newsics.com | ನ್ಯೂಸಿಕ್ಸ್
ನವದೆಹಲಿ: ಸಾಮಾಜಿಕ ಜಾಲತಾಣ ‘ಮೆಟಾ’ ಕಂಪನಿಯ ಜನಪ್ರಿಯ ಆ್ಯಪ್‌ಗಳಾದ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಭಾನುವಾರ (ಇಂದು) ತಾಂತ್ರಿಕ ದೋಷದ ಕಾರಣದಿಂದಾಗಿ ಜಾಗತಿಕವಾಗಿ ಸ್ಥಗಿತಗೊಂಡಿವೆ. ಹಠಾತ್ ಎದುರಾದ ತಾಂತ್ರಿಕ ಅಡಚಣೆಯಿಂದಾಗಿ ಲಕ್ಷಾಂತರ ಬಳಕೆದಾರರ ಸೋಶಿಯಲ್ ಮೀಡಿಯಾ ಖಾತೆಗಳು ಲಾಗ್‌ಔಟ್ ಆಗಿದ್ದು, ತೀವ್ರ ಆತಂಕ ಮೂಡಿಸಿದೆ.
ಕಂಪ್ಯೂಟರ್ ಹಾಗೂ ಲ್ಯಾಪ್‌ಟಾಪ್‌ಗಳಲ್ಲಿ ಫೇಸ್‌ಬುಕ್ ಬಳಸಲು ಯತ್ನಿಸುತ್ತಿರುವ ಜನರಿಗೆ “ಸರ್ವರ್ ತಾತ್ಕಾಲಿಕವಾಗಿ ಲಭ್ಯವಿಲ್ಲ” ಎಂಬ ಸಂದೇಶಗಳು ಪರದೆಯ ಮೇಲೆ ಮೂಡುತ್ತಿವೆ. ಶೀಘ್ರದಲ್ಲೇ ಈ ತಾಂತ್ರಿಕ ದೋಷವನ್ನು ಬಗೆಹರಿಸಲಾಗುವುದು, ಕೆಲ ನಿಮಿಷಗಳ ಬಳಿಕ ಪ್ರಯತ್ನಿಸಿ ಎಂದು ಸಂಸ್ಥೆ ಬಳಕೆದಾರರಲ್ಲಿ ವಿನಂತಿಸಿದೆ.
ವಿವಿಧ ಜಾಲತಾಣಗಳ ಸರ್ವರ್ ಸ್ಥಿತಿಗತಿಯನ್ನು ಟ್ರ್ಯಾಕ್ ಮಾಡುವ ‘ಡೌನ್‌ಡಿಟೆಕ್ಟರ್’ (DownDetector) ವರದಿ ಪ್ರಕಾರ, ಇಂದು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಸರ್ವರ್ ಸಂಪೂರ್ಣ ಡೌನ್ ಆಗಿದೆ. ಇದರಿಂದ ಬೇಸತ್ತ ಗ್ರಾಹಕರು ಎಕ್ಸ್ (ಟ್ವಿಟರ್) ತಾಣದಲ್ಲಿ ಮೆಟಾ ಕಂಪನಿಯ ವಿರುದ್ಧ ಜಟಾಪಟಿ ನಡೆಸುತ್ತಿದ್ದಾರೆ. ಪ್ರಸ್ತುತ ಮೆಟಾ ಸಂಸ್ಥೆಯ ತಾಂತ್ರಿಕ ತಜ್ಞರ ತಂಡವು ಈ ಸರ್ವರ್ ದೋಷವನ್ನು ಸರಿಪಡಿಸುವ ಪ್ರಕ್ರಿಯೆಯಲ್ಲಿ ನಿರತವಾಗಿದ್ದು, ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಮಾಧ್ಯಮಗಳ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಕಂಪನಿಯ ಮೂಲಗಳು ಭರವಸೆ ನೀಡಿವೆ.
Cholesterol problem ದೇಶದ ಹತ್ತು ವಯಸ್ಕರಲ್ಲಿ 9 ಮಂದಿಗೆ ಕೊಲೆಸ್ಟ್ರಾಲ್ ಸಮಸ್ಯೆ!