newsics.com
ಬೆಂಗಳೂರು: ಆರೋಗ್ಯ ಸಮಸ್ಯೆಯಿಂದ ಕಳೆದ ಕೆಲ ದಿನಗಳಿಂದ ಅಮೆರಿದ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸ್ಯಾಂಡಲ್‌ವುಡ್ ನಟ ಶಿವರಾಜ್ ಕುಮಾರ್ ಇದೀಗ ಸಂಪೂರ್ಣ ಚೇತರಿಸಿಕೊಂಡು ತವರಿಗೆ ಮರಳಿದ್ದಾರೆ.
ಶಿವರಾಜ್ ಕುಮಾರ್ ಅವರನ್ನು ಹೊತ್ತು ಅಮೆರಿಕದಿಂದ ಹೊರಟಿದ್ದ ವಿಮಾನ ಇದೀಗ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.
ಶಿವರಾಜ್ ಕುಮಾರ್ ಅವರನ್ನು ವಿಮಾನ ನಿಲ್ದಾಣದಲ್ಲೇ ಅದ್ಧೂರಿ ಸ್ವಾಗತಕ್ಕೆ ಅಭಿಮಾನಿಗಳು ತಯಾರಿ ಮಾಡಿದ್ದರು. ಆದರೆ ವಿಮಾನ ನಿಲ್ದಾಣದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಹೀಗಾಗಿ ಸಾದಹಳ್ಳಿ ಟೋಲ್ ಬಳಿ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.
ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಹೀಗಾಗಿ ವಿಮಾನ ನಿಲ್ದಾಣದಲ್ಲಿ ಯಾವುದೇ ರೀತಿಯ ಸಂಭ್ರಮಾಚರಣೆಗೆ, ಸ್ವಾಗತಕ್ಕೆ ಅವಕಾಶವಿಲ್ಲ. ಈ ಕಾರಣದಿಂದ ಅಭಿಮಮಾನಿಗಳು ಸಾದಹಳ್ಳಿ ಟೋಲ್ ಬಳಿ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
ಇಂದು ಬೆಳಗ್ಗೆ 8.50ಕ್ಕೆ ಶಿವರಾಜ್ ಕುಮಾರ್ ಪ್ರಯಾಣಿಸಿದ ವಿಮಾನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಸಾದಹಳ್ಳಿ ಟೋಲ್‌ನಲ್ಲಿ ಶಿವರಾಜ್ ಕುಮಾರ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.
ಮೂತ್ರ ಕೋಶದ ಕ್ಯಾನ್ಸರ್ ಸಂಬಂಧ ಶಿವರಾಜ್ ಕುಮಾರ್ ಡಿಸೆಂಬರ್ 18 ರಂದು ಬೆಂಗಳೂರಿನಿಂದ ಅಮೆರಿಕಕ್ಕೆ ಪ್ರಯಾಣಿಸಿದ್ದರು. ಡಿಸೆಂಬರ್ 24ರಂದು ಶಿವರಾಜ್ ಕುಮಾರ್ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆರೋಗ್ಯ ಸಂಬಂಧ ಶಿವರಾಜ್ ಕುಮಾರ್ 6 ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆ ಬಳಿಕ ವಿಶ್ರಾಂತಿಗೆ ಜಾರಿದ್ದ ಶಿವರಾಜ್ ಕುಮಾರ್ ಇದೀಗ ಚೇತರಿಸಿಕೊಂಡು ತವರಿಗೆ ಹಿಂತಿರುಗಿದ್ದಾರೆ.
ಕರ್ನಾಟಕದ ನೆಚ್ಚಿನ ಹಾಗೂ ಹೈ ಎನರ್ಜಿಟಿಕ್ ನಟನಾಗಿ ಗುರುತಿಸಿಕೊಂಡಿರುವ ಶಿವರಾಜ್ ಕುಮಾರ್ ಅವರನ್ನು ಅಭಿಮಾನಿಗಳು ಕೇಕ್, ಹಾರ, ಹೂವುಗಳ ಮೂಲಕ ಸ್ವಾಗತಿಸಿದ್ದಾರೆ. ಹಾರ ಹಾಕಿ, ಕೇಕ್ ಕತ್ತರಿಸಿದರು.
ನಮ್ಮ ಖುಷಿಗೆ ನಾವು ಸಂಭ್ರಮಾಚರಣೆ ಮಾಡುತ್ತಿದ್ದೇವೆ. ಶಿವರಾಜ್ ಕುಮಾರ್ ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ತವರಿಗೆ ಆಗಮಿಸುತ್ತಿರುವುದೇ ನಮಗೆ ಖುಷಿಯ ವಿಚಾರ ಎಂದು ಶಿವರಾಜ್ ಕುಮಾರ್ ಅಭಿಮಾನಿಯೊಬ್ಬರು ಹೇಳಿದ್ದಾರೆ.
BIGG BOSS KANNADA 11: 5 ಕೋಟಿಗೂ ಹೆಚ್ಚು ವೋಟ್ ಪಡೆದ ಬಿಗ್ ಬಾಸ್ ಕನ್ನಡ ವಿನ್ನರ್ ಯಾರು ಗೊತ್ತಾ?