newsics.com
ಹಾಸನ: ನಗರ ಹೊರವಲಯದ ಗೊರೂರು ರಸ್ತೆಯ ಹನುಮಂತಪುರದಲ್ಲಿ ಇಂಡಿಯಾ ಒನ್ ಎಟಿಎಂ ಮಷೀನನ್ನೇ ಕಳ್ಳರು ಹೊತ್ತೊಯ್ದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ರಾಜ್ಯ ಹೆದ್ದಾರಿ ಬದಿಯಲ್ಲೇ ಇರುವ ಎಟಿಎಂ ಮಷೀನ್ ಕಾಣೆಯಾಗಿರುವುದು ಬುಧವಾರ ಬೆಳಗ್ಗೆ ಗಮನಕ್ಕೆ ಬಂದಿದೆ. ಪರಿಶೀಲಿಸಿದಾಗ ಕಳ್ಳರು ఎటిఎం ಮಷೀನ್ ಹೊತ್ತೊಯ್ದಿರುವುದು ದೃಢಪಟ್ಟಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಎಟಿಎಂ ಮಷಿನ್‌ನಲ್ಲಿ ಸುಮಾರು ಒಂದು ಲಕ್ಷ ರೂ. ಹಣ ಮಾತ್ರವೇ ಇತ್ತು ಎನ್ನಲಾಗುತ್ತಿದ್ದು, ಇನ್ನೂ ಖಚಿತ ಮಾಹಿತಿ ತಿಳಿಯಬೇಕಿದೆ.
Maha Kumbh Mela ಮಹಾಕುಂಭಮೇಳದಲ್ಲಿ ಕಾಲ್ತುಳಿತ ದುರಂತ : ತುರ್ತು ಸಭೆ ಕರೆದ ಸಿಎಂ ಯೋಗಿ
Kingfisher Beer Ban ತೆಲಂಗಾಣದಲ್ಲಿ ಕಿಂಗ್‌ಫಿಷರ್ ಬಿಯರ್ ನಿಷೇಧ: ಕಾರಣವೇನು?