newsics.com
ಮೈಸೂರು: ಮುಡಾದಲ್ಲಿ 14 ಬದಲಿ ನಿವೇಶನಗಳ ದಾಖಲೆ ನಾಪತ್ತೆ ಬಗ್ಗೆ ದೂರು ನೀಡಿದ್ದ ಆರ್ಟಿಐ ಕಾರ್ಯಕರ್ತ ಗಂಗರಾಜುಗೆ ಇಡಿ ನೋಟಿಸ್ ನೀಡಿದೆ.
ಅಗತ್ಯ ದಾಖಲೆ ಜತೆ ಸೋಮವಾರ ಬೆಂಗಳೂರಿನ ಇಡಿ ಕಚೇರಿಗೆ ಬರಲು ಸೂಚಿಸಲಾಗಿದೆ. ಆದರೆ ಯಾವ ವಿಚಾರಕ್ಕೆ ನೋಟಿಸ್ ಎಂಬುದರ ಬಗ್ಗೆ ಇಡಿ ಮಾಹಿತಿ ನೀಡಿಲ್ಲ. ಹೀಗಾಗಿ ಇಡಿ ಅಧಿಕಾರಿಗಳ ನಡೆ ಕುತೂಹಲ ಮೂಡಿಸಿದೆ.
ಇಡಿ ಅಧಿಕಾರಿಗಳಿಂದ ನೋಟಿಸ್ ಜಾರಿ ವಿಚಾರವಾಗಿ ಮಾತನಾಡಿದ ಗಂಗರಾಜು, ಇಡಿ ನನಗೆ ಸಮನ್ಸ್ ನೀಡಿದೆ. ಆದರೆ ಯಾವ ಪ್ರಕರಣ ಗೊತ್ತಿಲ್ಲ. ನಾನು ಸಾಕಷ್ಟು ವಿಚಾರವಾಗಿ ಹೋರಾಟ ಮಾಡಿದ್ದೇನೆ. ಮುಡಾದಲ್ಲಿ ಹಲವಾರು ದಾಖಲೆ ನಾಪತ್ತೆಯಾಗಿವೆ. ಇಡಿ ಕೇಳುವ ಎಲ್ಲಾ ದಾಖಲೆ ಕೊಡಲು ನಾನು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ 20 ಗುಂಟೆ ಜಾಗ ಖರೀದಿ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಹಿನಕಲ್ ನಿವೇಶನ ಹಂಚಿಕೆ ಅಕ್ರಮ ಸೇರಿ ಹಲವು ದೂರು ನೀಡಿದ್ದೆ. ಈ ಹಿನ್ನೆಲೆಯಲ್ಲಿ ಇಡಿ ಸಮನ್ಸ್ ನೀಡಿರಬಹುದು. ಲೋಕಾಯುಕ್ತ ಅಧಿಕಾರಿಗಳು ಸೀಮಿತವಾಗಿ ತನಿಖೆ ಮಾಡುತ್ತಿದ್ದಾರೆ. ಇಡಿಯಿಂದ ಮಾತ್ರ ಸಮಗ್ರ ತನಿಖೆ ಸಾಧ್ಯ. ಈ ಹಿನ್ನೆಲೆಯಲ್ಲಿ ಇಡಿ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ನನ್ನ ಬಳಿ ಸಾಕಷ್ಟು ದಾಖಲೆಗಳಿವೆ. ಎಲ್ಲವನ್ನೂ ಇಡಿಗೆ ನೀಡುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಇತ್ತೀಚೆಗೆ ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಯವರ ವಿಚಾರಣೆ ಮಾಡಲಾಗಿದೆ. ಬೆಳಗ್ಗೆ 10 ಗಂಟೆಗೆ ಲೋಕಾಯುಕ್ತ ಕಚೇರಿಗೆ ಬಂದಿದ್ದ ಪಾರ್ವತಿಯವರು, ಮೂರು ಗಂಟೆಗಳ ಕಾಲ ವಿಚಾರಣೆ ಎದುರಿಸಿ, ಹೇಳಿಕೆ ದಾಖಲಿಸಿ ತೆರಳಿದ್ದರು. ಆ ಮೂಲಕ ಲೋಕಾಯುಕ್ತ ಪೊಲೀಸರು ಗೌಪ್ಯವಾಗಿ ಮಾಹಿತಿ ಸಂಗ್ರಹಿಸಿರೋದು, ಪಾರ್ವತಿಯವರ ವಿಚಾರಣೆ ನಡೆಸಿರೋದು ಮಹತ್ವ ಪಡೆದುಕೊಂಡಿದೆ.
ಈವರೆಗೆ A2ಪಾರ್ವತಿ, A3 ಮಲ್ಲಿಕಾರ್ಜುನ ಸ್ವಾಮಿ, A4 ದೇವರಾಜು ವಿಚಾರಣೆ ನಡೆಸಲಾಗಿದ್ದು, ಪ್ರಕರಣ A1 ಸಿದ್ದರಾಮಯ್ಯ ವಿಚಾರಣೆ ಮಾತ್ರ ಬಾಕಿ ಇದೆ.
ದೀಪಾವಳಿ ಬಳಿಕ ಸಿಎಂ ಸಿದ್ದರಾಮಯ್ಯ ಅವರನ್ನು ಲೋಕಾಯುಕ್ತ ಹಾಗೂ ಇಡಿ ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ.
ಚಿನ್ನ, ಬೆಳ್ಳಿ ದಾಖಲಾರ್ಹ ಏರಿಕೆ ನಿರೀಕ್ಷೆ, ಹೂಡಿಕೆಗಿದು ಅತ್ಯುತ್ತಮ ಮಾರ್ಗ
ಮನ್ ಕಿ ಬಾತ್ನಲ್ಲಿ ಡಿಜಿಟಲ್ ಅರೆಸ್ಟ್ ಕುರಿತು ಡೆಮೋ ನೀಡಿ ಜಾಗೃತಿ ಮೂಡಿಸಿದ ಪ್ರಧಾನಿ ಮೋದಿ