Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Sixth number logic ನಿಮ್ಮ ವಾಹನದ ಕೊನೆಯ ಸಂಖ್ಯೆ ಆರಾಗಿದ್ದರೆ ಹುಷಾರಾಗಿರಬೇಕಂತೆ! ನೆಲಮಂಗಲ ಹೆದ್ದಾರಿಯಲ್ಲಿ ಮತ್ತೆ ಸಿಕ್ಸ್ತ್ ನಂಬರ್ ಭೂತದ ಮಾತು!
ಕರ್ನಾಟಕಪ್ರಮುಖ

Sixth number logic ನಿಮ್ಮ ವಾಹನದ ಕೊನೆಯ ಸಂಖ್ಯೆ ಆರಾಗಿದ್ದರೆ ಹುಷಾರಾಗಿರಬೇಕಂತೆ! ನೆಲಮಂಗಲ ಹೆದ್ದಾರಿಯಲ್ಲಿ ಮತ್ತೆ ಸಿಕ್ಸ್ತ್ ನಂಬರ್ ಭೂತದ ಮಾತು!

Share
2 Min Read
SHARE

newsics.com

ಬೆಂಗಳೂರು: ಕಳೆದ ಶನಿವಾರ ತುಮಕೂರು-ಬೆಂಗಳೂರು ನಡುವಿನ ನೆಲಮಂಗಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತ ಬಳಿಕ ಈಗ ವಿಚಿತ್ರ ಚರ್ಚೆಯೊಂದು ಆರಂಭವಾಗಿದೆ.

ಮಹಾರಾಷ್ಟ್ರ ಮೂಲದ ಚಂದ್ರಮ್‌ ಅವರ ಐಷಾರಾಮಿ ಹಾಗೂ ದುಬಾರಿ ವೋಲ್ವೋ ಕಾರ್‌ನ ಮೇಲೆ ಕಂಟೇನರ್‌ ಲಾರಿ ಬಿದ್ದು ಉದ್ಯಮಿ ಚಂದ್ರಮ್ ಸೇರಿ ಒಂದೇ ಕುಟುಂಬದ ಆರು ಮಂದಿ ಸ್ಥಳದಲ್ಲಿಯೇ ಸಾವು ಕಂಡಿದ್ದರು.

ಇಷ್ಟೆಲ್ಲಾ ಇದ್ದರೂ, ನೆಲಮಂಗಲದ ಜನತೆಗೆ ಮಾತ್ರ ಈ ಸಾವು ವಿಶೇಷ ಅನಿಸಲಿಲ್ಲ. ಇದಕ್ಕೂ ಕಾರಣವಿತ್ತು. ಅಪಘಾತಕ್ಕೊಳಗಾದ ಕಾರಿನ ನಂಬರ್‌ ಪ್ಲೇಟ್‌ ಹಾಗೂ ಕಂಟೇನರ್‌ನ ನಂಬರ್‌ ಪ್ಲೇಟ್‌ನ ಕೊನೆಯ ಸಂಖ್ಯೆಯೇ ಪ್ರಮುಖ ಕಾರಣವಾಗಿತ್ತು. ಹೀಗಾಗಿ ನೆಲಮಂಗಲ ಸುತ್ತಲಿನವರಿಗೆ ಈ ಅಪಘಾತ ವಿಶೇಷವೆನಿಸಿರಲಿಲ್ಲ.

ಅಪಘಾತಕ್ಕೆ ಈಡಾದ ಚಂದ್ರಮ್‌ ಯೇಗಪ್ಪಗೋಳ ಅವರ ವೋಲ್ವೋ ಕಾರ್‌ನ ನಂಬರ್ KA 02 ND 1536 ಆಗಿದ್ದರೆ, ಇವರ ಕಾರ್‌ನ ಮೇಲೆ ಬಿದ್ದ ಕಂಟೇನರ್ ಲಾರಿಯ ನಂಬರ್‌ ಪ್ಲೇಟ್‌ KA 52 B 3076. ಎರಡೂ ವಾಹನಗಳ ನಂಬರ್‌ ಪ್ಲೇಟ್‌ನ ಕೊನೆಯ ಸಂಖ್ಯೆ 6. ಇದೇ ನಂಬರ್‌ ನೆಲಮಂಗಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕ್ಕೆ ಕಾರಣ ಅನ್ನೋದು ಸ್ಥಳೀಯರ ಮಾತು.

