newsics.com
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸಲ್ಲಿ ಪೊಲೀಸರ ತನಿಖೆ ತೀವ್ರವಾಗಿದೆ. ಪೊಲೀಸ್ ಅಧಿಕಾರಿಗಳನ್ನು ಕಾಣುತ್ತಿದ್ದಂತೆ, ದರ್ಶನ್ ನನ್ನಿಂದ ತಪ್ಪಾಗಿದೆ, ಬಿಟ್ಟು ಬಿಡಿ ಎಂದಿದ್ದಾರೆ ಎನ್ನಲಾಗಿದೆ.
ಸಾರ್ ನಾನು ತಪ್ಪು ಮಾಡಿಬಿಟ್ಟೆ. ಮುಂಗೋಪದಿಂದ ತಪ್ಪು ಮಾಡಿಬಿಟ್ಟೆ. ಅನಗತ್ಯವಾಗಿ ನಾನು ಕೇಸಲ್ಲಿ ಸಿಕ್ಕಿಬಿಟ್ಟೆ. ಸ್ನೇಹಿತರನ್ನು ನಂಬಿ ನಾನು ಹಾಳಾದೆ. ನನ್ನ ಜೀವನದಲ್ಲಿ ಇದೊಂದು ಕಪ್ಪುಚುಕ್ಕಿ ಎಂದು ಪೊಲೀಸರ ಬಳಿ ದರ್ಶನ್ ಪಶ್ಚಾತ್ತಾಪಪಟ್ಟಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಆದರೆ, ಎ-1 ಆರೋಪಿ ಪವಿತ್ರಾಗೌಡ ಬಾಯಿ ಬಿಡುತ್ತಿಲ್ಲ. ಇದು ಪೊಲೀಸರಿಗೆ ದೊಡ್ಡ ತಲೆ ನೋವಾಗಿದೆ. ಏನೇ ಕೇಳಿದ್ರೂ ಪವಿತ್ರಾ ಗೌಡ ನನಗೇನೂ ಗೊತ್ತಿಲ್ಲ. ನಿಮಗೆ ಏನ್ ಬೇಕೋ ಹಾಗೆ ಬರೆದುಕೊಳ್ಳಿ ಎಂದು ಉತ್ತರ ನೀಡುತ್ತಿದ್ದಾರೆ ಎನ್ನಲಾಗಿದೆ.
ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವೇ ಬಟ್ಟೆಗಳು. ಸ್ಪಾಟ್ ಮಹಜರು ವೇಳೆ, ಕೊಲೆ ನಡೆದ ದಿನದಂದು ದರ್ಶನ್ ಹಾಗೂ ಪವಿತ್ರಾ ಗೌಡ ಧರಿಸಿದ್ದ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಟ್ಟೆಗಳನ್ನು ಡ್ರೈ ಕ್ಲಿನಿಂಗ್‍ಗೆ ಕೊಟ್ಟಿದ್ದರು ಕೂಡ ರಕ್ತದ ಕಲೆಗಳು ಪತ್ತೆಯಾಗಿವೆ. ಈ ಪ್ರಕಾರಣ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಟ ದರ್ಶನ್‌ಗೆ ಸಂಕಷ್ಟ: ಬರ್ತಡೆ ಸೆಲೆಬ್ರೇಶನ್ ಕ್ಯಾನ್ಸಲ್ ಮಾಡಿದ ರಕ್ಷಕ್ ಬುಲೆಟ್
ದರ್ಶನ್ ಜತೆ ಪಾರ್ಟಿ: ಹಾಸ್ಯ ನಟ ಚಿಕ್ಕಣ್ಣಗೂ ಈ ಕೊಲೆ ಕೇಸ್‌ಗೂ ಸಂಬಂಧವಿದ್ಯಾ?