newsics.com
ಅದ್ಭುತ! ವಿದ್ಯೆ ಸರಿಯಾಗಿ ಒಲಿದರೆ ಹುಚ್ಚರಂತೆ ಭಾಸವಾಗುತ್ತದೆ ಎನ್ನುತ್ತಾರೆ ಬಲ್ಲವರು. ಈ ಮಾತಿಗೆ ಉಸ್ತಾದ್ ಝಾಕಿರ್ ಹುಸೇನ್ ಅವರೇ ಸಾಕ್ಷಿ. ತಬಲಾದಿಂದ ಡಮರುಗ ಧ್ವನಿ ಹೊರಡಿಸುವುದು, ಅದೂ ಒಂದೇ ಕೈಯಿಂದ! ಇವರೇ ತಬಲಾ ಮಾಂತ್ರಿಕ ಝಾಕಿರ್ ಹುಸೇನ್.
ಎಲ್ಲ ಬಿಟ್ಟು ಅವರ ಉಸಿರೇ ಆಗಿದ್ದ ತಬಲಾದಿಂದ ಶಂಖ ನಾದ ಹೊರಸೂಸುವಂತೆ ಮಾಡುತ್ತಾರೆ, ಅದೂ ಒಂದೇ ಕೈಯಿಂದ! ಜತೆಗೆ ವೀಕ್ಷಕ, ಪ್ರೇಕ್ಷಕ ವಿವರಣೆಯನ್ನೂ ಅದೇ ಕಾಲಕ್ಕೆ ಅವರೇ ನೀಡುತ್ತಾರೆ ಎಂದರೆ ಅದು ಅದ್ಭುತ ಶಕ್ತಿಯಲ್ಲವೆ?
ಅಷ್ಟೇ ಅಲ್ಲ, ಪಂಡಿತ್ ಶಿವಕುಮಾರ್ ಶರ್ಮಾ ಹಾಗೂ ಉಸ್ತಾದ್ ಝಾಕಿರ್ ಅವರ ಸಂತೂರ್- ತಬಲಾ ಜುಗಲ್‌ಬಂದಿಯೂ ಇಲ್ಲಿದೆ.
ಝಾಕಿರ್ ಹುಸೇನ್ ಅವರ ಕೈಚಳಕ ಅಲ್ಲಲ್ಲ, ಬೆರಳುಗಳ ಚಮತ್ಕಾರದ ಜತೆ ಅವರ ಸೊಗಸಾದ ಮಾತನ್ನೂ ಕೇಳಿ…