newsics.com
ತುಮಕೂರು: ಡ್ರೋನ್ ಮೂಲಕವೇ ದೇಶ ವಿದೇಶ ಸುತ್ತಾಡಿ ಬಳಿಕ ಕರ್ನಾಟಕ ರಾಜ್ಯ ಪ್ರವಾಸ ಮಾಡಿದ್ದ ಡ್ರೋನ್ ಪ್ರತಾಪ್ ಭಾರಿ ವಿವಾದ ಸೃಷ್ಟಿಸಿದ್ದರು. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಡ್ರೋನ್ ತಮ್ಮ ಇಮೇಜ್ ಬದಲಿಸಿಕೊಂಡಿದ್ದರು.
ಆದರೆ ಈಗ ಮತ್ತೆ ಪ್ರಚಾರ ಹಾಗೂ ಹಣದ ಬೆನ್ನತ್ತಿ ಡ್ರೋನ್ ಪ್ರತಾಪ್ಗೆ ಇದೀಗ ಸೋಡಿಯಂ ಬ್ಲಾಸ್ಟ್ ಪ್ರಕರಣ ಕೊರಳಿಗೆ ಸುತ್ತಿಕೊಂಡಿದೆ.
ಯುಟ್ಯೂಬ್ ವಿಡಿಯೋಗಾಗಿ ಕೃಷಿ ಹೊಂಡದಲ್ಲಿ ಸೋಡಿಯಂ ಹಾಕಿ ಸ್ಫೋಟ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ತುಮಕೂರಿನ ಮಿಡಿಗೇಶಿ ಪೊಲೀಸರು ಈಗಾಗಲೇ ಡ್ರೋನ್ ಪ್ರತಾಪ್ನನ್ನು ಬಂಧಿಸಿದ್ದಾರೆ.
ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಡ್ರೋನ್ ತಮ್ಮ ಇಮೇಜ್ ಬದಲಿಸಿಕೊಂಡಿದ್ದರು. ಉಗಿದು ಉಪ್ಪಿನಕಾಯಿ ಹಾಕಿದ್ದ ಅದೇ ಮಂದಿ ಡ್ರೋನ್ ಪ್ರತಾಪ್ ಜತೆ ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದಿದ್ದರು.
ಆದರೆ ಈಗ ಮತ್ತೆ ಪ್ರಚಾರ ಹಾಗೂ ಹಣದ ಬೆನ್ನತ್ತಿ ಡ್ರೋನ್ ಪ್ರತಾಪ್ಗೆ ಇದೀಗ ಸೋಡಿಯಂ ಬ್ಲಾಸ್ಟ್ ಪ್ರಕರಣ ಕೊರಳಿಗೆ ಸುತ್ತಿಕೊಂಡಿದೆ.
ಯುಟ್ಯೂಬ್ ವಿಡಿಯೋಗಾಗಿ ಕೃಷಿ ಹೊಂಡದಲ್ಲಿ ಸೋಡಿಯಂ ಹಾಕಿ ಸ್ಫೋಟ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ತುಮಕೂರಿನ ಮಿಡಿಗೇಶಿ ಪೊಲೀಸರು ಈಗಾಗಲೇ ಡ್ರೋನ್ ಪ್ರತಾಪ್ನನ್ನು ಬಂಧಿಸಿದ್ದಾರೆ.
ತನಿಖೆ ತೀವ್ರಗೊಳಿಸಿರುವ ಪೊಲೀಸರು ಸೋಡಿಯಂ ಮೂಲ ಪತ್ತೆಗೆ ಮುಂದಾಗಿದ್ದಾರೆ. ಡ್ರೋನ್ ಪ್ರತಾಪ್ ಗೆಳೆಯನ ಮೂಲಕ ಸೋಡಿಯಂ ಪಡೆದುಕೊಂಡಿದ್ದಾರೆ ಅನ್ನೋ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ. ಹೀಗಾಗಿ ಡ್ರೋನ್ ಬಳಿ ಗೆಳೆಯನ ಕುರಿತು ವಿಚಾರಣೆ ನಡೆಸಿದ್ದಾರ.
