newsics.com
ಬೆಂಗಳೂರು: ರಾಜ್ಯ ಸರ್ಕಾರ ಮದ್ಯಪ್ರಿಯರಿಗೆ ಶಾಕ್ ಮೇಲೆ ಶಾಕ್ ನೀಡ್ತಿದೆ. ಜನವರಿ 20ರಿಂದ ಬಿಯರ್ ದರವನ್ನು ಶೇಕಡ 20ರಷ್ಟು ಏರಿಕೆ ಮಾಡಿದೆ. ಈ ಮಧ್ಯೆ ಬಾರ್, ವೈನ್ ಶಾಪ್, ಎಂಆರ್ಪಿ ಔಟ್ ಲೆಟ್ ಗಳಲ್ಲಿ ಬಿಯರ್ ಔಟ್ ಆಫ್ ಸ್ಟಾಕ್ ಆಗಿದೆ.
ಹೌದು, ಕಳೆದ ಶನಿವಾರದ ಬಳಿಕ ಬಿಯರ್ ಸರಬರಾಜು ಆಗಿಲ್ಲ. ಹೊಸ ದರದ ಲೇಬಲ್ ಜೊತೆಗೆ ಬಿಯರ್ ಬಾಟಲ್ ಮೇಲೆ ಅದರಲ್ಲಿರೋ ಶುಗರ್ ಕಂಟೆಂಟ್ ಎಷ್ಟು ಅನ್ನೋದನ್ನ ಪ್ರಿಂಟ್ ಮಾಡಬೇಕಾಗಿದ್ದು, ಇನ್ನೂ ಕೆಲವು ದಿನ ಬಿಯರ್ ಸಪ್ಲೈ ಡೌಟ್ ಎನ್ನಲಾಗ್ತಿದೆ.
ಬಿಯರ್ ಸಪ್ಲೈ ಇಲ್ಲದ್ದಕ್ಕೆ ಬಾರ್ ಮಾಲೀಕರಿಗೂ ನಷ್ಟ ಆಗ್ತಿದ್ದು, ವ್ಯಾಪಾರದ ಮೇಲೆ ಪರಿಣಾಮ ನೀರಿದೆ. ಹೊಸ ದರದ ಲೇಬಲ್ ಮುಂದಿನ ಸೋಮವಾರ ಅಥವಾ ಮಂಗಳವಾರ ಬರಲಿದ್ದು, ಅಲ್ಲಿವರೆಗೆ ಬಿಯರ್ ಸರಬರಾಜು ಮಾಡದಂತೆ ಅಬಕಾರಿ ಇಲಾಖೆ ಸೂಚಿಸಿದ್ದು, ಮುಂದಿನ ಮೂರ್ನಾಲ್ಕು ದಿನ ಬಿಯರ್ ಸಿಗೋದು ಬಹುತೇಕ ಡೌಟ್ ಆಗಿದೆ.
ಈ ಕುರಿತು ಮಾತನಾಡಿರುವ ಬೆಂಗಳೂರು ಬಾರ್ ಮಾಲೀಕರ ಸಂಘದ ಅಧ್ಯಕ್ಷ ಲೋಕೇಶ್, ಕರ್ನಾಟಕದಲ್ಲಿ ಅಬಕಾರಿ ಇಲಾಖೆ ಬಿಯರ್ ದರವನ್ನು ಪರಿಷ್ಕರಣೆ ಮಾಡಿದೆ, 2025ರ ಜನವರಿ 20ರಿಂದ ದರ ಹೆಚ್ಚಳಕ್ಕೆ ನೋಟಿಫಿಕೇಶನ್ ಜಾರಿ ಮಾಡಿದೆ. ತಾಪಮಾನ ಹೆಚ್ಚಳ ಆಗುತ್ತಿರುವುದರಿಂದ ಗ್ರಾಹಕರಿಂದ ಬಿಯರ್ ಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಆದರೆ ಅಬಕಾರಿ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆ ಪರಿಹಾರ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
AI Deepseek ಅಮೆರಿಕವನ್ನೇ ಬೆಚ್ಚಿಬೀಳಿಸಿದ ಚೀನಾದ ಎಐ ಡೀಪ್ಸೀಕ್, ಏನಿದರ ವಿಶೇಷ? ಯಾಕಿಷ್ಟು ಆತಂಕ?