newsics.com
ನವದೆಹಲಿ: ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಲೋರ್ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವ ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ವಿಲ್ನೋರ್ ಅವರ ಫೋಟೋವನ್ನು ನಾಸಾ ಬಿಡುಗಡೆ ಮಾಡಿದ್ದು, ಇದು ಗಗನಯಾತ್ರಿಗಳ ಆರೋಗ್ಯದ ಬಗ್ಗೆ ಗಂಭೀರ ಚರ್ಚೆ ಹುಟ್ಟುಹಾಕಿದೆ.
ಎಂಟು ದಿನಗಳ ಮಟ್ಟಿಗೆ ಅಂತಾರಾಷ್ಟ್ರೀಯ ಪ್ರಯಾಣ ಹಮ್ಮಿಕೊಂಡಿದ್ದ ಈ ಇಬ್ಬರು ಗಗನಯಾತ್ರಿಗಳು ಸದ್ಯ ಆರು ತಿಂಗಳಾದರೂ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ಗಗನಯಾತ್ರಿಗಳ ಆರೋಗ್ಯದ ಬಗ್ಗೆ ಕಳವಳ ವ್ಯಕ್ತವಾಗುತ್ತಿರುವ ನಡುವೆಯೇ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಅವರು ಇತ್ತೀಚಿನ ಫೋಟೋದಲ್ಲಿ ಸಾಕಷ್ಟು ತೆಳ್ಳಗೆ ಕಾಣುತ್ತಿದ್ದಾರೆ. ಚಿತ್ರ ನೋಡಿದರೆ ಸುನಿತಾ ವಿಲಿಯಮ್ಸ್ ತೂಕ ಇಳಿಸಿಕೊಂಡಂತೆ ಹಾಗೂ ಪೌಷ್ಟಿಕತೆಯಿಂದ ಆರೋಗ್ಯವೂ ಹದಗೆಟ್ಟಂತೆ ಕಾಣಿಸಿಕೊಳ್ಳುತ್ತಿದೆ.
ಈಗಾಗಲೇ 6 ತಿಂಗಳಿಂದ ಅಂತಾರಾಷ್ಟ್ರೀಯ ಬ್ಯಾಹ್ಯಾಕಾಶ ಕೇಂದ್ರದಲ್ಲಿ ಸಿಲುಕಿಕೊಂಡಿರುವ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಹಾಗೂ ಬಚ್ ವಿಲ್ನೋರ್ ಆರೋಗ್ಯ ಗಣನೀಯವಾಗಿ ಕ್ಷೀಣಿಸಿದೆ. ಸುನೀತಾ ವಿಲಿಯಮ್ಸ್ ನಂಬಲು ಅಸಾಧ್ಯವಾದ ರೀತಿಯಲ್ಲಿ ತಮ್ಮ ದೇಹದ ತೂಕ ಕಳೆದುಕೊಂಡಿದ್ದು ಆತಂಕ ಮೂಡಿಸಿದೆ.
ಇತ್ತೀಚೆಗೆ ಸುನೀತಾ ವಿಲಿಯಮ್ಸ್ ಅವರ ಹೊಸ ಫೋಟೋಗಳು ಲಭ್ಯವಾಗಿದೆ. ಸುನೀತಾ ವಿಲಿಯಮ್ಸ್ ಬಾಹ್ಯಾಕಾಶ ಪ್ರಯಾಣ ಮಾಡುವಾಗ ಅವರು 63 ಕೆಜಿ ಇದ್ದರು. ಆದ್ರೆ ಈಗಿನ ಫೋಟೋಗಳಲ್ಲಿ ಬಹುತೇಕ ಅವರ ಅರ್ಧದಷ್ಟು ತೂಕ ಕಳೆದುಕೊಂಡಂತೆ ಕಾಣುತ್ತಿದ್ದಾರೆ. ಈ ವೇಳೆ ಅವರ ಮುಖದಲ್ಲಿ ಯಾವ ಲವಲವಿಕೆ ಕೂಡ ಇಲ್ಲ.
ಅನಿರೀಕ್ಷಿತವಾಗಿ ಅವಧಿಗಿಂತ ಹೆಚ್ಚಿನ ಕಾಲ ಬ್ಯಾಹಾಕಾಶದಲ್ಲಿ ಸಿಲುಕಿಕೊಂಡ ಕಾರಣದಿಂದ ಅವರ ದೇಹರಚನೆ ಸಂಪೂರ್ಣ ಬದಲಾಗಿದೆ. ಕೇವಲ ಎಂಟು ದಿನಕ್ಕಾಗಿ ಬಾಹ್ಯಾಕಾಶಕ್ಕೆ ಪ್ರಯಾಣ ಮಾಡಿದ್ದ ಸುನೀತಾ ವಿಲಿಯಮ್ಸ್ ಹಾಗೂ ಬಚ್ ವಿಲೋರ್ ತಾಂತ್ರಿಕ ಸಮಸ್ಯೆಯಿಂದಾಗಿ 150ಕ್ಕೂ ಅಧಿಕ ದಿನಗಳ ಕಾಲ ಐಎಸ್‌ಎಸ್‌ನಲ್ಲಿ ವಾಸ ಮಾಡುವಂತಾಗಿದೆ. ಈಗಾಗಲೇ ನಾಸಾ ವೈದ್ಯರು, ಅವರ ಆರೋಗ್ಯವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಶುರುಮಾಡಿದ್ದಾರೆ.