newsics.com
ಪಣಜಿ : ರಜನಿಕಾಂತ್ ಅವರ ಜೈಲರ್ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿ ಭಾರೀ ಜನ ಮನ್ನಣೆ ಗಳಿಸಿದ್ದ ಮಲಯಾಳಂ ನಟ ವಿನಾಯಕನ್ ಗೋವಾದ ಬೀದಿಗಳಲ್ಲಿ ದೊಡ್ಡ ಗಲಾಟೆಯನ್ನು ಮಾಡಿದ್ದಾರೆ. ಸದ್ಯ ಅವರು ಅಂಗಡಿ ಮಾಲೀಕನ ಮೇಲೆ ಕೂಗಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
https://twitter.com/i/status/1859933225080193188
ವಿಡಿಯೋದಲ್ಲಿ ನಟ ಅಂಗಡಿಯವನೊಂದಿಗೆ ಗಲಾಟೆ ಮಾಡುವುದನ್ನು ಕಾಣಬಹುದು. ಗಲಾಟೆ ಮಾಡುವುದಾಗ, ಅವರು ತನ್ನ ಕೈಯನ್ನು ಹಿಂದೆ ಕಟ್ಟಿಕೊಂಡು ವಿಚಿತ್ರವಾಗಿ ವರ್ತಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವರ್ತನೆಯನ್ನು ನೋಡಿದ ಜನ ಕುಡಿದ ಅಮಲಿನಲ್ಲಿರಬಹುದು ಎಂದು ಊಹಿಸಿದ್ದಾರೆ. ನೆಟ್ಟಿಗರಿಂದ ತರಹೇವಾರಿ ಕಮೆಂಟ್ ಬಂದಿದ್ದು, ನಟ ಕುಡಿದ ಅಮಲಿನಲ್ಲಿ ತೇಲುತ್ತಿದ್ದಾರೆ ಎಂದು ಹೇಳಿದ್ದಾರೆ.
ಕಳೆದ 28 ವರ್ಷಗಳಿಂದ ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ವಿನಾಯಕನ್ ಅವರು ಮಲಯಾಳಂನ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿ, ಉತ್ತಮ ನಟ ಎನಿಸಿಕೊಂಡಿದ್ದಾರೆ. ಆದರೆ ಅವರ ಖಾಸಗಿ ಬದುಕು ಮಾತ್ರ ಯಾವಾಗಲೂ ವಿವಾದದಿಂದಲೇ ಕೂಡಿರುತ್ತದೆ. ಕೆಲ ತಿಂಗಳ ಹಿಂದೆ ತಮ್ಮ ಪತ್ನಿಯ ಜತೆ ಜಗಳ ಮಾಡಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಅವರ ಪತ್ನಿ ಅವರ ವಿರುದ್ಧ ದೂರು ಕೊಟ್ಟಿದ್ದರು. ನಂತರ ಎರ್ನಾಕುಲಂ ನಾರ್ತ್ ಠಾಣೆಯ ಪೊಲೀಸರು ಅವರನ್ನು ವಿಚಾರಣೆಗೆ ಕರೆದೊಯ್ದಿದ್ದರು. ಅಲ್ಲಿಯೂ ಸುಮ್ಮನಿರದ ವಿನಾಯಕನ್ ಪೊಲೀಸರ ವಿರುದ್ಧ ಕೂಗಾಟ ನಡೆಸಿದ್ದರು . ನಂತರ ಅವರನ್ನು ಬಂಧಿಸಲಾಗಿತ್ತು.