Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > AI Deepseek ಅಮೆರಿಕವನ್ನೇ ಬೆಚ್ಚಿಬೀಳಿಸಿದ ಚೀನಾದ ಎಐ ಡೀಪ್‌ಸೀಕ್, ಏನಿದರ ವಿಶೇಷ? ಯಾಕಿಷ್ಟು ಆತಂಕ?
ಅನಾವರಣದೇಶಪ್ರಮುಖವಿದೇಶ

AI Deepseek ಅಮೆರಿಕವನ್ನೇ ಬೆಚ್ಚಿಬೀಳಿಸಿದ ಚೀನಾದ ಎಐ ಡೀಪ್‌ಸೀಕ್, ಏನಿದರ ವಿಶೇಷ? ಯಾಕಿಷ್ಟು ಆತಂಕ?

Share
3 Min Read
SHARE

newsics.com

ನವದೆಹಲಿ: ಕೃತಕ ಬುದ್ಧಿಮತ್ತೆ (ಆರ್ಟಿಫೀಶಿಯಲ್ ಇಂಟಲಿಜೆನ್ಸ್) ಇಡೀ ಜಗತ್ತನ್ನೇ ಆವರಿಸಿಕೊಳ್ಳುತ್ತಿದೆ. ಚಾಟ್‌ಜಿಪಿಟಿ ಮೂಲಕ ಅಮೆರಿಕದ ಎಐ ತಂತ್ರಜ್ಞಾನ ವಿಶ್ವದಲ್ಲೇ ಬಳಕೆಯಾಗುತ್ತಿದೆ. ಇದೇ ವೇಳೆ ಚೀನಾದ ಎಐ ಡೀಪ್‌ಸೀಕ್ ಆ್ಯಪ್ ಅಮೆರಿಕದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ.

ಗೂಗಲ್‌ನ ಓಪನ್ ಎಐ, ಜೆಮಿನಿ ಸೇರಿದಂತೆ ಹಲವು ಸೇವೆಗಳು ಲಭ್ಯವಿವೆ. ಇದಕ್ಕೆ ಅಮೆರಿಕ ಕಂಪನಿಗಳು ದೊಡ್ಡ ಮೊತ್ತದ ಶುಲ್ಕ‌ ವಿಧಿಸುತ್ತಿವೆ. ಆದರೆ ಕೇವಲ ಒಂದೇ ತಿಂಗಳಲ್ಲಿ ಆರ್ಟೀಫೀಶಿಯಲ್ ಇಂಟಲಿಜೆನ್ಸ್ ಅಭಿವೃದ್ಧಿಪಡಿಸಿ, ಚಾಟ್‍‌ಜಿಪಿಟಿ ಸೇರಿದಂತೆ ಇತರ ಪ್ರತಿಸ್ಪರ್ಧಿಗಳಿಗಿಂತ ಉತ್ತಮ ಫಲಿತಾಂಶ ನೀಡಬಲ್ಲ ಎಐ ಡೀಪ್‌ಸೀಕ್‌ ಆ್ಯಪ್‌ನ್ನು ಚೀನಾ ಬಿಡುಗಡೆ ಮಾಡಿದೆ. ಅತಿ ಕಡಿಮೆ ವೆಚ್ಚದಲ್ಲಿ ಅಂದರೆ ಕೇವಲ ಆರು ಮಿಲಿಯನ್ ಡಾಲರ್ ವೆಚ್ಚದಲ್ಲಿ ಈ ಎಐ ಸರ್ವೀಸ್ ಅಭಿವೃದ್ಧಿ ಮಾಡಲಾಗಿದೆ.

ಇಷ್ಟೇ ಅಲ್ಲ, ಉಚಿತ ಡೌನ್ಲೋಡ್ ಕೂಡ ನೀಡಿದೆ. ಇದು ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಭಾರಿ ಬಿರುಗಾಳಿ ಸೃಷ್ಟಿಸಿದೆ.

