Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Landslide ವರುಣನ ಆರ್ಭಟ; ಭೀಕರ ಪ್ರವಾಹ, ಭೂಕುಸಿತಕ್ಕೆ 11 ಬಲಿ, ಹೈ ಅಲರ್ಟ್ ಘೋಷಣೆ
ಪ್ರಮುಖCrimeದೇಶ

Landslide ವರುಣನ ಆರ್ಭಟ; ಭೀಕರ ಪ್ರವಾಹ, ಭೂಕುಸಿತಕ್ಕೆ 11 ಬಲಿ, ಹೈ ಅಲರ್ಟ್ ಘೋಷಣೆ

Share
2 Min Read
SHARE

newsics.com | ನ್ಯೂಸಿಕ್ಸ್

Contents
ದೆಹಲಿಯಿಂದ ಓಡಿ ಬಂದ ಸಿಎಂ ಒಮರ್ ಅಬ್ದುಲ್ಲಾಕೇಂದ್ರ ಗೃಹ ಸಚಿವರಿಂದ ಪರಿಸ್ಥಿತಿ ಪರಾಮರ್ಶೆಮುಂದಿನ 3 ದಿನ ಹೈ ಅಲರ್ಟ್

ಶ್ರೀನಗರ: ಜಮ್ಮು-ಕಾಶ್ಮೀರದ ಗಡಿ ಭಾಗಗಳಲ್ಲಿ ಭಾರಿ ಮಳೆಯಿಂದಾಗಿ ಅತಿವೃಷ್ಟಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪೂಂಚ್ ಮತ್ತು ರಜೌರಿ ಜಿಲ್ಲೆಗಳು ಸಂಪೂರ್ಣ ಜಲಾವೃತಗೊಂಡಿವೆ. ಮಳೆ ಸಂಬಂಧಿತ ಅವಘಡಗಳು ಹಾಗೂ ಭೂಕುಸಿತದ ಕಾರಣದಿಂದಾಗಿ ಇದುವರೆಗೆ 11 ಜನ ಜೀವ ಕಳೆದುಕೊಂಡಿದ್ದು, ಹಲವರು ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದಾರೆ. ವಿಪತ್ತು ಪೀಡಿತ ಗ್ರಾಮಗಳಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ತರಲು ಸೇನೆ ಮತ್ತು ರಕ್ಷಣಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿವೆ.

 

ಧಾರಾಕಾರ ಮಳೆಗೆ ನದಿ ತೊರೆಗಳು ಉಕ್ಕಿ ಹರಿಯುತ್ತಿದ್ದು, ತೀರ ಪ್ರದೇಶದ ಮನೆಗಳು ನೆಲಸಮಗೊಂಡಿವೆ. ಅಧಿಕಾರಿಗಳ ಮಾಹಿತಿ ಪ್ರಕಾರ, ಪೂಂಚ್ ಜಿಲ್ಲೆಯ ಸುರನ್‌ಕೋಟ್‌ನಲ್ಲಿ ಪ್ರಕೃತಿ ವಿಕೋಪದ ತೀವ್ರತೆ ಹೆಚ್ಚಾಗಿದ್ದು, ಗರಿಷ್ಠ ಸಾವುನೋವು ವರದಿಯಾಗಿದೆ. ರಜೌರಿಯಲ್ಲಿ ಪ್ರವಾಹದ ನೀರು ವಸತಿ ಸಮುಚ್ಚಯಗಳಿಗೆ ನುಗ್ಗಿದ್ದು, ನೂರಾರು ಕುಟುಂಬಗಳನ್ನು ಗಂಜಿ ಕೇಂದ್ರಗಳಿಗೆ ರವಾನಿಸಲಾಗಿದೆ. ರಕ್ಷಣಾ ತಡೆಗೋಡೆಗಳು ಒಡೆದು ಹೋಗಿರುವುದರಿಂದ ನದಿ ದಂಡೆಯಲ್ಲಿದ್ದ ಹತ್ತಾರು ವಾಹನಗಳು ಕೊಚ್ಚಿಹೋಗಿದ್ದು, ರಜೌರಿ ಪಟ್ಟಣದ ನದಿಯಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ.

ದೆಹಲಿಯಿಂದ ಓಡಿ ಬಂದ ಸಿಎಂ ಒಮರ್ ಅಬ್ದುಲ್ಲಾ

ರಾಜ್ಯದಲ್ಲಿ ಉಂಟಾಗಿರುವ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ತಮ್ಮ ನಿಗದಿತ ದೆಹಲಿ ಪ್ರವಾಸವನ್ನು ರದ್ದುಗೊಳಿಸಿ ತಕ್ಷಣವೇ ಜಮ್ಮುವಿಗೆ ವಾಪಸಾಗಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡಿದ್ದು, ಸಂತ್ರಸ್ತರಿಗೆ ತಕ್ಷಣದ ಪರಿಹಾರ ವಿತರಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕೇಂದ್ರ ಗೃಹ ಸಚಿವರಿಂದ ಪರಿಸ್ಥಿತಿ ಪರಾಮರ್ಶೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರೊಂದಿಗೆ ಫೋನ್ ಮೂಲಕ ಚರ್ಚಿಸಿ ಪ್ರವಾಹದ ಸ್ಥಿತಿಗತಿಯ ಮಾಹಿತಿ ಪಡೆದಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣೆ ಮತ್ತು ಪುನರ್ವಸತಿ ಕಲ್ಪಿಸಲು ಕೇಂದ್ರ ಸರ್ಕಾರದಿಂದ ಅಗತ್ಯವಿರುವ ಸಕಲ ಸೌಕರ್ಯ ಹಾಗೂ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ಮುಂದಿನ 3 ದಿನ ಹೈ ಅಲರ್ಟ್

