newsics.com
ಬಿಗ್ ಬಾಸ್ 11 ಸೀಸನ್ ಗ್ರಾಂಡ್ ಫಿನಾಲೆ ನೆನ್ನೆ ಅಷ್ಟೇ ಮುಗಿದಿದೆ. ಈ ಫಿನಾಲೆಯಲ್ಲಿ ಕಿಚ್ಚ ಸುದೀಪ್ ತಮ್ಮ ಕೈಯಲ್ಲಿರುವ ಬ್ರಾಸ್ಲೆಟನ್ನು ಬಾಲಕನಿಗೆ ನೀಡಿದ್ದಾರೆ.
ಹೌದು, ಬಿಗ್ ಬಾಸ್ 11 ಸುದೀಪ್ ನಿರೂಪಣೆಯ ಕೊನೆಯ ಸೀಜನ್ ಆಗಿರುವ ಕಾರಣ ವಿಶೇಷ ನೃತ್ಯವನ್ನು ಕಿಚ್ಚನಿಗೆ ಸಮರ್ಪಿಸಲಾಯಿತು. ಇನ್ನು ವಿಕಟಕವಿ ಯೋಗರಾಜ್ ಭಟ್ ಬರೆದಿರುವ ಹಾಡಿಗೆ ಜೀ ಕನ್ನಡದ ಡಾನ್ಸ್ ಕರ್ನಾಟಕ ಡಾನ್ಸ್ ಖ್ಯಾತಿಯ ಯುವನ್ ಹೆಜ್ಜೆ ಹಾಕಿದ್ದಾನೆ.
ತಾಯಿಯನ್ನು ಕಳೆದುಕೊಂಡಿರುವ ಸುದೀಪ್‌ಗೆ ಸ್ವತಃ ತಾಯಿಯೇ ಸಾಂತ್ವನ ಹೇಳುವಂತಿದ್ದ ಈ ಡಾನ್ಸ್ ನೋಡುತ್ತಿದ್ದಂತೆ ಕಿಚ್ಚ ಸುದೀಪ್ ಭಾವುಕರಾಗಿದ್ದರು. ಬಳಿಕ ತಮ್ಮ ಪಾತ್ರವನ್ನು ನೃತ್ಯದ ಮೂಲಕ ಪ್ರದರ್ಶಿಸಿದ ಪುಟ್ಟ ಬಾಲಕ ಯುವನ್‌ಅನ್ನು ವೇದಿಕೆ ಮೇಲೆ ಕರೆದು ತಮ್ಮ ಕೈಯಲ್ಲಿದ್ದ ಬ್ರೇಸ್‌ಲೆಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
ಸದ್ಯ ಯುವನ್‌ಗೆ ಕಿಚ್ಚ ಸುದೀಪ್ ನೀಡಿರುವ ಉಡುಗೊರೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೂರಾರು ಪೋಸ್ಟ್‌ಗಳನ್ನು ಹಾಕಲಾಗುತ್ತಿದ್ದು, ಬ್ರೇಸ್‌ಲೆಟ್ ಬೆಲೆ ಕೇಳಿ ಅನೇಕರು ದಂಗಾಗಿದ್ದಾರೆ. ಯಾಕೆಂದರೆ ಸುದೀಪ್ ಯುವನ್‌ಗೆ ಉಡುಗೊರೆಯಾಗಿ ನೀಡಿದ ಬ್ರೇಸ್‌ಲೆಟ್ ಬೆಲೆ ಬರೋಬ್ಬರಿ ಮೂವತ್ತು ಲಕ್ಷ ರೂಪಾಯಿಯಂತೆ. ಆ ಬ್ರೇಸ್‌ಲೆಟ್ ಅನ್ನು ಪ್ಲಾಟಿನಮ್ ಹಾಗೂ ವಜ್ರದ ಹರಳುಗಳಿಂದ ಮಾಡಲಾಗಿತ್ತು ಎನ್ನುವ ವ್ಯಕ್ತಿಯ ಪೋಸ್ಟ್‌ವೊಂದು ಸದ್ಯ ಸಖತ್ ವೈರಲ್ ಆಗುತ್ತಿದೆ.
AI Deepseek ಅಮೆರಿಕವನ್ನೇ ಬೆಚ್ಚಿಬೀಳಿಸಿದ ಚೀನಾದ ಎಐ ಡೀಪ್‌ಸೀಕ್, ಏನಿದರ ವಿಶೇಷ? ಯಾಕಿಷ್ಟು ಆತಂಕ?