ಡೀಪ್‌ಸೀಕ್ ಲಾಂಚ್ ಬೆನ್ನಲ್ಲೇ ಅಮೆರಿಕ ಷೇರು ಮಾರುಕಟ್ಟೆಯಲ್ಲಿ NVIDIA ಕಂಪನಿಯ ಷೇರುಗಳು ಶೇಕಡಾ 17ರಷ್ಟು ಕುಸಿತ ಕಂಡಿವೆ. ಬಹುತೇಕ ಟೆಕ್ ಕಂಪನಿಗಳ ಷೇರುಗಳು ಕುಸಿತವಾಗಿವೆ.

ಚೀನಾದ ಡೀಪ್‌ಸೀಕ್ ಎಐ ಅಮೆರಿಕದ ಒಪನ್ ಎಐನ ಚಾಟ್‌ಜಿಪಿಟಿಗಿಂತ ಹೆಚ್ಚು ನಿಖರತೆ, ಉತ್ತಮ ಫಲಿತಾಂಶ ನೀಡುತ್ತದೆ. ಇಷ್ಟು ದಿನ ಅಮೆರಿಕ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಚಿಪ್‌ಗೆ ಅಭಿವೃದ್ಧಿಗೆ ವರ್ಷಾನುಗಟ್ಟಲೇ ಸಮಯ ತೆಗೆದುಕೊಳ್ಳುತ್ತಿತ್ತು. ಬಳಿಕ ಸಾವಿರಾರು ಕೋಟಿ ರೂಪಾಯಿಯನ್ನು ಇದರ ಮೇಲೆ ಹೂಡಿಕೆ ಮಾಡಿದೆ. ಹೀಗಾಗಿ ಅಮೆರಿಕ ಪದೇ ಪದೇ ಎಐ ಸರ್ವೀಸ್‌ ಇತರ ರಾಷ್ಟ್ರಗಳಿಗೆ ಆರ್ಥಿಕ ಹೊರೆಯಾಗಲಿದೆ ಎಂದಿತ್ತು.

ಆದರೆ ಈ ಎಲ್ಲಾ ಲೆಕ್ಕಾಚಾರ ಉಲ್ಟಾ ಮಾಡಿದ ಚೀನಾದ ಡೀಪ್‌ಸೀಕ್, ಅತಿ ಕಡಿಮೆ ಬೆಲೆಯಲ್ಲಿ ಅಮೆರಿಕದ ಎಐ ಸರ್ವೀಸ್‌ಗಿಂತ ಉತ್ತಮ ಎಐ ಸ್ಟಾರ್ಟ್ಅಪ್ ಅಭಿವೃದ್ಧಿಪಡಿಸಿದೆ.

ಡೀಪ್‌ಸೀಕ್ ಚೀನಾ ಅಭಿವೃದ್ಧಿಪಡಿಸಿದ ಎಐ ಸರ್ವೀಸ್. ಜನವರಿ 10 ರಂದು ಡೀಪ್‌ಸೀಕ್ ವಿಶ್ವಾದ್ಯಂತ ಲಾಂಚ್ ಆಗಿದೆ. ಕೆಲವೇ ದಿನಗಳಲ್ಲಿ ಡೀಪ್‌ಸೀಕ್ ವಿಶ್ವದ ಗಮನ ಸೆಳೆದಿದೆ.

ಡೀಪ್‌ಸೀಕ್ ಮೂಲಕ ಚೀನಾ ವಿಶ್ವದ ಮೊದಲ ಉಚಿತ ಚಾಟ್‌ಬಾಟ್ ಸರ್ವೀಸ್ ಲಾಂಚ್ ಮಾಡಿದೆ. ವಿಶೇಷವೆಂದರೆ ಜನವರಿ 27ರ ಹೊತ್ತಿಗೆ ಅಂದರೆ 17 ದಿನಗಳಲ್ಲಿ ಅಮೆರಿಕದ ಚಾಟ್‌ಜಿಪಿಟಿಗಿಂತ ಹೆಚ್ಚು ಡೌನ್ಲೋಡ್ ಕಂಡಿದೆ. ಐಒಎಸ್ ಆ್ಯಪ್ ಸ್ಟೋರ್‌ ನಲ್ಲಿ ಗರಿಷ್ಠ ಡೌನ್ಲೋಡ್ ದಾಖಲೆ ಪಡೆದಿದೆ.

