newsics.com
ಅಂಕೋಲಾ(ಉತ್ತರ ಕನ್ನಡ): ಅಂಕೋಲಾದ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಿ, ಖಾತೆದಾರರೊಬ್ಬರ 33 ಲಕ್ಷ ರೂ. ದೋಚಿದ ಘಟನೆ ಮಂಗಳವಾಹಣರ ಘ ಬಂದಿದೆ.
ಬ್ಯಾಂಕ್‌ನ ಕೇಂದ್ರ ಕಚೇರಿಯಲ್ಲಿ RTGS ಮೂಲಕ ಬೇರೆಯವರ ಖಾತೆದಾರರಿಗೆ ಹೋಗಬೇಕಿದ್ದ ಹಣವನ್ನು ಸೈಬರ್ ಕಳ್ಳರು ಶಾಖೆಯ ಅಕೌಂಟ್ ಹ್ಯಾಕ್ ಮಾಡುವ ಮೂಲಕ 33,42,845 ಲಕ್ಷ ಹಣವನ್ನು ವಂಚಿಸಿ ಕದ್ದಿದ್ದಾರೆ.
ಕಾರವಾರದ ಸೈಬರ್ ಠಾಣೆ (CN) ಯಲ್ಲಿ ಅಂಕೋಲಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ರವೀಂದ್ರ ಪಾಂಡುರಂಗ ವೈದ್ಯ ದೂರು ನೀಡಿದ್ದಾರೆ.
ಅಂಕೋಲಾ ಕೇಂದ್ರ ಕಚೇರಿಯಲ್ಲಿ ಖಾತೆದಾರರಾದ ಮೀನಾಕ್ಷಿ ಕೃಷ್ಣಗೌಡ ಅವರು ವ್ಯವಸಾಯ ಸೇವಾ ಸಹಕಾರಿ ಸಂಘ, ಮೆಂಕಟೇಶ್ವರ ಗ್ಯಾಸ್ ಸೆಂಟರ್ ಹಾಗೂ ಸವಿತಾ ವೆಂಕಟರಮಣ ನಾಯ್ಕ ಖಾತೆಗೆ ಹೋಗದೇ ಹ್ಯಾಕ್ ಆಗಿದ್ದು ಸೈಬರ್ ಕಳ್ಳರ ಖಾತೆಗೆ ಜಮ ಆಗಿದೆ ಎಂದು ದೂರು ನೀಡಲಾಗಿದೆ.
ಯಾರ ಖಾತೆಗೆ ಹಣ ಜಮಾ ಆಗಿದೆ ಎಂಬುದು ಗೊತ್ತಾಗಿಲ್ಲ. ಜನವರಿ 24 ರಿಂದ 27ರ ನಡುವೆ ಈ ಅಕ್ರಮ ನಡೆದಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
Kingfisher Beer Ban ತೆಲಂಗಾಣದಲ್ಲಿ ಕಿಂಗ್‌ಫಿಷರ್ ಬಿಯರ್ ನಿಷೇಧ: ಕಾರಣವೇನು?
Rainfall info ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಫೆ.2ರಿಂದ ರಾಜ್ಯದ ಹಲವೆಡೆ ಮಳೆ
suspected car found near Ankola| ಅಂಕೋಲಾ ಬಳಿ ಪತ್ತೆಯಾದ ಶಂಕಿತ ಕಾರಲ್ಲಿ 1 ಕೋಟಿಗೂ ಹೆಚ್ಚು ಹಣ!