ಈ ಬಗ್ಗೆ 6 ವರ್ಷಗಳ ಹಿಂದೆ ಮಾಧ್ಯಮಗಳಲ್ಲಿ ವರದಿ ಕೂಡ ಪ್ರಸಾರವಾಗಿತ್ತು. ನೆಲಮಂಗಲದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ವಾಹನಗಳ ನಂಬರ್ ಪ್ಲೇಟ್‌ನ ಕೊನೆಯ ಸಂಖ್ಯೆ 6 ಆಗಿದ್ದಲ್ಲಿ ಅವರು ಸಾಧ್ಯವಾದಷ್ಟು ಎಚ್ಚರಿಕೆಯಿಂದ ಓಡಾಡಬೇಕು ಎನ್ನುವುದು ಸ್ಥಳೀಯರ ಮಾತು. ಇದನ್ನು ನಂಬಲು ಅಸಾಧ್ಯವಾದರೂ, ಸ್ಥಳೀಯ ಜನರು ತೋರಿಸೋದು ಈಗಾಗಲೇ ಅಪಘಾತವಾಗಿರುವ ಗಾಡಿಗಳ ನಂಬರ್‌ಗಳನ್ನು.

ನೆಲಮಂಗಲ ಟ್ರಾಫಿಕ್‌ ಪೊಲೀಸ್‌ ಸ್ಟೇಷನ್‌ನಲ್ಲಿ ಹೆದ್ದಾರಿಯಲ್ಲಿ ಅಪಘಾತಕ್ಕೆ ಒಳಗಾಗಿರುವ ವಾಹನಗಳನ್ನು ಇರಿಸಲಾಗಿದೆ. ಅಚ್ಚರಿ ಎನ್ನುವಂತೆ ಬಹುತೇಕ ವಾಹನಗಳ ನಂಬರ್‌ ಪ್ಲೇಟ್‌ನ ಕೊನೆ ಸಂಖ್ಯೆ 6 ಆಗಿದೆ. ಕೊನೇ ನಂಬರ್‌ 6 ಆಗಿದ್ದರೆ ಈ ಭಾಗದಲ್ಲಿ ಆ್ಯಕ್ಸಿಡೆಂಟ್‌ ಆಗೋದು ಖಚಿತ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಎನ್ನುತ್ತಾರೆ ಸ್ಥಳೀಯರು.

KA 51 Q 5156, KA 42 H 6326, KA 44 J 5086, KA 04 C 9626, KA 51 D 1786, KA 18 A 9426, KA 54 1676, KA 02 D 3406 ಹಾಗೂ KA 44 K 1706 ನಂಬರ್‌ನ ಗಾಡಿಗಳು ಈಗಾಗಲೇ ನೆಲಮಂಗಲದ ಹೆದ್ದಾರಿಯಲ್ಲಿ ಅಪಘಾತಕ್ಕೆ ಈಡಾಗಿವೆ. ಈಗ ಈ ಸಾಲಿಗೆ ಮತ್ತೆರಡು ವಾಹನಗಳು ಸೇರ್ಪಡೆಯಾಗಿರುವ ಬೆನ್ನಲ್ಲಿಯೇ ಮತ್ತೆ ನಂಬರ್‌ ಪ್ಲೇಟ್‌ 6 ಭೂತ ಸ್ಥಳೀಯರನ್ನು ಆವರಿಸಿದೆ.

