newsics.com
ನವದೆಹಲಿ: ವಿವಿಧ ರೈಲು ಸೇವೆಗಳನ್ನು ಒಂದೇ ಆ್ಯಪ್‌ನಲ್ಲಿ ನೀಡುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಸಚಿವಾಲಯವು ತನ್ನ ಹೊಸ ಸೂಪರ್ ಆ್ಯಪ್ ಸ್ವಾರೈಲ್ (SwaRail) ಬಿಡುಗಡೆ ಮಾಡಿದೆ.
ಇದು ಆಲ್ ಇನ್ ಒನ್ ಆ್ಯಪ್. ವಿವಿಧ ರೈಲು ಸೇವೆಗಳನ್ನು ಈ ಒಂದೇ ಆ್ಯಪ್‌ನಲ್ಲಿ ಪಡೆಯಬಹುದು. ಈ ಮೊಬೈಲ್ ಅಪ್ಲಿಕೇಷನ್‌ನ್ನು ಸೆಂಟರ್ ಫಾರ್ ರೈಲ್ವೆ ಇನ್‌ಫಾರ್ಮೆಷನ್ ಸಿಸ್ಟಮ್ಸ್ (ಸಿಆರ್‌ಐಎಸ್) ಅಭಿವೃದ್ಧಿಪಡಿಸಿದೆ.
ಈ ಮೊಬೈಲ್ ಅಪ್ಲಿಕೇಷನ್ ಆ್ಯಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ ಅರ್ಲಿ ಆಕ್ಸೆಸ್-ಆರಂಭಿಕ ಪ್ರವೇಶ ನೋಂದಾಯಿಸಿರುವ ಬಳಕೆದಾರರಿಗೆ ಬೀಟಾ ವರ್ಷನ್‌ನಲ್ಲಿ ಲಭ್ಯವಿರಲಿದೆ. ಕ್ರಮೇಣ ಎಲ್ಲರಿಗೂ ಲಭ್ಯವಿರಲಿದೆ.
ಸ್ವಾರೈಲ್ ಫೀಚರ್ಸ್
ಈಗ ಪ್ರತ್ಯೇಕ ಅಪ್ಲಿಕೇಶನ್‌ಗಳಲ್ಲಿ ಲಭ್ಯವಿರುವ ಭಾರತೀಯ ರೈಲ್ವೆ ಸೇವೆಗಳನ್ನು ಈ ಸೂಪರ್ ಅಪ್ಲಿಕೇಷನ್‌ನಲ್ಲಿ ಒಟ್ಟಿಗೇ ಪಡೆಯಬಹುದು.
- ರೈಲು ಟಿಕೆಟ್ ಬುಕಿಂಗ್
- ಕಾಯ್ದಿರಿಸದ ಟಿಕೆಟ್ (ಅನ್‌ರಿಸರ್ವಡ್ ಟಿಕೆಟ್) ಮತ್ತು ಪ್ಲಾಟ್‌ಫಾರ್ಮ್ ಟಿಕೆಟ್ ಬುಕಿಂಗ್(ಯುಟಿಎಸ್)
- ಪಾರ್ಸೆಲ್ ಮತ್ತು ಸರಕು ವಿಚಾರಣೆ
- ರೈಲು ಮತ್ತು ಪಿಎನ್ ಸ್ಟೇಟಸ್ ಪರಿಶೀಲನೆ
- ಆಹಾರ ಆರ್ಡರ್ ಮಾಡಲು
- ದೂರು ನೀಡಲು
ಟ್ರೇನ್‌ಗಳಲ್ಲಿ ಪ್ರಯಾಣಿಸುವವರಿಗೆ ರೈಲು ಟಿಕೆಟ್ ಬುಕ್ಕಿಂಗ್ ಮಾಡಲು ಕಾರ್ಗೊ ಬುಕ್ಕಿಂಗ್ ಮಾಡಲು, ಫುಡ್ ಆರ್ಡರ್ ಮಾಡಲು, ರೈಲ್ವೆ ಪ್ಲಾಟ್ ಫಾರ್ಮ್ ಪಾಸ್ ಪಡೆಯಲು, ರೈಲು ಎಲ್ಲಿಗೆ ತಲುಪಿದೆ ಎಂದು ಟ್ರ್ಯಾಕ್ ಮಾಡುವುದು ಸೇರಿದಂತೆ ಹಲವು ಫೀಚರ್‌ಗಳನ್ನು ಈ ಆ್ಯಪ್ ಹೊಂದಿರಲಿದೆ.
