newsics.com
ಬೆಂಗಳೂರು: ಭವಿಷ್ಯದಲ್ಲಿ ಉದ್ಯೋಗ ನೀಡಲಿರುವ ಏಕೈಕ ನಗರ ಬೆಂಗಳೂರು ಎಂದು ಉದ್ಯಮ ಕ್ಷೇತ್ರ ಹೇಳುತ್ತಿದೆ. ಇದಕ್ಕೆ ಪೂರಕವಾಗಿ ಇಲ್ಲಿ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ.
ಉದ್ಯೋಗ ನೀಡುವಲ್ಲಿ ದೆಹಲಿ, ಮುಂಬೈಗಿಂತ ಬೆಂಗಳೂರು ಮುಂದಿದೆ ಎಂಬುದು ಅಧ್ಯಯನ ವರದಿಯೊಂದು ಹೇಳಿದೆ. ಕೆಲಸ ಕೊಡಲು ಬೆಂಗಳೂರಲ್ಲಿ 62 ಸಾವಿರ ಕಂಪನಿಗಳು ಕಾಯುತ್ತಿವೆ ಎಂದು ವರದಿ ವಿವರಿಸಿದೆ.
2012-13ರಲ್ಲಿ ಕೋಲ್ಕತ್ತಾದಲ್ಲಿ 6,393 ಕಂಪನಿಗಳಿದ್ವು, ಆಮೇಲೆ 5,899ಕ್ಕೆ ಇಳಿದವು. ಬೆಂಗಳೂರಿನಲ್ಲಿ 2,000ಕ್ಕೂ ಹೆಚ್ಚು ಸಾಫ್ಟ್‌ವೇರ್ ಕಂಪನಿಗಳಿವೆ. ಇಲ್ಲಿ ಇಂಜಿನಿಯರ್ಸ್‌ಗೆ ಸಂಬಳ ಬೇರೆ ಊರುಗಳಿಗಿಂತ 13-33% ಜಾಸ್ತಿ.
ಒಂದು ವರದಿ ಪ್ರಕಾರ, ಬೆಂಗಳೂರಿನಲ್ಲಿ ಇಂಜಿನಿಯರ್ಸ್‌ಗೆ ವರ್ಷಕ್ಕೆ 8.8 ಲಕ್ಷ ಸಂಬಳ. ಕೋಲ್ಕತ್ತಾದಲ್ಲಿ 5.9 ಲಕ್ಷ. ಬ್ಲೂ ಕಾಲರ್ ಕೆಲಸಗಾರರಿಗೆ ಬೆಂಗಳೂರಿನಲ್ಲಿ ತಿಂಗಳಿಗೆ 16,498 ರೂ. ಸಂಬಳ. ಕೋಲ್ಕತ್ತಾದಲ್ಲಿ 14,039 ರೂ. ವೇತನವಿದೆ. ಹೀಗಾಗಿ ಬೆಂಗಳೂರು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಸ್ವರ್ಗವೆಂದೇ ಬಣ್ಣಿಸಲಾಗುತ್ತಿದೆ.
Relationship Tips| ದಾಂಪತ್ಯ ಜೀವನ ರೊಮ್ಯಾಂಟಿಕ್ ಆಗಿರಲು ಏನ್ ಮಾಡಬೇಕು?