ಕೆಎಸ್‌ಆರ್‌ಟಿಸಿ ಬಸ್ ಟೈರ್ ಸ್ಫೋಟ: ಮಹಿಳೆ ಕಾಲಿಗೆ ಗಂಭೀರ ಗಾಯ

newsics.com ಹುಬ್ಬಳ್ಳಿ: ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿರುವಾಗಲೇ ಕೆಎಸ್‌ಆರ್‌ಟಿಸಿ ಬಸ್ ಟೈರ್ ಸ್ಫೋಟಿಸಿ ಮಹಿಳೆಯೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಕೊಪ್ಪಳ ಡಿಪೋ ಗೆ ಸೇರಿದ KA 37 F0854 ಸಂಖ್ಯೆಯ ಸಾರಿಗೆ ಸಂಸ್ಥೆಯ ಬಸ್ ಗದಗ ನಗರದಿಂದ ಗಂಗಾವತಿ ಪಟ್ಟಣಕ್ಕೆ ತೆರಳುತ್ತಿದ್ದಾಗ ಮುಂಡರಗಿ ತಾಲೂಕಿನ ಹಳ್ಳಿಗುಡಿ ಬಳಿ ಬರುತ್ತಿದ್ದಂತೆ ಟೈರ್ ಬ್ಲಾಸ್ಟ್ ಆಗಿದೆ. ವೇಗವಾಗಿ ಚಲಿಸುತ್ತಿರುವಾಗಲೇ ಬಸ್ಸಿನ ಹಿಂದಿನ ಚಕ್ರ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಬ್ಲಾಸ್ಟ್ ಆದ ರಭಸಕ್ಕೆ ಬಸ್‌ನ ಒಳಗಡೆ ಕುಳಿತಿದ್ದ ಮಹಿಳೆಯ ಕಾಲು ಅರ್ಧ ತುಂಡರಿಸಿ ಗಂಭೀರವಾಗಿ … Continue reading ಕೆಎಸ್‌ಆರ್‌ಟಿಸಿ ಬಸ್ ಟೈರ್ ಸ್ಫೋಟ: ಮಹಿಳೆ ಕಾಲಿಗೆ ಗಂಭೀರ ಗಾಯ