newsics.com
ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ದೂರುದಾರ ಸ್ನೇಹಮಯಿ ಕೃಷ್ಣ ಅವರು ಇದೀಗ ಮತ್ತೊಂದು ಸಾಕ್ಷಿ ಬಹಿರಂಗಪಡಿಸಿದ್ದು, ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಸಿಎಂ ಸಿದ್ದರಾಮಯ್ಯ ಪತ್ನಿ ವಿಚಾರದಲ್ಲಿ ತಹಸೀಲ್ದಾರ್ ಅವರೇ ಹಣ ಪಾವತಿಸಿದ್ದಾರೆ. ಮುದ್ರಾಂಕ ಶುಲ್ಕವನ್ನು ತಹಸೀಲ್ದಾರ್ ಅವರೇ ಪಾವತಿ ಮಾಡಿದ್ದಾರೆ ಎಂದು ಮತ್ತೊಂದು ಕ್ರಯಪತ್ರದ ಸಾಕ್ಷಿ ನೀಡಿದ್ದಾರೆ.

ಸ್ನೇಹಮಯಿ ಕೃಷ್ಣ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ಮುಡಾ ಪ್ರಕರಣದಲ್ಲಿ ತಮ್ಮ ಪ್ರಭಾವ ಇಲ್ಲ ಎಂದು ಹೇಳುತ್ತಿರುವ ಸಿದ್ದರಾಮಯ್ಯನವರಿಗೆ, ನಿಮ್ಮ ಪ್ರಭಾವ ಇದೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಕೊಡುತ್ತಿದ್ದೇನೆ. ಕ್ರಯಪತ್ರ ನೊಂದಣಿ ಮಾಡಿಸಿಕೊಳ್ಳುವವರು ನೋಂದಣಿಗೆ ಸಂಬಂಧಿಸಿದ ಶುಲ್ಕಗಳನ್ನು ಪಾವತಿ ಮಾಡಬೇಕು, ಅದೇ ರೀತಿ ಎನ್.ಮಂಜುನಾಥ್ ಅವರು ಮುದ್ರಾಂಕ ಶುಲ್ಕ ಪಾವತಿ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯನವರ ಪತ್ನಿ ಶ್ರೀಮತಿ ಪಾರ್ವತಿ ಅವರ ಕ್ರಯಪತ್ರಕ್ಕೆ ಮುಡಾದ ವಿಶೇಷ ತಹಸೀಲ್ದಾರ್ ಮುದ್ರಾಂಕ ಶುಲ್ಕ ಪಾವತಿ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಪ್ರಭಾವ ಇದೆ ಎನ್ನುವ ನನ್ನ ವಾದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಎಂದು ಸ್ನೇಹಮಯಿ ಕೃಷ್ಣ ಪ್ರಶ್ನಿಸಿದ್ದಾರೆ.
ಸಣಕಲು ಕಡ್ಡಿಯಂತಾದ ಸುನೀತಾ ವಿಲಿಯಮ್ಸ್; ಗಗನಯಾನಿ ಹೆಲ್ತ್ ಬಗ್ಗೆ ನಾಸಾ ಕಳವಳ!
ಇಂದು ಅಕ್ಷಯ ನವಮಿ: 3 ನಕ್ಷತ್ರಗಳ ಶುಭ ಸಂಯೋಗ, ಈ ಐದು ರಾಶಿಯವರಿಗೆ ಸುಯೋಗ