newsics.com
ದಕ್ಷಿಣ ಕೊರಿಯಾ: ಇಲ್ಲಿ ಆಂಟಿಯರಿಗೆ ಪ್ರವೇಶವಿಲ್ಲ, ಯುವತಿಯರಿಗೆ ಅವಕಾಶವಿದೆ ಎನ್ನುವ ಜಿಮ್ ನೋಟಿಸ್ ಇದೀಗ ವಿವಾದಕ್ಕೆ ಕಾರಣವಾಗಿದೆ.
ಆಂಟಿಯರಿಗೆ ಈ ಜಿಮ್‌ನಲ್ಲಿ ಅವಕಾಶವಿಲ್ಲ. ಕೇವಲ ಉತ್ತಮ ಮ್ಯಾನರ್ಸ್ ಹೊಂದಿರುವ ಸುಂದರ ಹೆಂಗಸರಿಗೆ ಅವಕಾಶವಿದೆ ಎಂದು ಸ್ಪಷ್ಟವಾಗಿ ಬರೆದು ನೋಟಿಸ್ ಬೋರ್ಡ್‌ನಲ್ಲಿ ಹಾಕಲಾಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದು ಸೌತ್ ಕೊರಿಯಾದ ಜಿಮ್‌ನಲ್ಲಿ ಈ ಘಟನೆ ನಡೆದಿದೆ.
ಜಿಮ್ ಕೇಂದ್ರದಲ್ಲಿ ಆಂಟಿಯರಿಗೆ ಅವಕಾಶವಿಲ್ಲ ಎಂದು ನಾವು ಹಾಕಿದ್ದೇವೆ ನಿಜ. ಇದೇ ವೇಳೆ ಉತ್ತಮ ಗುಣದ, ಮ್ಯಾನರ್ಸ್ ಇರುವ ಹೆಂಗಸರಿಗೆ ಅವಕಾಶ ನೀಡಿದ್ದೇವೆ. ನಮ್ಮ ಜಿಮ್‌ಗೆ ಬರುವ ಎಲ್ಲಾ ಆಂಟಿಯರು ಜಿಮ್‌ಗೆ ಬಂದು ಇಲ್ಲಿನ ವಾಶಿಂಗ್ ಮಶೀನ್ ಬಳಕೆ ಮಾಡುತ್ತಾರೆ. ಜಿಮ್‌ಗೆ ಬರುವಾಗ ಮನೆಯ ಬಟ್ಟೆಗಳನ್ನು ತೆಗೆದುಕೊಂಡು ಬಂದು 1 ರಿಂದ 2 ಗಂಟೆ ವಾಶಿಂಗ್ ಮಶೀನ್‌ಗೆ ಹಾಕುತ್ತಾರೆ. ಆಂಟಿಯರಿಗೆ ನೀರು, ವಾಶಿಂಗ್ ಪೌಡರ್, ವಿದ್ಯುತ್ ಎಲ್ಲವೂ ನಮಗೆ ಹೆಚ್ಚಾಗಿ ಖರ್ಚಾಗುತ್ತಿದೆ. ಜಿಮ್‌ನಲ್ಲಿ ವಾಶಿಂಗ್ ಮಶಿನ್ ಇಡಲಾಗಿದೆ ಹೇಳಿದ್ದಾರೆ.
ಆಂಟಿಯರು ಜಿಮ್ ಮಾಡುತ್ತಿರುವ ಯುವತಿಯರ ವಿರುದ್ಧ ಕಮೆಂಟ್ ಮಾಡುತ್ತಾರೆ. ಹಲವರು ಈ ಬಗ್ಗೆ ದೂರು ನೀಡಿದ್ದಾರೆ. ನಮ್ಮ ನಿರ್ಧಾರದಿಂದ ಕೆಲ ಗ್ರಾಹಕರನ್ನು ಕಳೆದುಕೊಳ್ಳುತ್ತೇವೆ. ಆದರೆ ಅವರ ಖರ್ಚು ವೆಚ್ಚಕ್ಕಿಂತ ಈ ನಿರ್ಧಾರವೇ ಸರಿ ಎಂದು ಜಿಮ್ ಮಾಲೀಕರು ಹೇಳಿದ್ದಾರೆ.
ಲೈಂಗಿಕ ಕ್ರಿಯೆಗೆ ನಿರಾಕರಿಸಿದ ಯುವತಿಯ ಕೊಲೆಗೆ ಯತ್ನ, CRPF ಪೇದೆ ವಿರುದ್ಧ ಸಿದ್ದಾಪುರದಲ್ಲಿ ಎಫ್ಐಆರ್