ಅಲ್ಲದೆ, ಈ ಬಾರಿಯ ಅಪಘಾತದಲ್ಲಿ ಸಾವು ಕಂಡವರ ಸಂಖ್ಯೆಯೂ 6 ಆಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಹೊಸದಾಗಿ ಖರೀದಿ ಮಾಡಿದ ವಾಹನದ ಕೊನೆಯಲ್ಲಿ ಹಾಗೇನಾದರೂ 6 ನಂಬರ್‌ ಬಂದಲ್ಲಿ ಅದನ್ನು ಸಾಧ್ಯವಾದಷ್ಟು ಬೇಗ ಮಾರಾಟ ಮಾಡುವ ಪ್ರವೃತ್ತಿಯೂ ಈ ಭಾಗದ ಜನರಲ್ಲಿದೆ.

Death of four soldiers ಪ್ರತ್ಯೇಕ ಅಪಘಾತ: ಒಂದೇ ದಿನ ಕರ್ನಾಟಕ ಮೂಲದ ನಾಲ್ವರು ಯೋಧರ ಸಾವು

Chitradurga ಮಲದಗುಂಡಿಯಲ್ಲಿ ಉಸಿರುಗಟ್ಟಿ ಪೌರ ಕಾರ್ಮಿಕ ಸಾವು

Life Style ನಿಮ್ಮ ಮನೆಯಲ್ಲಿ ಸ್ಮಾರ್ಟ್ TV ಇದೆಯಾ..? ಹಾಗಿದ್ರೆ ಈ ರೀತಿ ಕ್ಲೀನ್ ಮಾಡಿ

TAGGED:Be careful on Nelamangala highway if your vehicle's last number is six
Share This Article
Facebook Twitter Copy Link Print
Previous Article Chitradurga ಮಲದಗುಂಡಿಯಲ್ಲಿ ಉಸಿರುಗಟ್ಟಿ ಪೌರ ಕಾರ್ಮಿಕ ಸಾವು
Next Article Actor Darshan ನಟ ದರ್ಶನ್’ಗೆ ಬೆನ್ನು ಮೂಳೆ ಜರುಗಿದೆ: ವೈದ್ಯರಿಂದ ಮಾಹಿತಿ

Popular Posts

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read

Crime Case ಘೋರ ದುರಂತ; ಹೆಂಡತಿ, ಇಬ್ಬರು ಮಕ್ಕಳನ್ನು ಕೊಂದು ವ್ಯಕ್ತಿ ಆತ್ಮಹತ್ಯೆ; ಡೆತ್‌ನೋಟ್ ಪತ್ತೆ

1 Min Read

Transgender attack ಹಣ ಕೊಡದ ಯುವಕನ ಮೇಲೆ ಮಂಗಳಮುಖಿಯರಿಂದ ರೈಲಿನಲ್ಲೇ ಹಲ್ಲೆ, ಅಸಭ್ಯ ವರ್ತನೆ, ವಿಡಿಯೋ ನೋಡಿ

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಪ್ರಮುಖCrimeಕರ್ನಾಟಕ

Footpath Eviction ಪುಂಡರ ದೌರ್ಜನ್ಯ; ಜಿಬಿಎ ಅಧಿಕಾರಿಗಳ ಮೇಲೆ ಮಾರಣಾಂತಿಕ ದಾಳಿ, ಮಹಿಳಾ ಅಧಿಕಾರಿಗೆ ಪೆಪ್ಪರ್ ಸ್ಪ್ರೇ

2 Min Read
ಪ್ರಮುಖದೇಶಮನರಂಜನೆ

Jana Nayagan ಸಿಎಂ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ರಿಲೀಸ್‌ಗೆ ಕೌಂಟ್‌ಡೌನ್‌; ಅಭಿಮಾನಿಗಳಿಗೆ ಡಬಲ್ ಧಮಾಕಾ

2 Min Read
ಪ್ರಮುಖಕರ್ನಾಟಕ

DK Shivakumar ಡಿ.ಕೆ. ಶಿವಕುಮಾರ್ ಸಂಪುಟ ರೇಸ್; ಸಚಿವ ಸ್ಥಾನಕ್ಕಾಗಿ ಕ್ಯೂ ನಿಂತ ಶಾಸಕರು! ಯಾರಿಗೆ ಸಿಗಲಿದೆ ಸ್ಥಾನ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?