newsics.com
ನವದೆಹಲಿ: ವಿಮಾನದಲ್ಲಿನ ತಾಂತ್ರಿಕ ದೋಷದ ಪರಿಣಾಮ ಕುವೈತ್ ವಿಮಾನ ನಿಲ್ದಾಣದಲ್ಲಿ ಭಾರತೀಯ ಪ್ರಯಾಣಿಕರು ನೀರು, ಆಹಾರವಿಲ್ಲದೆ 13 ಗಂಟೆ ಪರದಾಡಿದ ಘಟನೆ ಬೆಳಕಿಗೆ ಬಂದಿದೆ.
ಮುಂಬೈನಿಂದ ಮ್ಯಾಂಚೆಸ್ಟರ್‌ಗೆ ತೆರಳುತ್ತಿದ್ದ ಭಾರತೀಯ ಪ್ರಯಾಣಿಕರು ಕಾದು ಕಾದು ಸುಸ್ತಾಗಿ ಏರ್‌ಪೋರ್ಟ್ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದಾರೆ.
ಗಲ್ಫ್ ಏರ್‌ನ ಪ್ರಯಾಣಿಕರು ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ವಾಗ್ವಾದ ಮಾಡುತ್ತಿರುವ ಅಸ್ತವ್ಯಸ್ತವಾಗಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಭಾರತೀಯ ಪ್ರಯಾಣಿಕರಿಗೆ ಮಾತ್ರ ಕಿರುಕುಳ ನೀಡಲಾಯಿತು. ವಿಮಾನಯಾನ ಸಂಸ್ಥೆಯು ಯುರೋಪಿಯನ್ ಯೂನಿಯನ್, ಯುಕೆ ಮತ್ತು ಯುಎಸ್‌ನ ಫ್ಲೈಯರ್‌ಗಳಿಗೆ ಮಾತ್ರ ವಸತಿ ನೀಡಿದೆ ಎಂದು ಆರೋಪಿಸಿದ್ದಾರೆ.
ಮುಂಬೈನಿಂದ ಮ್ಯಾಂಚೆಸ್ಟರ್‌ಗೆ ಹಾರುವ ಭಾರತೀಯ ಪ್ರಯಾಣಿಕರು ಕುವೈತ್ ವಿಮಾನ ನಿಲ್ದಾಣದಲ್ಲಿ 13 ಗಂಟೆಗಳ ಕಾಲ ಯಾವುದೇ ಆಹಾರ, ನೀರಿಲ್ಲದೆ ಸಿಲುಕಿಕೊಂಡಿದ್ದರು ಎಂದು ವರದಿಯಾಗಿದೆ.
BJP Source ಮಹಾರಾಷ್ಟ್ರ ಮುಖ್ಯಮಂತ್ರಿ ಪದವಿಗೆ ದೇವೇಂದ್ರ ಫಡ್ನವಿಸ್ ಹೆಸರು ಅಂತಿಮ
Leopard Tension ಯಲ್ಲಾಪುರದ ಹಿತ್ಲಳ್ಳಿಯಲ್ಲಿ ಚಿರತೆ ಓಡಾಟ: ಗ್ರಾಮಸ್ಥರಲ್ಲಿ ಆತಂಕ