Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Armistice ಇಸ್ರೇಲ್‌- ಹೆಜ್ಬೊಲ್ಲಾ ನಡುವಿನ ಸಂಘರ್ಷಕ್ಕೆ ಅಲ್ಪ ವಿರಾಮ, ಲೆಬನಾನ್ ಜನ ನಿಟ್ಟುಸಿರು
ಪ್ರಮುಖವಿದೇಶ

Armistice ಇಸ್ರೇಲ್‌- ಹೆಜ್ಬೊಲ್ಲಾ ನಡುವಿನ ಸಂಘರ್ಷಕ್ಕೆ ಅಲ್ಪ ವಿರಾಮ, ಲೆಬನಾನ್ ಜನ ನಿಟ್ಟುಸಿರು

Share
2 Min Read
SHARE

newsics.com

ಟೆಲ್‌ ಅವೀವ್‌: ಜಗತ್ತನ್ನು ಮೂರನೇ ಮಹಾಯುದ್ಧದ ಭೀತಿಗೆ ತಳ್ಳಿದ್ದ ಇಸ್ರೇಲ್‌ ಹಾಗೂ ಹೆಜ್ಬೊಲ್ಲಾ ನಡುವಿನ ಸಂಘರ್ಷಕ್ಕೆ ಕಡೆಗೂ ಬ್ರೇಕ್‌ ಬಿದ್ದಿದೆ.

ಅಮೆರಿಕದ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್‌ ಹಾಗೂ ಹೆಜ್ಬೊಲ್ಲಾ ಎರಡು ಕೂಡ ಒಪ್ಪಿಕೊಂಡಿದ್ದು, ಲೆಬನಾನ್‌ ಜನ ನಿಟ್ಟುಸಿರುಬಿಟ್ಟಿದ್ದಾರೆ.

ಬರೋಬ್ಬರಿ 13 ತಿಂಗಳ ಸುದೀರ್ಘ ಸಂಘರ್ಷಕ್ಕೆ ಅಮೆರಿಕ ಬ್ರೇಕ್‌ ಹಾಕಿದ್ದು, ಬುಧವಾರ ಬೆಳಗ್ಗೆ ನಾಲ್ಕು ಗಂಟೆಯಿಂದಲೇ ಇಸ್ರೇಲ್‌ ಹಾಗೂ ಲೆಬನಾನ್‌ನ ಹೆಜ್ಬೊಲ್ಲಾ ನಡುವೆ ಕದನ ವಿರಾಮ ಜಾರಿಯಾಗಿದೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಗೆ ಕೈಗೊಂಡ ಮೊದಲ ಹೆಜ್ಜೆ ಎನ್ನಲಾಗುತ್ತಿದೆ.

ನಮ್ಮ ರಕ್ಷಣೆಗೆ ಧಕ್ಕೆ ಬಂದರೆ ನಾವು ಪ್ರತಿಕ್ರಿಯಿಸುವುದು ನಿಶ್ಚಿತ ಎಂದು ಎರಡೂ ಕಡೆಯವರು ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಶ್ವೇತಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಇಸ್ರೇಲ್‌ ಹಾಗೂ ಹೆಜ್ಬೊಲ್ಲಾ ನಡುವೆ ಕದನ ವಿರಾಮವನ್ನು ಘೋಷಿಸಿದರು.

ದ್ವೇಷಕ್ಕೆ ಶಾಶ್ವತ ಬ್ರೇಕ್‌ ಹಾಕುವ ಉದ್ದೇಶದೊಂದಿಗೆ ಒಪ್ಪಂದವನ್ನು ವಿನ್ಯಾಸಗೊಳಿಸಲಾಗಿದೆ. ಬುಧವಾರ ಬೆಳಗ್ಗೆ ನಾಲ್ಕು ಗಂಟೆಯಿಂದ ಕದನ ವಿರಾಮ ಜಾರಿಗೆ ಬರಲಿದೆ ಎಂದರು.

ಜೋ ಬೈಡೆನ್‌ ಹಾಗೂ ಫ್ರೆಂಚ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಅವರು ಜಂಟಿ ಹೇಳಿಕೆ ಮೂಲಕ ಕದನ ವಿರಾಮ ಘೋಷಿಸಿದ್ದು, 60 ದಿನಗಳ ಇಸ್ರೇಲ್‌ ಹಾಗೂ ಹೆಜ್ಬೊಲ್ಲಾ ನಡುವಿನ ಯುದ್ಧಕ್ಕೆ ವಿರಾಮ ಸಿಕ್ಕಿದೆ.

