newsics.com | ನ್ಯೂಸಿಕ್ಸ್
ಅಯೋಧ್ಯೆ: ರಾಮ ಮಂದಿರ ದೇಣಿಗೆ ಹಣದ ಅವ್ಯವಹಾರದ ಆರೋಪಗಳ ಬೆನ್ನಲ್ಲೇ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜುಲೈ 22 ರಂದು ಮಹತ್ವದ ಸಭೆ ಕರೆದಿದೆ. ಈ ತಿಂಗಳಿನಲ್ಲಿ ನಡೆಯುತ್ತಿರುವ ಎರಡನೇ ಸಭೆ ಇದಾಗಿದ್ದು, ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಕೃಷ್ಣ ಮೋಹನ್ ಅವರ ಪ್ರಕಾರ, ಜುಲೈ 22 ರಂದು ಮಧ್ಯಾಹ್ನ 3 ಗಂಟೆಗೆ ರಾಮ ಮಂದಿರ ಸಂಕೀರ್ಣದಲ್ಲಿ ವಿಶೇಷ ಸಭೆ ನಡೆಯಲಿದೆ.
ಅದೆ ದಿನ ಸಂಜೆ 4 ಗಂಟೆಗೆ ಟ್ರಸ್ಟ್ ಅಧ್ಯಕ್ಷ ನೃತ್ಯ ಗೋಪಾಲ್ ದಾಸ್ ಅವರ ಮನೀರಾಮ್ ಛಾವ್ನಿ ಆವರಣದಲ್ಲಿ ಸಾಮಾನ್ಯ ಸಭೆ ಜರುಗಲಿದೆ. ಈ ಸಭೆಯಲ್ಲಿ ಜುಲೈ 6 ರಂದು ನಡೆದಿದ್ದ ಸಭೆಯ ತೀರ್ಮಾನಗಳ ದೃಢೀಕರಣ ಹಾಗೂ ಮಂದಿರದ ಪ್ರಸ್ತುತ ವಿದ್ಯಮಾನಗಳ ಕುರಿತು ಪ್ರಮುಖ ಚರ್ಚೆಗಳು ನಡೆಯಲಿವೆ ಎಂದು ತಿಳಿದುಬಂದಿದೆ.
Landslide ವರುಣನ ಆರ್ಭಟ; ಭೀಕರ ಪ್ರವಾಹ, ಭೂಕುಸಿತಕ್ಕೆ 11 ಬಲಿ, ಹೈ ಅಲರ್ಟ್ ಘೋಷಣೆ