ಐಆರ್‌ಸಿಟಿಸಿ ಮತ್ತು ಸಿಆರ್‌ಐಎಸ್ ಎರಡೂ ಜತೆಯಾಗಿ ಕಾರ್ಯನಿರ್ವಹಿಸುವುದರಿಂದ ರೈಲ್ವೆ ಪ್ರಯಾಣಿಕರಿಗೆ ಸಾಕಷ್ಟು ಪ್ರಯೋಜನ ಸಿಗಲಿದೆ. ಸಿಆರ್‌ಐಎಸ್ ಎನ್ನುವುದು ಭಾರತಯ ರೈಲ್ವೆಗೆ ಸಾಫ್ಟ್‌ವೇರ್ ಸೇವೆ ನೀಡುವ ಸಂಸ್ಥೆಯಾಗಿದೆ. ಇದೇ ಸಂಸ್ಥೆ ಈ ಸೂಪರ್ ಆ್ಯಪ್ ಅಭಿವೃದ್ಧಿಪಡಿಸಿದೆ.
ಹೀಗೆ ಸ್ವಾರೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ:
ಸ್ವಾರೈಲ್ ಅಪ್ಲಿಕೇಶನ್ ಪ್ರಸ್ತುತ ಬೀಟಾ ವರ್ಷನ್ ಅಲ್ಲದೆ ಮತ್ತು ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಿಗಾಗಿ ಕ್ರಮವಾಗಿ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಆಪ್ ಸ್ಟೋರ್ ಮೂಲಕ ಡೌನ್ಲೋಡ್ ಮಾಡಬಹುದು. ಆ್ಯಪ್‌ನ ಬೀಟಾ ವರ್ಷನ್ ಬಳಸುವಂತೆ ಹಾಗೂ ಸಲಹೆ ಸೂಚನೆಗಳನ್ನು ನೀಡುವಂತೆ ರೈಲ್ವೆ ಸಚಿವಾಲಯ ಕೋರಿದೆ.
ನೀವು ನಿಮ್ಮ ಮೊಬೈಲ್ನಲ್ಲಿ ಅಪ್ಲಿಕೇಶನ್ ಸ್ಟೋರ್ ಗೆ ಹೋಗಿ “SwaRail” ಆ್ಯಪ್ ಸರ್ಚ್ ಮಾಡಬಹುದು. ಸಿಆರ್‌ಐಎಸ್ ಶೇರ್ ಅಪ್ಲಿಕೇಶನ್ ಹುಡುಕಿ ಮತ್ತು ಅದನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ.
ಈಗಾಗಲೇ ಐಆರ್‌ಸಿಟಿಸಿ ರೈಲ್ ಕನೆಕ್ಟ್ ಅಥವಾ ಯುಟಿಎಸ್ ಮೊಬೈಲ್ ಅಪ್ಲಿಕೇಶನ್ ಬಳಸುತ್ತಿರುವ ಗ್ರಾಹಕರು ತಮ್ಮ ಲಾಗಿನ್ ಕ್ರೆಡೆನ್ಷಿಯಲ್ಸ್ ಬಳಸಿ ನೇರವಾಗಿ ಲಾಗ್‌ಇನ್ ಆಗಬಹುದು. ಈ ಎರಡೂ ಅಪ್ಲಿಕೇಶನ್‌ಗಳಲ್ಲಿ ನೀವು ಖಾತೆಯನ್ನು ಹೊಂದಿಲ್ಲದಿದ್ದರೆ, ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸುವ ಮೂಲಕ ನೀವು ಹೊಸ ಬಳಕೆದಾರರಾಗಿ ನೋಂದಾಯಿಸಿಕೊಳ್ಳಬಹುದು.
ಮೊದಲ ಬಾರಿಗೆ ಲಾಗಿನ್ ಮಾಡಿದಾಗ, ಟಿಕೆಟ್ ಬುಕಿಂಗ್‌ಗೆ ಅನುಕೂಲವಾಗುವಂತೆ ಪ್ರತಿ ಬಳಕೆದಾರರಿಗೆ ಆರ್-ವ್ಯಾಲೆಟ್ ಅನ್ನು ರಚಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ವಿವರಿಸಿದೆ. ನೀವು ಈಗಾಗಲೇ ಆರ್-ವ್ಯಾಲೆಟ್ ಹೊಂದಿದ್ದರೆ, ಅದನ್ನು ಸ್ವಯಂಚಾಲಿತವಾಗಿ ಇದಕ್ಕೆ ಲಿಂಕ್ ಮಾಡಲಾಗುತ್ತದೆ.
ನೀವು ಲಾಗ್ ಇನ್ ಪ್ರಕ್ರಿಯೆಯನ್ನು ಸ್ಕಿಪ್ ಮಾಡಿ ಮೊಬೈಲ್ ನಂಬರ್ ಮತ್ತು ಒಟಿಪಿ ಮೂಲಕ ಗೆಸ್ಟ್ ಯೂಸರ್ ಲಾಗ್ ಇನ್ ಮಾಡಬಹುದು. ಈ ಮೋಡ್ನಲ್ಲಿ ಸುಲಭವಾಗಿ ಎನ್‌ಕ್ವೈರಿಗಳನ್ನು ಮಾಡಬಹುದು.
