಲ ಬಾರಿಗೆ ಇಂತಹ ಪಡೆಯನ್ನು ಪರಿಚಯಿಸಿದ್ದು ತೆಲಂಗಾಣ. ಜಾಗತಿಕ ಮಟ್ಟದಲ್ಲಿ ಭದ್ರತಾ ಉದ್ದೇಶಗಳಿಗಾಗಿ ಹದ್ದು ಮತ್ತು ಗಿಡುಗಗಳನ್ನು ಸಾಕಣೆ ಮತ್ತು ನಿಯೋಜಿಸುವಲ್ಲಿ ನೆದರ್‌ಲ್ಯಾಂಡ್ಸ್ ಎರಡನೇ ಸ್ಥಾನದಲ್ಲಿದೆ.
ಇಲ್ಲಿ ಒಟ್ಟು 5 ಜಾತಿಯ ಪಕ್ಷಿಗಳಿಗೆ ಡ್ರೋನ್‌ಗಳ ವಿರುದ್ಧ ಹೋರಾಡಲು ಮೊದಲು ಯಶಸ್ವಿಯಾಗಿ ತರಬೇತಿ ನೀಡಲಾಗಿತ್ತು. ತರಬೇತಿ ಪಡೆದ ಪಕ್ಷಿಗಳನ್ನು ಅಗತ್ಯವಿರುವಲ್ಲೆಲ್ಲಾ ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈಗ ಹೆಚ್ಚಿನ ಪಕ್ಷಿಗಳನ್ನು ಗರುಡ ಪಡೆಗೆ ಸೇರಿಸಲಾಗುತ್ತಿದೆ.
ನಾವು ಪಕ್ಷಿಗಳ ಕಾಲಿಗೆ ವಿಶೇಷ ಬಲೆ ಕಟ್ಟುತ್ತೇವೆ. ಈ ಬಲೆಯಲ್ಲಿ ಡ್ರೋನ್‌ನ ರೆಕ್ಕೆಗಳು ಸಿಕ್ಕಿಹಾಕಿಕೊಳ್ಳುತ್ತವೆ. ನಂತರ, ಈ ಪಕ್ಷಿಗಳು ಡ್ರೋನ್ ಅನ್ನು ನಿಷ್ಕ್ರಿಯಗೊಳಿಸಲು ಜನವಸತಿಯಿಲ್ಲದ ಸ್ಥಳಕ್ಕೆ ಕೊಂಡೊಯ್ಯುತ್ತವೆ. ಹೀಗೆ ಡ್ರೋನ್ ಬೇಟೆಗೆ ಪಕ್ಷಿಗಳನ್ನು ಬಳಸಲಾಗುತ್ತದೆ ಎಂದು ಪೊಲೀಸರು ಹೇಳಿದರು.
ತರಬೇತಿ ವೇಳೆ ಪಕ್ಷಿಗಳಿಗೆ ಗಾಯಗಳಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಪಕ್ಷಿಗಳ ಕಾಲಿಗೆ ಸಣ್ಣ ಹೈ ಡೆಫಿನಿಷನ್ ಕ್ಯಾಮೆರಾ ಅಳವಡಿಸಿ ಅದನ್ನು ಲ್ಯಾಪ್‌ಟಾಪ್‌ಗೆ ಸಂಪರ್ಕಿಸಿ ಕಣ್ಗಾವಲು ನಡೆಸಲಾಗುತ್ತದೆ. ಹದ್ದುಗಳನ್ನು ಈ ಕೆಲಸಕ್ಕೆ ನಿಯೋಜಿಸಲಾಗಿದೆ. ಇದರಿಂದ ಹೈದರಾಬಾದ್‌ನಲ್ಲಿ ವಿವಿಐಪಿ ಭದ್ರತೆಗಳಿಗಾಗಿ ಎತ್ತರ ಪ್ರದೇಶದಲ್ಲಿ ಕಾವಲು ಕುಳಿತು ವೀಕ್ಷಣೆ ಮಾಡುವುದರ ಅಗತ್ಯ ಕಡಿಮೆ ಆಗಲಿದೆ. ಹದ್ದುಗಳು ಉತ್ತಮವಾಗಿ ತರಬೇತಿಯನ್ನು ಪಡೆದುಕೊಂಡಿದ್ದು, ಪೊಲೀಸ್ ಇಲಾಖೆಗೆ ನೆರವಾಗುತ್ತಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
https://www.instagram.com/reel/DFc6HjuzO7d/?utm_source=ig_web_button_share_sheet
Relstionship ಗಂಡ-ಹೆಂಡತಿ ಸಂಬಂಧದಲ್ಲಿ ಬಿರುಕು ಇದ್ದರೆ ಈ ರೀತಿ ಮಾಡಿ