ಈ ಕದನ ವಿರಾಮ ಒಪ್ಪಂದ ಮಧ್ಯಪ್ರಾಚ್ಯದಲ್ಲಿ ಶಾಂತಿಯನ್ನು ಶಾಶ್ವತವಾಗಿ ಮರುಸ್ಥಾಪಿಸಲು ಅಗತ್ಯವಾಗಿರುವ ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆ. ಮತ್ತು ಬ್ಲೂ ಲೈನ್‌ನ ಎರಡು ಬದಿಗಳಲ್ಲಿ ಎರಡೂ ಕಡೆಯ ಜನರು ತಮ್ಮ ತಮ್ಮ ನಿವಾಸಗಳಿಗೆ ವಾಪಸ್‌ ಆಗಲು ಅನುವು ಮಾಡಿಕೊಡಲಿದೆ ಎಂದು ಹೇಳಲಾಗಿದೆ. 2025ರ ಜನವರಿ 26ರವರೆಗೂ ಯುದ್ಧವನ್ನು ನಿಲ್ಲಿಸಲಿದೆ. ಈ ವೇಳೆ ಹೆಜ್ಬೊಲ್ಲಾ ಸಂಘಟನೆ ಇಸ್ರೇಲ್‌ ಹಾಗೂ ಲೆಬನಾನ್‌ ಗಡಿಯಿಂದ ಸುಮಾರು 40 ಕಿಲೋ ಮೀಟರ್‌ ದೂರ ಹೋಗಬೇಕಿದೆ. ಜೊತೆಗೆ ಲೆಬನಾನ್‌ನಿಂದ ಇಸ್ರೇಲ್‌ ತನ್ನ ಸೇನೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.

ಗಡಿಯಿಂದ ಹೆಜ್ಬೊಲ್ಲಾ ಉಗ್ರರನ್ನು ಹಿಂದಕ್ಕೆ ಸರಿಸಿದ ಬಳಿಕ ಆ ಪ್ರದೇಶವನ್ನು ಲೆಬನಾನ್‌ ಸೇನೆ ರಕ್ಷಿಸಲಿದೆ. ಜೊತೆಗೆ ಹೆಜ್ಬೊಲ್ಲಾ ಸಂಘಟನೆಯ ಎಲ್ಲ ಶಸ್ತ್ರಾಸ್ತ್ರಗಳನ್ನು, ಮದ್ದು-ಗುಂಡುಗಳನ್ನು ನಾಶಪಡಿಸಿ, ಅಲ್ಲಿ ಮತ್ತೆ ಹೆಜ್ಬೊಲ್ಲಾ ಸಂಘಟನೆ ಬರುವುದಿಲ್ಲ ಎಂಬುದನ್ನು ಲೆಬನಾನ್‌ ಖಚಿತ ಪಡಿಸಿಕೊಳ್ಳಲಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ಕದನ ವಿರಾಮ ಒಪ್ಪಂದದ ಪ್ರಕಾರ, ಲೆಬನಾನ್ ಸೇನೆ ದಕ್ಷಿಣ ಪ್ರದೇಶದಲ್ಲಿ ಸುಮಾರು 5,000 ಸೈನಿಕರನ್ನು ನಿಯೋಜಿಸುವ ನಿರೀಕ್ಷೆಯಿದೆ.

Court approval for divorce ನಟ ಧನುಷ್, ರಜನಿ ಪುತ್ರಿ ಐಶ್ವರ್ಯಾ ವಿಚ್ಛೇದನಕ್ಕೆ ಕೋರ್ಟ್ ಸಮ್ಮತಿ, 18 ವರ್ಷಗಳ ದಾಂಪತ್ಯ ಅಂತ್ಯ

Cabinet Reshuffle ಸಂಪುಟಕ್ಕೆ ಸದ್ಯದಲ್ಲೇ ಭಾರೀ ಸರ್ಜರಿ, ಯಾರ‌್ಯಾರಿಗೆ ಕೊಕ್, ಯಾರ‌್ಯಾರಿಗೆ ಲಕ್?

Different Bakery ಈ ಬೇಕರಿ ಹೆಸರೇ ‘ಜುಲೈ 30’! ಇದರ ಹಿಂದಿದೆ ಕರಾಳ ನೆನಪು… ಏನದು?

TAGGED:A brief respite for Israel-Hezbollah conflictLebanese people breathe a sigh of relief
Share This Article
Facebook Twitter Copy Link Print
Previous Article Today’s Almanac ಶುಭೋದಯ, ಇಂದಿನ ಪಂಚಾಂಗ, ಕಾರ್ತೀಕ ಮಾಸ ಕೃಷ್ಣ ಪಕ್ಷ ತ್ರಯೋದಶಿ, 28-11-2024, ಗುರುವಾರ, ಶ್ರೀ ಧನ್ವಂತರಿ ಜಯಂತಿ, ಪ್ರದೋಷ ಪೂಜೆ
Next Article Gold and Silver Price ಚಿನ್ನ ತುಸು ಅಗ್ಗ, ಬೆಳ್ಳಿ‌ ಬೆಲೆಯಲ್ಲಿಲ್ಲ ವ್ಯತ್ಯಾಸ

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?