ಸಿಂಗಲ್ ಸೈನ್-ಆನ್:
ಬಳಕೆದಾರರು ಎಲ್ಲಾ ಸೇವೆಗಳನ್ನು ಒಂದೇ ಲಾಗಿನ್ನೊಂದಿಗೆ ಬಳಸಬಹುದು. ಇದು ಅಸ್ತಿತ್ವದಲ್ಲಿರುವ ಭಾರತೀಯ ರೈಲ್ವೆ ಅಪ್ಲಿಕೇಶನ್ಗಳಾದ ಐಆರ್ಸಿಟಿಸಿ ರೈಲ್ ಕನೆಕ್ಟ್ ಮತ್ತು ಯುಟಿಎಸ್ ಮೊಬೈಲ್ ಅಪ್ಲಿಕೇಶನ್ಗಳಲ್ಲಿಯೂ ಕಾರ್ಯನಿರ್ವಹಿಸುತ್ತದೆ.
ಆಲ್-ಇನ್-ಒನ್ ಅಪ್ಲಿಕೇಶನ್: ಪ್ರಸ್ತುತ, ಕಾಯ್ದಿರಿಸಿದ ಮತ್ತು ಕಾಯ್ದಿರಿಸದ ಬುಕಿಂಗ್ ಗಾಗಿ ವಿಭಿನ್ನ ಅಪ್ಲಿಕೇಶನ್ಗಳನ್ನು ಬಳಸಬೇಕಾಗುತ್ತದೆ ಮತ್ತು ರೈಲು ಚಲನೆ ಮತ್ತು ವೇಳಾಪಟ್ಟಿಗಳನ್ನು ಪರಿಶೀಲಿಸಲು ಮತ್ತೊಂದು ಅಪ್ಲಿಕೇಶನ್ ಬೇಕಾಗುತ್ತದೆ. ಆದರೆ ಈಗ ಈ ಎಲ್ಲಾ ಸೇವೆಗಳು ಸ್ವರೈಲ್ ಏಕೀಕೃತ ಅಪ್ಲಿಕೇಶನ್ನಲ್ಲಿಯೇ ಲಭ್ಯವಾಗಲಿವೆ.
ಸುಲಭ ಆನ್ ಬೋರ್ಡಿಂಗ್ / ಸೈನ್-ಅಪ್:
ಬಳಕೆದಾರರು ತಮ್ಮ ಅಸ್ತಿತ್ವದಲ್ಲಿರುವ ರೈಲ್ ಕನೆಕ್ಟ್ ಅಥವಾ ಯುಟಿಎಸ್ ಅಪ್ಲಿಕೇಶನ್ ಲಾಗಿನ್ ಮಾಹಿತಿಗಳನ್ನು ಬಳಸಿಕೊಂಡು ಸೂಪರ್ ಅಪ್ಲಿಕೇಶನ್ಗೆ ಸೈನ್ ಅಪ್ ಮಾಡಬಹುದು.
ಸುಲಭ ಲಾಗಿನ್:
ಬಳಕೆದಾರರ ಅನುಭವವನ್ನು ಸುಧಾರಿಸಲು ಬಹು ಲಾಗಿನ್ ಆಯ್ಕೆಗಳನ್ನು ಒದಗಿಸಲಾಗಿದೆ. ಆರಂಭಿಕ ಲಾಗಿನ್ ನಂತರ, ಎಂ-ಪಿನ್ ಅಥವಾ ಬಯೋಮೆಟ್ರಿಕ್ ದೃಢೀಕರಣವನ್ನು ಬಳಸಿಕೊಂಡು ಅಪ್ಲಿಕೇಶನ್ ಅನ್ನು ಬಳಸಬಹುದು.
parvati nair engagement ಉದ್ಯಮಿ ಮದುವೆಯಾಗಲಿದ್ದಾರೆ ನಟಿ ಪಾರ್ವತಿ ನಾಯರ್
ಬರೀ ಮಲಗೋದಷ್ಟೇ ಕೆಲ್ಸ : ಇಲ್ಲಿ ನಿದ್ರೆ ಮಾಡಿದ್ರೆ ಡಾಲರ್ ಲೆಕ್ಕದಲ್ಲಿ ಸಂಬಳ
ಆತ್ಮಹತ್ಯೆಗೆ ಶರಣಾದ ಬೆಂಗಳೂರು ವಿವಿ ವಿದ್ಯಾರ್ಥಿನಿ…. BENGALURU UNIVERSITY