newsics.com
ಮೈ ನಡುಗುವುದು ಅಥವಾ ಕಣ್ಣು ಅದರುವುದು ನಮ್ಮ ದೇಹದಲ್ಲಿ ಸಾಮಾನ್ಯ ಪ್ರಕ್ರಿಯೆ. ಜ್ಯೋತಿಷ್ಯದ ಪ್ರಕಾರ ಕಣ್ಣುಗಳು ಅದರುವುದು ಮುಂದಿನ ಜೀವನದ ಬಗ್ಗೆ ಸೂಚಿಸುತ್ತದೆ ಎನ್ನಲಾಗುತ್ತದೆ. ಇದರಂತೆಯೇ ತುಟಿ ಅದರುವಿಕೆಗೆ ಸಹ ಜ್ಯೋತಿಷ್ಯದಲ್ಲಿ ಬೇರೆಯದ್ದೇ ಆದ ಅರ್ಥವಿದೆ.
ಹೌದು,ನಮ್ಮ ತುಟಿಗಳು ಅದುರುತ್ತಿದ್ದರೆ, ಜ್ಯೋತಿಷ್ಯದ ಪ್ರಕಾರ ಅದನ್ನು ಬಹಳ ಒಳ್ಳೆಯದು ಎನ್ನಲಾಗುತ್ತದೆ. ಇದು ಭವಿಷ್ಯದಲ್ಲಿ ನಮಗೆ ಒಳ್ಳೆಯದಾಗುವುದರ ಲಕ್ಷಣ ಎನ್ನಲಾಗುತ್ತದೆ. ಹಾಗೆಯೇ, ತುಟಿಯ ಕೆಲ ಭಾಗಗಳ ಅದುರುವಿಕೆಗೆ ವಿಭಿನ್ನವಾದ ಅರ್ಥ ಸಹ ಇದೆ
ನಿಮ್ಮ ತುಟಿ ಅದರುತ್ತಿದ್ದರೆ ಸದ್ಯದಲ್ಲಿ ನಿಮಗೆ ಖುಷಿ ಸುದ್ದಿಯೊಂದು ಸಿಗಲಿದೆ ಎನ್ನಬಹುದು. ಇದರಿಂದ ನಿಮ್ಮ ಜೀವನದಲ್ಲಿ ಹೊಸ ವ್ಯಕ್ತಿಯ ಪ್ರವೇಶ ಆಗುತ್ತದೆ, ಅವರು ಬದುಕನ್ನ ಬದಲಾಯಿಸುತ್ತಾರೆ. ಒಟ್ಟಾರೆ ಒಳ್ಳೆಯ ಸಮಯದ ಸೂಚನೆ ಇದು.
ಮೇಲಿನ ತುಟಿ ಅದುರುವುದು ಸಹ ಒಳ್ಳೆಯದರ ಸಂಕೇತ ಎನ್ನಲಾಗುತ್ತದೆ.
ಜ್ಯೋತಿಷ್ಯದ ಪ್ರಕಾರ ಕೆಳಗಿನ ತುಟಿಯ ಅದುರುವುದೂ ಸಹ ಮಂಗಳಕರ ಸಂಕೇತವಂತೆ. ಮುಂಬರುವ ದಿನಗಳು ನಿಮಗೆ ಶುಭ ಸುದ್ದಿ ತರಲಿದೆ ಎನ್ನುವುದರ ಸೂಚನೆ ಇದೆ.
ಒಟ್ಟಿಗೆ 2 ತುಟಿಗಳು ಅದರಲು ಶುರುವಾದರೆ ಕೆಟ್ಟದ್ದು ಹಾಗೂ ಒಳ್ಳೆಯದು ಎರಡೂ ಆಗುತ್ತದೆ. ಕೆಲವರಿಗೆ ಇದು ಒಳ್ಳೆಯದರ ಸಂಕೇತವಾದರೆ, ಇನ್ನೂ ಕೆಲವರಿಗೆ ಇದು ಕೆಟ್ಟದ್ದರ ಸಂಕೇತ. ಇದರಿಂದ ಜೀವನದಲ್ಲಿ ಸಮಸ್ಯೆಗಳಾಗುತ್ತದೆ ಎನ್ನುವ ನಂಬಿಕೆ ಇದೆ.
ಇನ್ನು ವೈಜ್ಞಾನಿಕವಾಗಿಯೂ ಇದಕ್ಕೆ ಕೆಲವು ಅರ್ಥಗಳಿವೆ. ತುಟಿಗಳ ಅದರುವಿಕೆ ಸ್ನಾಯು ಸಂಕೋಚನಗಳು ಆಧಾರವಾಗಿರುವ ಕಾಯಿಲೆಯ ಕಾರಣವಲ್ಲದ ಕಾರಣಗಳನ್ನು ಹೊಂದಿರಬಹುದು. ಉದಾಹರಣೆಗಳಲ್ಲಿ ಕಡಿಮೆ ಮೆಗ್ನೀಸಿಯಮ್ ಮಟ್ಟಗಳು, ಸ್ನಾಯುವಿನ ಆಯಾಸ ಅಥವಾ ಔಷಧಿಗಳ ಅಡ್ಡಪರಿಣಾಮಗಳು ಸೇರಿವೆ