ಹವಾಮಾನ ಇಲಾಖೆಯ (IMD) ಮುನ್ಸೂಚನೆಯಂತೆ ಜುಲೈ 23ರ ತನಕ ಜಮ್ಮು-ಕಾಶ್ಮೀರದಾದ್ಯಂತ ಮಳೆಯ ಆರ್ಭಟ ಮುಂದುವರಿಯಲಿದೆ. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇರುವುದರಿಂದ ಎನ್‌ಡಿಆರ್‌ಎಫ್ (NDRF) ಹಾಗೂ ಸ್ಥಳೀಯ ವಿಪತ್ತು ನಿರ್ವಹಣಾ ಪಡೆಗಳನ್ನು ಗಡಿ ಜಿಲ್ಲೆಗಳಲ್ಲಿ ಸರ್ವಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ.

Today Gold Rate | ಚಿನ್ನದ ಬೆಲೆ ಮತ್ತೆ ಏರಿಕೆ

TAGGED:#Jammu Kashmir #Heavy Rain #landslide #news #newsics
Share This Article
Facebook Twitter Copy Link Print
Previous Article Tattoo HIV Case ಟ್ಯಾಟೂ ಪ್ರೇಮಿಗಳೇ ಎಚ್ಚರ..! ಹಚ್ಚೆ ಹಾಕಿಸಿಕೊಂಡ ಮಹಿಳೆಗೆ ತಗುಲಿದ ಎಚ್‌ಐವಿ ಸೋಂಕು
Next Article Pressure Cooker ನಿಮ್ಮ ಮನೆಯ ಕುಕ್ಕರ್ ವಿಷಲ್ ಸರಿಯಾಗಿ ಬರ್ತಿಲ್ವಾ? ಜಿಡ್ಡು ಮತ್ತು ಕೊಳಕು ನಿವಾರಣೆಗೆ ಇಲ್ಲಿದೆ ಸಿಂಪಲ್ ಟಿಪ್ಸ್

Popular Posts

Strange fever ರಾಜ್ಯದಲ್ಲಿ ವಿಚಿತ್ರ ಜ್ವರ: ಕಂಗಾಲಾದ ಜನ, ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

1 Min Read

KSRTC ಬಸ್‌ನಲ್ಲಿ ಸೀಟಿಗಾಗಿ ಜಗಳ: ಮಹಿಳೆ ಮೇಲೆ ಕಂಡಕ್ಟರ್ ಹಲ್ಲೆ, ವಿಡಿಯೋ ನೋಡಿ

2 Min Read

Mouni Roy ಮೌನಿ ರಾಯ್ ಜೊತೆಗಿನ ಅಫೇರ್ ಗಾಸಿಪ್‌ಗೆ ಅರ್ಜುನ್ ಬಿಜ್ಲಾನಿ ಬ್ರೇಕ್

2 Min Read

Jennifer Winget ಎರಡನೇ ಮದುವೆಯಾದ ಸ್ಟಾರ್ ನಟಿ ಜೆನ್ನಿಫರ್ ವಿಂಗೆಟ್

1 Min Read

You Might Also Like

ಪ್ರಮುಖಮನರಂಜನೆ

Toxic Movie ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಟ್ರೈಲರ್ ರಿಲೀಸ್ ಡೇಟ್ ಫಿಕ್ಸ್

1 Min Read
ಪ್ರಮುಖಕರ್ನಾಟಕಮನರಂಜನೆ

Kwatle Kichen ಗಿಲ್ಲಿ ನಟನ ಜೊತೆ ಫೋಟೋ ಶೇರ್ ಮಾಡಿ ‘ಜೀವ ಒಂದೇ’ ಎಂದ ರಕ್ಷಿತಾ ಶೆಟ್ಟಿ

1 Min Read
ಪಂಚಾಂಗಜ್ಯೋತಿಷ್ಯಪ್ರಮುಖ

Astrology ನಾಳೆ ಶಿವಯೋಗ, ಸಿದ್ಧಿಯೋಗ: ಈ ಐದು ರಾಶಿಗಳ ಜನರಿಗೆ‌ ಬಂಪರ್ ಅದೃಷ್ಟ

4 Min Read
ಪ್ರಮುಖದೇಶವಿದೇಶ

FIFA World Cup 2026 ಫಿಫಾ ವಿಶ್ವಕಪ್ ಫೈನಲ್; ಜುಲೈ 20 ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ಸರ್ಕಾರ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?