newsics.com
ಬೆಂಗಳೂರು : ಆಟೋ ಚಾಲಕರೊಬ್ಬರು ತನ್ನ ಆಟೋದಲ್ಲಿ ಸಿಕ್ಕಂತಹ ಬೆಲೆಬಾಳುವ ಚಿನ್ನದ ಸರವನ್ನು ಅದರ ಮಾಲೀಕರಿಗೆ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.
ಇತ್ತೀಚಿಗೆ ಮೈಸೂರಿನ ತಳಿರು ಫೌಂಡೇಶನ್ ಸಂಸ್ಥಾಪಕಿ ಚಿತ್ರಾ ಅವರು ಬೆಂಗಳೂರಿಗೆ ಬಂದಂತಹ ಸಂದರ್ಭದಲ್ಲಿ ತಮ್ಮ ಬೆಳೆ ಬಾಳುವ ಚಿನ್ನದ ಸರವನ್ನು ಕಳೆದುಕೊಂಡಿರುತ್ತಾರೆ. ಮರುದಿನ ಇವರ ಮನೆಗೆ ಬಂದಂತಹ ಆಟೋ ಚಾಲಕರೊಬ್ಬರು ಕಳೆದುಹೋದ ಚಿನ್ನದ ಸರವನ್ನು ಚಿತ್ರಾ ಅವರಿಗೆ ವಾಪಸ್ ನೀಡುತ್ತಾರೆ.
ಬೆಂಗಳೂರಿನ ಆಟೋ ಚಾಲಕರಾದ ಗಿರೀಶ್ ಅವರಿಗೆ ಈ ಚಿನ್ನದ ಸರ ತಮ್ಮ ಆಟೋದಲ್ಲಿ ಸಿಕ್ಕಿದ್ದು, ಈ ಬೆಲೆಬಾಳುವ ವಸ್ತು ಯಾರದ್ದೆಂದು ಪತ್ತೆ ಹಚ್ಚಿ, ʼನಗರ ಮೀಟರ್ಡ್ ಆಟೋʼ ಅಪ್ಲಿಕೇಷನ್ ಸಹಾಯದ ಮೂಲಕ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸಿ ಚಿತ್ರಾರಿಗೆ ಚಿನ್ನದ ಸರವನ್ನು ಸೇಫ್ ಆಗಿ ವಾಪಸ್ ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.
ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಆಟೋ ಚಾಲಕನ ಈ ಮಾನವೀಯ ಕಾರ್ಯಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