newsics.com
ಗಾಯಕ ಸಂಜಿತ್ ಹೆಗಡೆ ಸೇರಿ ಕನ್ನಡ ಗಾಯಕರ ವಿರುದ್ಧ ನಿರ್ಮಾಪಕ ಕೆ. ಮಂಜು ಗರಂ ಆಗಿದ್ದಾರೆ.
ಇದೇ ಜನವರಿ 24ರಂದು ರಿಲೀಸ್ ಆಗಲಿರುವ ರುದ್ರ ಗರುಡ ಪುರಾಣ ಸಿನಿಮಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಂಜು, ಕನ್ನಡದಲ್ಲಿ ಬೆಳೆದ ಗಾಯಕರನ್ನು ಮತ್ತೆ ಕನ್ನಡಕ್ಕೆ ಕರೆತರುವುದು ಎಷ್ಟು ಕಷ್ಟ ಎಂಬುದನ್ನು ಅರ್ಥ ಮಾಡಿಸಲು ಯತ್ನಿಸಿದ್ದಾರೆ.
ಸಾಮಾನ್ಯವಾಗಿ ನಮ್ಮಲ್ಲಿ ಎಲ್ಲರೂ ಬೆಳೆದ ಬಳಿಕ ಬೇರೆ ಕಡೆ ಹೋಗುತ್ತಾರೆ. ಆದರೆ ಎಲ್ಲರೂ ಇಲ್ಲೇ ಇರಿ ಎಂದು ಹೇಳಲು ಇಷ್ಟಪಡುತ್ತೇನೆ. ಗಾಯಕ ಸಂಜಿತ್ ಹೆಗ್ಡೆರವರನ್ನು ಎಲ್ಲರೂ ಇಲ್ಲಿಂದ ಬೆಳೆಸಿದರು. ಆದರೆ ಅವರು ಹಿಂದಿಗೆ ಮಾರಿಕೊಂಡುಬಿಟ್ಟಿದ್ದಾರೆ. ಕನ್ನಡ ಸಿನಿಮಾ ಹಾಡು ಅಂದ್ರೆ 2.5 ಲಕ್ಷ ಕೇಳ್ತಾರೆ. ಇದೇ ಬಾಂಬೆಯವರು ಏನು ಮಾಡುತ್ತಾರೆ ಅಂದ್ರೆ ಸೋನು ನಿಗಮ್ ಮರಾಠಿ ಹಾಡು ಹಾಡಿದರೆ 40-50 ಸಾವಿರ ಕೊಡಲ್ಲ, ಜಾಸ್ತಿ ಕೇಳಿದರೆ ಅವರನ್ನು ಓಡಿಸಿಬಿಡುತ್ತಾರೆ. ಆದರೆ ನಮ್ಮಲ್ಲಿ ಹಾಗೆ ನಡೆಯುವುದಿಲ್ಲ. ಇವರು ಇಲ್ಲಿಂದ ಶುರು ಮಾಡುತ್ತಾರೆ, ಜನರು ಇಷ್ಟಪಟ್ಟು ಬೆಳೆಸುತ್ತಾರೆ. ಆದರೆ ಅವರು ಒಂದೇ ಹಾಡಿಗೆ ಎರಡೂವರೆ ಲಕ್ಷ ಕೇಳ್ತಾರೆ. ನಮ್ಮಲ್ಲಿ ಬೆಳೆದು ಹೋದವರು ಬೇರೆ ರೀತಿ ಇರುತ್ತಾರೆ ಎಂದು ಮಂಜು ಕಿಡಿಕಾರಿದ್ದಾರೆ.
ಝಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಸೀಸನ್ 13ರ ಮೂಲಕ ಬೆಳಕಿಗೆ ಬಂದ ಸಂಜಿತ್ ಹೆಗಡೆ, ಸರಿಗಮಪ ತಮಿಳು ಸೀನಿಯರ್ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದರು. ಬಳಿಕ ಸಿನಿಮಾಗಳಲ್ಲಿ ಹಾಡಲು ಅವಕಾಶಗಳನ್ನು ಪಡೆಯುತ್ತಾರೆ. ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ಹಾಡುತ್ತಿದ್ದ ಸಂಜಿತ್ ಇದ್ದಕ್ಕಿದ್ದಂತೆ ಪರಭಾಷೆಗಳಲ್ಲಿ ಹಾಡಲು ಶುರು ಮಾಡಿ ಕನ್ನಡ ಮರೆತುಬಿಟ್ಟಿದ್ದಾರಂತೆ.
2018ರಲ್ಲಿ ಮಿರ್ಚಿ ಮ್ಯೂಸಿಕ್ ಅವಾರ್ಡ್ ಬೆಸ್ಟ್ ಮೇಲ್ ವೋಕಲಿಸ್ಟ್ ಅವಾರ್ಡ್ ಪಡೆದಿದ್ದಾರೆ. 2019ರಲ್ಲಿ ಕನ್ನಡ ಇಂಟರ್‌ನ್ಯಾಷನಲ್ ಮ್ಯೂಸಿಕ್ ಅಕಾಡೆಮಿ ಅವಾರ್ಡ್ ಫಾರ್ ಬೆಸ್ಟ್ ಪ್ಲೇಬ್ಯಾಕ್ ಸಿಂಗರ್ ಅವಾರ್ಡ್ ಪಡೆದಿದ್ದಾರೆ. ಎರಡು ಮೂರು ಬಾರಿ ಸೈಮಾ ಅವಾರ್ಡ್‌ಗೆ ನಾಮಿನೇಟ್ ಆಗಿ ಮೂರನೇ ಬಾರಿ 2019ರಲ್ಲಿ ಶಾಕುಂತಲೇ ಸಿಕ್ಕಳು ಹಾಡಿಗೆ ಅವಾರ್ಡ್ ಪಡೆದಿದ್ದಾರೆ.
ಅಂದ ಹಾಗೆ, ರುದ್ರ ಗರುಡ ಪುರಾಣ ಸಿನಿಮಾದಲ್ಲಿ ನಟ ರಿಷಿ ಮತ್ತು ಪ್ರಿಯಾಂಕಾ ಕುಮಾರ್ ಜೋಡಿಯಾಗಿ ನಟಿಸಿದ್ದಾರೆ. ಕೆಎಸ್ ನಂದೀಶ್ ಆ್ಯಕ್ಷನ್ ಕಟ್ ಹೇಳಿದ್ದು ಸಿನಿಮಾ ಬಗ್ಗೆಯೇ ಕುತೂಹಲ ಹೆಚ್ಚಾಗಿದೆ.
Actor Saif Ali Khan stabbed ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿತ, ಆಸ್ಪತ್ರೆಗೆ ದಾಖಲು