newsics.com
ಚೈತ್ರಾ ಕುಂದಾಪುರ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಮಾತಿನ ಮೂಲಕ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ಆದರೆಹೊರಗಿನ ಅಭಿಪ್ರಾಯಗಳನ್ನು ಬಿಗ್ ಬಾಸ್ ಮನೆಯಲ್ಲಿ ಬಹಿರಂಗಪಡಿಸಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಇದಕ್ಕಾಗಿ ಕಿಚ್ಚ ಸುದೀಪ್ ತರಾಟೆಗೆ ತಬ್ಬಿಬ್ಬಾಗಿ ಕಣ್ಣೀರಿಟ್ಟಿದ್ದಾರೆ.
ಇತ್ತೀಚೆಗೆ ಅವರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ಹೋಗಿ ಬಂದಿದ್ದರು. ಹೊರಹೋಗಿ ಬಂದ ಅವರು ಎಲ್ಲಾ ಸ್ಪರ್ಧಿಗಳಿಗೆ ಯಾವ ರೀತಿಯಲ್ಲಿ ಆಡಬೇಕು ಎಂಬುದರ ಹಿಂಟ್ ಕೊಟ್ಟಿದ್ದರು. ಇದು ಹೊರಗಿನ ಅಭಿಪ್ರಾಯ ಎಂದು ಕೂಡ ಹೇಳಿದ್ದರು.
ಇದರಿಂದ ಸುದೀಪ್ ಸಖತ್ ಸಿಟ್ಟಾಗಿದ್ದಾರೆ. ಅಲ್ಲದೆ ಖಡಕ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ನಂತರ ಚೈತ್ರಾ ಕ್ಷಮೆ ಕೇಳಿದರು. ಈ ಕ್ಷಮೆಯನ್ನು ಸುದೀಪ್ ಅವರು ಒಪ್ಪಿಲ್ಲ. ‘ನಾನು ತಲೆಕೆಟ್ ನನ್ಮಗ’ ಎಂದಿದ್ದಾರೆ ಸುದೀಪ್.
ಈ ವಾರ ಚೈತ್ರಾಗೆ ಕಿಚ್ಚ ಸುದೀಪ್ ಮಿತಿ ಮೀರಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದಕ್ಕೆ ಚೈತ್ರಾ ಶಾಕ್ ಆಗಿದ್ದಾರೆ. ಅವರಿಗೆ ಏನು ಹೇಳಬೇಕು ಎಂದು ತಿಳಿಯದೆ ಕಣ್ಣಿನ ತುಂಬ ನೀರು ತುಂಬಿಕೊಂಡು ಮಾತನಾಡಲು ತಡಬಡಿಸಿದ್ದಾರೆ.
ತಾವು ಗಟ್ಟಿ ಧ್ವನಿಯಲ್ಲಿ ಮಾತನಾಡಿದ್ದಕ್ಕೆ ಸುದೀಪ್ ಅವರು ಚೈತ್ರಾ ಬಳಿ ಕ್ಷಮೆ ಕೇಳಿದರು. ಆದರೆ, ಈ ಕ್ಷಮೆಗೆ ಚೈತ್ರಾ ಅವರು ಸ್ವಲ್ಪವೂ ಗಮನ ಕೊಡಲೇ ಇಲ್ಲ. ಇದಕ್ಕೆ ಸುದೀಪ್ ಬೇಸರ ಮಾಡಿಕೊಂಡರು.
ತಪ್ಪಿನ ಅರಿವಾದ ಬಳಿಕ ಚೈತ್ರಾ ಅವರ ಕಡೆಯಿಂದಲೇ ಕ್ಷಮೆ ಬಂತು. ‘ನಾನು ಕ್ಷಮೆ ಕೇಳಿದಾಗ ನೀವು ಸ್ಪಂದಿಸಿಲ್ಲ. ಹೀಗಿರುವಾಗ ನಿಮ್ಮ ಕ್ಷಮೆಗೆ ನಾನೇಕೆ ಸ್ಪಂದಿಸಲಿ? ಅಯ್ಯೋ ನಾನು ತಲೆ ಕೆಟ್ ನನ್ನ ಮಗ. ಹುಚ್ಚ ಇಂದ ಕರಿಯರ್ ಶುರು ಮಾಡಿದವನು ನಾನು. 28 ವರ್ಷ ಅದರಲ್ಲೇ ಬದುಕಿದೀನಿ. ನಾನು ಕ್ಷಮೆ ಕೇಳಿದಾಗ ಸ್ಪಂದಿಸಿದರೆ ಒಳ್ಳೆ ಮನುಷ್ಯ. ಇಲ್ಲ ಎಂದರೆ ನನ್ನಂತ ತಲೆಕೆಟ್ಟವರು ಯಾರೂ ಇಲ್ಲ’ ಎಂದಿದ್ದಾರೆ ಸುದೀಪ್.
ನಂತರ ಚೈತ್ರಾ ಅವರು ಕ್ಯಾಮೆರಾ ಬಳಿ ಹೋಗಿ ‘ವಾತಾವರಣ ಉಸಿರುಗಟ್ಟಿಸುತ್ತಿದೆ. ನಾನು ಮನೆಯಿಂದ ಹೊರ ಹೋಗಬೇಕು. ನನ್ನ ಕಳುಹಿಸಿ’ ಎಂದು ಕೋರಿದ್ದಾರೆ. ಆದರೆ ಸುದೀಪ್ ಈ ಕೋರಿಕೆಯನ್ನು ತಳ್ಳಿಹಾಕಿದ್ದಾರೆ. ಈ ವಾತಾವರಣ ಸೃಷ್ಟಿಗೆ ನೀವೇ ಕಾರಣ ಎಂದಿದ್ದಾರೆ. ಬರುವಾಗ ನಿಮ್ಮ ನಿರ್ಧಾರ. ಹೋಗುವ ತೀರ್ಮಾನ ನಿಮ್ಮದಲ್ಲ. ನಾವು ಹೇಳಿದಾಗಲೇ ನೀವು ಹೊರಹೋಗಬೇಕಾಗುತ್ತದೆ ಎಂದು ವಿವಾದಕ್ಕೆ ತೆರೆ ಎಳೆದಿದ್ದಾರೆ.
ಆಸ್ಪತ್ರೆಗೆ ಹೋಗಿ ಹೊರಗಿನ ಅಭಿಪ್ರಾಯ ಹೊತ್ತು ತಂದ ಚೈತ್ರಾ ಕುಂದಾಪುರಗೆ ಕಿಚ್ಚ ತರಾಟೆ
ರೈಲುಗಳಲ್ಲಿ ರೀಲ್ಸ್ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ರೈಲ್ವೆ ಇಲಾಖೆ ನಿರ್ಧಾರ
ಪಡಿತರ ಚೀಟಿದಾರರಿಗೆ ಶಾಕ್; 60 ಸಾವಿರ ಬಿಪಿಎಲ್ ಕಾರ್ಡ್ ಎಪಿಎಲ್‌ಗೆ ಶಿಫ್ಟ್!