ಡೀಪ್‌ಸೀಕ್ ಪ್ರಮುಖವಾಗಿ ಜನರೇಟೀವ್ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಚಾಟ್‌ಬಾಟ್ ಒಪನ್ ಸೋರ್ಸ್, ಉಚಿತವಾಗಿ ಬಳಕೆಗೆ ಲಭ್ಯವಿದೆ. ಆದರೆ, ಅಮೆರಿಕದ ಜನಪ್ರಿಯ ಎಐ ಸರ್ವೀಸ್ ಉಚತವಾಗಿ ಲಭ್ಯವಿಲ್ಲ.

ವಿಶೇಷ ಅಂದರೆ ಡೀಪ್‌ಸೀಕ್ ಸ್ಟಾರ್ಟ್‌ಅಪ್ ಸೋರ್ಸ್ ಕೋಡ್ ಹಾಗೂ ಡಿಸೈನ್ ಡಾಕ್ಯುಮೆಂಟ್ ಆ್ಯಕ್ಸೆಸ್ ನೀಡಿದೆ. ಇದಕ್ಕಾಗಿ ಚೀನಾ ತನ್ನ ಪ್ರತಿಷ್ಠಿತ ಎಐ ಯುನಿವರ್ಸಿಟಿಗಳಿಂದ ಎಂಜಿನಿಯರ್‌ಗಳನ್ನು ನೇಮಕ ಮಾಡಿಕೊಂಡಿದೆ.

ಚೀನಾದ ಲಿಯಾನ್ ವೆನ್‌ಫೆಂಗ್ ಈ ಡೀಪ್ ಸಿಂಗ್ ಸ್ಟಾರ್ಟ್ಅಪ್ ಸಂಸ್ಥಾಪಕ. ಕೇವಲ 6 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದಲ್ಲಿ ಜಗತ್ತನ್ನೇ ನಿಬ್ಬೆರಗಾಗಿಸುವ ಡೀಪ್‌ಸೀಕ್ ಎಐ ಸರ್ವೀಸ್ ಅಭಿವೃದ್ಧಿಪಡಿಸಲಾಗಿದೆ.

ಸದ್ಯ ಡೀಪ್‌ಸೀಕ್ ಆರ್1 ಹಾಗೂ ಆರ್ ಝಿರೋ ಅನ್ನೋ ಎರಡು ಮಾಡೆಲ್‌ಗಳಲ್ಲಿ ಲಭ್ಯವಿದೆ. ಬಳಕೆದಾರರಿಗೆ ಆರ್1 ವರ್ಶನ್ ತಕ್ಷಣದಿಂದಲೇ ಲಭ್ಯವಿದೆ. ಡೀಪ್‌ಸೀಕ್ ಬಳಸಲು ಯಾವುದೇ ನಿರ್ಬಂಧಗಳಿಲ್ಲ, ಮಿತಿಗಳಿಲ್ಲ. ಎಲ್ಲವೂ ಉಚಿತ.
ಡೀಪ್ ಸೀಕ್ ಆ್ಯಪ್ ಸ್ಟೋರ್ ಮೂಲಕ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಡೀಪ್‌ಸೀಕ್ ಸರ್ಚ್ ಮಾಡಿ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು. ವೆಬ್ ಬಳಕೆಗೆ ಡೀಪ್‌ಸೀಕ್.ಕಾಂ ಕ್ಲಿಕ್ ಮಾಡಿಕೊಳ್ಳಬೇಕು. ಬಳಿಕ ಗೂಗಲ್ ಖಾತೆ ಮೂಲಕ ಲಾಗಿನ್ ಆಗಬೇಕು. ಚಾಟ್‌ಜಿಪಿಟಿ ರೀತಿಯ ಇಂಟರ್‌ಫೇಸ್ ನಿಮಗೆ ದೊರೆಯಲಿದೆ.

ಇದು ಸುಧಾರಿತ ಮಾದರಿಯಾಗಿದ್ದು, ಅದರ ಹಿಂದಿನ ಆವೃತ್ತಿ V3 ನಂತೆ ಹೈಬ್ರಿಡ್ ಆರ್ಕಿಟೆಕ್ಚರ್‌ನಲ್ಲಿ ನಿರ್ಮಿಸಲಾಗಿದೆ. ಇದು ಕಂಪನಿಯ ಮೊದಲ ಮಾದರಿಯಲ್ಲ ಎಂಬುದು ಸ್ಪಷ್ಟವಾಗಿದೆ.

