newsics.com
ಬೆಂಗಳೂರು: ರಾಹುಲ್ ಗಾಂಧಿ ವಿರುದ್ಧ ವಿವಾದಾದ್ಮಕ ವಿಡಿಯೊ ಹರಿಬಿಟ್ಟ ಆರೋಪದಲ್ಲಿ ಯುಟ್ಯೂಬರ್ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ರಾಮ ಮಂದಿರ ವಿಚಾರವಾಗಿ ರಾಹುಲ್ ಗಾಂಧಿ ವಿವಾದಾದ್ಮಕ ಹೇಳಿಕೆ ನೀಡಿದ್ದಾರೆಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಕೆಪಿಸಿಸಿ ಕಾನೂನು ಘಟಕದ ಕಾರ್ಯದರ್ಶಿ, ವಕೀಲ ಬಿ.ಕೆ.ಬೋಪಣ್ಣ ನೀಡಿದ ದೂರಿನ ಮೇರೆಗೆ ಯುಟ್ಯೂಬರ್ ಅಜಿತ್ ಭಾರತಿ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಮಮಂದಿರ ಜಾಗದಲ್ಲಿ ಬಾಬರಿ ಮಸೀದಿ ಮರು ನಿರ್ಮಾಣ ಮಾಡುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಯುಟ್ಯೂಬರ್ ಹೇಳಿದ್ದಾರೆ. ಆದರೆ, ರಾಹುಲ್ ಗಾಂಧಿಯವರು ಆ ರೀತಿ ಯಾವುದೇ ಭಾಷಣದಲ್ಲಿ ಹೇಳಿಲ್ಲ. ಜನರಲ್ಲಿ ವಿಭಜನೆಯ ಭಾವ ಉಂಟು ಮಾಡಲು ಹಾಗೂ ಕೋಮು ದ್ವೇಷ ಹರಡಲು ಸ್ವಯಂ ಘೋಷಿತ ಪತ್ರಕರ್ತ, ಲೇಖಕ ಅಜಿತ್ ಭಾರತಿ ಪೋಸ್ಟ್ ಮಾಡಿದ್ದಾರೆ. ಹೀಗಾಗಿ ಯುಟ್ಯೂಬರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಜಿತ್ ಭಾರತಿ ಅವರ ಯೂಟ್ಯೂಬ್ ಚಾನೆಲ್ಗೆ 5.56 ಲಕ್ಷ ಚಂದಾದಾರರು ಇದ್ದಾರೆ. ಅವರ ಇತ್ತೀಚಿನ ಹೆಚ್ಚಿನ ವಿಡಿಯೊಗಳು ಎರಡು ಲಕ್ಷಕ್ಕೂ ಹೆಚ್ಚು ವ್ಯೂಸ್ ಕಂಡಿವೆ.