newsics.com
ಪುಷ್ಪ-2 ಚಿತ್ರದ ಬಹುನಿರೀಕ್ಷಿತ ಐಟಂ ಸಾಂಗ್ನ ಪ್ರೋಮೋ ರಿಲೀಸ್ ಆಗಿದ್ದು, ಸಖತ್ ಸದ್ದು ಮಾಡುತ್ತಿದೆ. ಇಂದು ʼಕಿಸ್ಸಿಕ್ʼ ಹಾಡಿನ ಪ್ರೋಮೋ ಬಿಡುಗಡೆಯಾಗಿದೆ. ‘ಕಿಸ್ ಕಿಸ್ ಕಿಸಾ’ ಸಾಂಗಿನಲ್ಲಿ ಶ್ರೀಲೀಲಾ ಸ್ಪೇಪ್ಸ್ ಹೇಗಿರಲಿದೆ ಅಂತ ನೋಡೋಕೆ ಪ್ರೇಕ್ಷಕರು ಕಾಯುತ್ತಿದ್ದಾರೆ. ನವೆಂಬರ್ 24 ರಂದು ಸಂಜೆ 7:02 ಕ್ಕೆ ಫುಲ್ ಸಾಂಗ್ ರಿಲೀಸ್ ಆಗುತ್ತಿದೆ.
https://youtu.be/unIBp-ccUzk?si=VG5KepayLQX4r5Y2
ಹಾಡನ್ನು ಸುಬ್ಲಾಷಿನಿ ತೆಲುಗು, ತಮಿಳು, ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ ಹಾಡಿದ್ದಾರೆ. ಲೋಹಿತಾ ಹಿಂದಿ, ಪ್ರಿಯಾ ಜೆರ್ಸನ್ ಮಲಯಾಳಂ, ಉಜ್ಜಯಿನಿ ಮುಖರ್ಜಿ ಬಂಗಾಳಿಯಲ್ಲಿ ಹಾಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ಅದ್ಧೂರಿ ಬಜೆಟ್ನಲ್ಲಿ ನಿರ್ಮಿಸಿದ್ದಾರೆ.
ಸದ್ಯ ಅಲ್ಲು ಅರ್ಜುನ್-ಸುಕುಮಾರ್ ಕಾಂಬಿನೇಷನ್ನಲ್ಲಿ ಬರುತ್ತಿರುವ ಪುಷ್ಪ-2 ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಅದರಲ್ಲೂ ಕಿಸಿಕ್ ಹಾಡಿನ ಮೇಲಿರುವ ನಿರೀಕ್ಷೆ ಸಾಕಷ್ಟಿದೆ.