ಆದರೆ ಸ್ಫೋಟ ಪ್ರಕರಣದಲ್ಲಿ ಡ್ರೋನ್ ಪ್ರತಾಪ್ ಅರೆಸ್ಟ್ ಆಗುತ್ತಿದ್ದಂತೆ ಸೋಡಿಯಂ ಸ್ಫೋಟಕ ನೀಡಿದ ಗೆಳೆಯ ನಾಪತ್ತೆಯಾಗಿದ್ದಾನೆ. ಇದೀಗ ಪೊಲೀಸರು ಡ್ರೋನ್ ಪ್ರತಾಪ್ ಗೆಳೆಯನ ಹುಡುಕಾಟ ಆರಂಭಿಸಿದ್ದಾರೆ. ಈ ಸ್ಫೋಟಕವನ್ನು ಯಾವ ಅಂಗಡಿಯಲ್ಲಿ ಖರೀದಿ ಮಾಡಲಾಗಿದೆ ಅನ್ನೋದರ ತನಿಖೆಯೂ ನಡೆಯುತ್ತಿದೆ. ಡ್ರೋನ್ ಪ್ರತಾಪ್ ಗೆಳೆಯ ಈ ಸ್ಫೋಟಕ ಖರೀದಿಸಿ ನೀಡಿದ್ದಾನೆ ಎನ್ನಲಾಗುತ್ತಿದೆ. ಗೆಳೆಯನ ವಿಚಾರಣೆ ನಡೆಸಿದರೆ ಸ್ಫೋಟಕ ಖರೀದಿಸಿದ ಅಂಗಡಿ ಸೇರಿದಂತೆ ಇತರ ಮಾಹಿತಿಗಳು ಬಹಿರಂಗವಾಗಲಿದೆ.
ಸೋಶಿಯಲ್ ಮೀಡಿಯಾದ ವಿಡಿಯೋಗಾಗಿ ಈ ಸ್ಫೋಟ ನಡೆಸಲಾಗಿದೆ ಅನ್ನೋದನ್ನು ಡ್ರೋನ್ ಪ್ರತಾಪ್ ಹೇಳಿದ್ದಾರೆ. ಹಾಗಿದ್ದರೆ ಶೂಟ್ ಮಾಡಿದ ಕ್ಯಾಮೆರಾ ಎಲ್ಲಿ ಎಂದು ಪೊಲೀಸರು ಪ್ರಶ್ನಿಸಿದ್ದಾರೆ. ಈ ಕ್ಯಾಮೆರಾ ವಶಪಡಿಸಿಕೊಳ್ಳಲು ಪೊಲೀಸರು ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಪ್ರಕರಣ ಮೇಲ್ನೋಟಕ್ಕೆ ಸಾಮಾನ್ಯ ಎನಿಸಿದರೂ ಗಂಭೀರವಾಗಿದೆ. ಹೀಗಾಗಿ ಡ್ರೋನ್ ಸಂಕಷ್ಟಗಳ ಸರಮಾಲೆಯೆ ತೆರೆದುಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಮಿಡಿಗೇಶಿ ಠಾಣಾ ಪೊಲೀಸರು ಡ್ರೋನ್ ಪ್ರತಾಪ್ನ ಕರೆದುಕೊಂಡು ಸ್ಥಳ ಮಹಜರು ನಡೆಸಿದ್ದಾರೆ. ಸ್ಫೋಟಕ ನಡೆಸಿದ ಕೃಷಿ ಹೊಂಡದ ಬಳಿಯೂ ಮಹಜರು ನಡೆಸಲಾಗಿದೆ.
ಇತ್ತ ಸಾಮಾಜಿಕ ಮಾಧ್ಯಮಗಳಲ್ಲಿ ಡ್ರೋನ್ ಪ್ರತಾಪ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಅನುಮತಿ ಪಡೆಯದೆ ಸ್ಫೋಟ ನಡೆಸಿರುವುದು ದೊಡ್ಡ ತಪ್ಪು. ಕೃಷಿ ಹೊಂಡದಲ್ಲಿ ಸ್ಫೋಟ ನಡೆಸಿರುವುದು ಮತ್ತೊಂದು ದುರಂತ ಎಂದು ಪರಿಸರ ಪ್ರೇಮಿಗಳು ಡ್ರೋನ್ ಪ್ರತಾಪ್ ವಿರುದ್ಧ ಹರಿಹಾಯ್ದಿದ್ದಾರೆ. ಕಠಿಣ ಶಿಕ್ಷೆಗೆ ಆಗ್ರಹಿಸಿದ್ದಾರೆ. ಇದು ಎಲ್ಲರಿಗೂ ಪಾಠವಾಗಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಆಗ್ರಹಗಳು ಕೇಳಿಬರುತ್ತಿದೆ.
Pejawara Seer ನಕ್ಸಲ್ಪೀಡಿತ ಕಾಡಲ್ಲಿ ಪೇಜಾವರ ಶ್ರೀಗಳ ಮೆರವಣಿಗೆ, ಮೊಳಗಿದ ರಾಮಮಂತ್ರ!
SWIFT City ಬೆಂಗಳೂರಿನ ಸರ್ಜಾಪುರದಲ್ಲಿ ಸ್ವಿಫ್ಟ್ ಸಿಟಿ: ಸರ್ಕಾರ ನಿರ್ಧಾರ
Warning to Seer ನಮ್ಮ ತಂಟೆಗೆ ಬಂದರೆ ಕೈ ಕತ್ತರಿಸುತ್ತೇವೆ: ಪಂಚಮಸಾಲಿ ಶ್ರೀಗಳಿಗೆ ಎಚ್ಚರಿಕೆ