ಡೀಪ್‌ಸೀಕ್ ಆರ್1 ಹೆಚ್ಚು ಗಮನ ಸೆಳೆಯುತ್ತಿದ್ದರೂ, ಡೀಪ್‌ಸೀಕ್ ಬಗ್ಗೆ ಕೆಲವರಿಗೆ ಮಾತ್ರ ತಿಳಿದಿದೆ. ಈ ಕಂಪನಿಯ ಪ್ರಧಾನ ಕ್ವಾರ್ಟರ್ ಚೀನಾದ ಹ್ಯಾಂಗ್‌ಝೌ ನಗರದಲ್ಲಿದೆ. ಈ ಕಂಪನಿಯನ್ನು ಲಿಯಾಂಗ್ ವೆನ್‌ಫೆಂಗ್ ಅವರು 2023 ರಲ್ಲಿ ಪ್ರಾರಂಭಿಸಿದರು. AGI ಅಂದರೆ ಆರ್ಟಿಫಿಶಿಯಲ್ ಜನರಲ್ ಇಂಟೆಲಿಜೆನ್ಸ್ ಅನ್ನು ಅಭಿವೃದ್ಧಿಪಡಿಸುವುದು ಈ ಕಂಪನಿಯ ಉದ್ದೇಶ.

DeepSeek R1 ನ ಜನಪ್ರಿಯತೆ ಕೂಡ ಅದರ ಕಡಿಮೆ ಬೆಲೆಗೆ ಕಾರಣವಾಗಿದೆ. ಓಪನ್ AI o1 ನ ಬೆಲೆ ಪ್ರತಿ ಮಿಲಿಯನ್ ಇನ್‌ಪುಟ್ ಟೋಕನ್‌ಗಳಿಗೆ $15 ಮತ್ತು ಪ್ರತಿ ಮಿಲಿಯನ್ ಔಟ್‌ಪುಟ್ ಟೋಕನ್‌ಗಳಿಗೆ $60 ಆಗಿರುತ್ತದೆ.

DeepSeek R1 ಬೆಲೆ ಪ್ರತಿ ಮಿಲಿಯನ್ ಇನ್‌ಪುಟ್ ಟೋಕನ್‌ಗಳಿಗೆ ಕೇವಲ $0.55 ಮತ್ತು ಪ್ರತಿ ಮಿಲಿಯನ್ ಔಟ್‌ಪುಟ್ ಟೋಕನ್‌ಗಳಿಗೆ $2.19 ಆಗಿದೆ.

OpenAI, Google, Microsoft ತಮ್ಮ AI ಮಾದರಿಗಳನ್ನು ರಚಿಸಲು ಶತಕೋಟಿ ಡಾಲರ್ ಮತ್ತು ವರ್ಷಗಳ ಸಮಯವನ್ನು ವ್ಯಯಿಸಿದ್ದಾರೆ. ಆದರೆ DeepSeek ಕೇವಲ 6 ಮಿಲಿಯನ್ ಡಾಲರ್ ಖರ್ಚು ಮಾಡುವ ಮೂಲಕ ಈ AI ಮಾದರಿಯನ್ನು ಸಿದ್ಧಪಡಿಸಿದೆ.

Nakul Jain resign Paytm ಪೇಮೆಂಟ್ಸ್ ಸರ್ವೀಸಸ್ ಸಿಇಒ ನಕುಲ್ ಜೈನ್ ರಾಜೀನಾಮೆ

TAGGED:AI Deepseek of China who shook America
Share This Article
Facebook Twitter Copy Link Print
Previous Article Muda case ಮುಡಾ ಹಗರಣ: ಶಾಸಕ ಜಿ.ಟಿ. ದೇವೇಗೌಡ ವಿರುದ್ಧ ಇಡಿಗೆ ದೂರು
Next Article Beer out of stock ರಾಜ್ಯದಲ್ಲಿ ಸಿಕ್ತಿಲ್ಲ ಬಿಯರ್, ಯಾಕೆ ಹೀಗೆ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?