newsics.com
ಅಂಕೋಲಾ: ತಾಲೂಕಿನ ರಾಮನಗುಳಿ ಬಳಿ ನಿರ್ಜನ ಪ್ರದೇಶದಲ್ಲಿ ಮಂಗಳವಾರ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಕಾರಿನಲ್ಲಿ 1 ಕೋಟಿಗೂ ಹೆಚ್ಚು ಹಣ ಪತ್ತೆಯಾಗಿದ್ದು, ಇದು ಎಲ್ಲಿಂದ ಬಂದ ಹಣ ಎನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ.
ಅಂಕೋಲಾ ಪೊಲೀಸ್ ಠಾಣೆಯಲ್ಲಿ ಮಂಗಳವಾರ ತಡರಾತ್ರಿವರೆಗೂ ಹಣ ಎಣಿಕೆ ಕಾರ್ಯ ಸಾಗಿದ್ದು, ಈ ಕಾರನ್ನು ಇಲ್ಲಿ ಬಿಟ್ಟು ಹೋದವರು ಯಾರು ಮತ್ತು ಹಣ ಎಲ್ಲಿಯದು ಎನ್ನುವುದು ತನಿಖೆಯಿಂದ ತಿಳಿದುಬರಬೇಕಿದೆ.
ಕೆಎ 51 ಎಮ್.ಬಿ 9634 ನಂಬರ್ ಪ್ಲೇಟಿನ ಅನುಮಾನಾಸ್ಪದ ಕಾರೊಂದು ಮಂಗಳವಾರ ಬೆಳಗ್ಗೆ ವಿಚಿತ್ರ ಸ್ಥಿತಿಯಲ್ಲಿ ಕಂಡುಬಂದಿತ್ತು.
ಕಾರಿನ ರಿಜಿಸ್ಟ್ರೇಷನ್ ನಂಬರ್ನ್ನು ಪರಿಶೀಲಿಸಿದಾಗ ಆಲ್ಟ್ರೋಜ್ ಕಾರು ಎಂದು ತೋರಿಸುತ್ತಿದ್ದು, ಮಡಿಕೇರಿ ಆರ್.ಟಿ.ಒ. ಪಾಸಿಂಗ್ ಹೊಂದಿದೆ. ಅಸಲಿಗೆ ಇದು ಕ್ರೇಟಾ ಕಾರಾಗಿದ್ದು, ಇದು ಹಲವು ಸಂಶಯಗಳಿಗೆ ಕಾರಣವಾಗಿದೆ.
ಈ ಕಾರಿನ ಬಾನೆಟ್ ಹಾಗೂ ಡಿಕ್ಕಿ ತೆರೆದ ಸ್ಥಿತಿಯಲ್ಲಿದ್ದು, ಕಾರಿನ ಸೀಟ್ ಕಿತ್ತು ಹೊರಗೆ ಬಿದ್ದಿರುವ ಸ್ಥಿತಿಯಲ್ಲಿ, ಕಿಟಕಿ ಗಾಜುಗಳು ಒಡೆದ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಸೋಮವಾರ ಮಧ್ಯಾಹ್ನದಿಂದ ವಾರಸುದಾರರಿಲ್ಲದೆ ಕಾರು ನಿಂತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
Stamped in mahakumbh ಮಹಾ ಕುಂಭದಲ್ಲಿ ಕಾಲ್ತುಳಿತ: 15ಕ್ಕೂ ಹೆಚ್ಚು ಭಕ್ತರ ಸಾವು, ಹಲವರಿಗೆ ಗಾಯ