newsics.com
ಕಾರವಾರ(ಉತ್ತರ ಕನ್ನಡ): ಜಿಲ್ಲೆಯ ಮುಂಡಗೋಡದ ಬೃಂದಾವನ ಬಡಾವಣೆಯಲ್ಲಿನ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಮಂಗನಬಾವು ಕಾಯಿಲೆಯ ಅಬ್ಬರ ಜೋರಾಗಿದೆ. ಇಲ್ಲಿನ 6 ರಿಂದ 10 ನೇ ತರಗತಿ ಮಕ್ಕಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ಶೀತ, ಜ್ವರ, ಕೆಮ್ಮು ಹಾಗೂ ಮುಖದ ಬಾವು ಕಾಣಿಸಿಕೊಂಡಿದೆ.
ತಕ್ಷಣ ಚಿಕಿತ್ಸೆ ಕೊಡಿಸಲಾಗಿದ್ದರೂ ಕಳೆದ ಎರಡು ದಿನದ ಹಿಂದೆ ಒಬ್ಬರಿಂದ ಮತ್ತೊಬ್ಬರಿಗೆ ಹರಡಿ ಸೋಂಕಿತರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.
ಇದೀಗ ಮತ್ತಷ್ಟು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 75ಕ್ಕೆ ಏರಿಕೆಯಾಗಿದೆ. ಸದ್ಯ ಸೋಂಕಿತ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಲಾಗಿದೆ. ಆದರೆ ವಸತಿ ಶಾಲೆಯಲ್ಲಿ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಇವರಿಗೆಲ್ಲ ಸೋಂಕಿನ ಆತಂಕ ಶುರುವಾಗಿದೆ.
ಸೋಂಕಿನ ಲಕ್ಷಣ ಹೆಚ್ಚಾದ ಮಕ್ಕಳನ್ನು ಪಾಲಕರನ್ನು ಕರೆಸಿ ಮನೆಗೆ ಕಳುಹಿಸಲಾಗಿದೆ. ತಾಲೂಕು ವೈದ್ಯಾಧಿಕಾರಿ ಸ್ಥಳ ಪರಿಶೀಲನೆ ನಡೆಸಿದ್ದು, ಸೋಂಕಿತರನ್ನು ಮುಂಡಗೋಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗನಬಾವು ರೋಗವು ನೀರು ಮತ್ತು ಸೋಂಕಿತರ ಸಂಪರ್ಕದಿಂದ ಹರಡುತ್ತದೆ. ಹೀಗಾಗಿ ಮತ್ತಷ್ಟು ವಿದ್ಯಾರ್ಥಿಗಳು ಸೋಂಕಿತರಾಗುವ ಆತಂಕ ಉಂಟಾಗಿದೆ.
ಲಕ್ಷಣಗಳೇನು?
ಆರಂಭದಲ್ಲಿ ಶೀತ, ಜ್ವರ, ಕೆಮ್ಮು ಕಾಣಿಸಿಕೊಂಡು ಬಳಿಕ ಮುಖದ ಮೇಲೆ ಬಾವು ಕಾಣಿಸುತ್ತದೆ. ಮಕ್ಕಳಲ್ಲಿ ಕಾಣಿಸಿಕೊಂಡ ಮಂಗನಬಾವು ಇದೀಗ ಮತ್ತಷ್ಟು ಗಂಭೀರವಾಗತೊಡಗಿದೆ.
Madhu Bangarappa ಟ್ರೋಲ್ ಮಾಡೋದನ್ನು ನಿಲ್ಸಿ: ಮಾಧ್ಯಮಗಳಿಗೆ ಶಿಕ್ಷಣ ಸಚಿವ ತಾಕೀತು
Stylish jeans pant ಸ್ಟೈಲಿಶ್ ಜೀನ್ಸ್ಗೆ ಬೀದಿಯಲ್ಲೇ ಹೊಲಿಗೆ: ಆತ್ಮಹತ್ಯೆಗೆ ಯತ್ನಿಸಿದ ಯುವಕ