newsics.com
ಮಂಗಳೂರು: ತುಳುನಾಡಿನ ಜಾನಪದೀಯ ಕ್ರೀಡೆ ಕಂಬಳದ ಋತು ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇವೆ.
ಈ ಬಾರಿ ಮೊದಲ ಕಂಬಳ ಬೆಂಗಳೂರಿನಲ್ಲಿ ನಡೆದರೆ, ಕೊನೆಯ ಕಂಬಳ ಮಲೆನಾಡು ಶಿವಮೊಗ್ಗದಲ್ಲಿ ನಡೆಯಲಿದೆ. ಅಕ್ಟೋಬರ್ 26ರಂದು ಬೆಂಗಳೂರಲ್ಲಿ ಮೊದಲ ಕಂಬಳ ನಡೆಯಲಿದೆ.
ಕಂಬಳದ ಕೂಟದಲ್ಲಿ ಭಾಗವಹಿಸಲು ಕೋಣಗಳನ್ನು ಕೋಣಗಳ ಯಜಮಾನರು ಹುರಿಗೊಳಿಸುತ್ತಿದ್ದಾರೆ.
ಕಂಬಳದ ಪೂರ್ವತಯಾರಿ ಎಂಬಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಪ್ರತೀ ವಾರಾಂತ್ಯದಲ್ಲಿ ಕುದಿ ಕಂಬಳಗಳು ನಡೆಯುತ್ತಿವೆ. ಕೋಣಗಳ ವೇಗ, ಜೋಡಿಯ ಸಾಮರ್ಥ್ಯ ತಿಳಿಯಲು ಕುದಿ ಕಂಬಳವನ್ನು ಅಲ್ಲಲ್ಲಿ ನಡೆಸಲಾಗುತ್ತಿದೆ. ಇದರ ಜತೆ ಸ್ನೇಹಕೂಟ ಕಂಬಳಗಳೂ ಭರ್ಜರಿಯಾಗಿ ನಡೆಯುತ್ತಿವೆ.
ಕಳೆದ ಬಾರಿ ಚಾಂಪಿಯನ್ ಆದ ಕೋಣಗಳು ಈ ಬಾರಿಯೂ ಚಾಂಪಿಯನ್ ಆಗಬೇಕೇಂದಿಲ್ಲ. ಬೇರೆ ಕೋಣಗಳೂ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿ ಓಡಬಲ್ಲವು. ಅದಕ್ಕಾಗಿಯೇ ಕುದಿ ಕಂಬಳದಲ್ಲಿ ಕೋಣಗಳ ಚಿಗರೆಯ ವೇಗ, ಕಾಲುಗಳ ಚಲನೆಯನ್ನು ಗಮನಿಸಿ ಮುಂದಿನ ಸ್ಪರ್ಧೆಗೆ ಜೋಡಿಗಳನ್ನು ನಿರ್ಧಾರ ಮಾಡಲಾಗುತ್ತದೆ.
2024ರ ವೇಳಾಪಟ್ಟಿ:
ಅಕ್ಟೋಬರ್ 26 – ಬೆಂಗಳೂರು
ನವೆಂಬರ್ 9 – ಪಿಲಿಕುಳ
ನವೆಂಬರ್ 16 – ಪಣಪಿಲ
ನವೆಂಬರ್ 23 – ಕೊಡಂಗೆ
ನವೆಂಬರ್ 30 – ಕಕ್ಕೆಪದವು
ಡಿಸೆಂಬರ್ 7 – ಹೊಕ್ಕಾಡಿಗೋಳಿ
ಡಿಸೆಂಬರ್ 14 – ಬಾರಾಡಿಬೀಡು
ಡಿಸೆಂಬರ್ 21 – ಮೂಲ್ಕಿ
ಡಿಸೆಂಬರ್ 28 – ಮಂಗಳೂರು
ಜನವರಿ 4 – ಮಿಯ್ಯಾರು
ಜನವರಿ 11 – ನರಿಂಗಾನ
ಜನವರಿ 18 – ಅಡ್ವೆ
ಜನವರಿ 25 – ಮೂಡುಬಿದಿರೆ
ಫೆಬ್ರವರಿ 1 – ಐಕಳ
ಫೆಬ್ರವರಿ 8 – ಜೆಪ್ಪು
ಫೆಬ್ರವರಿ 15 – ವಾಮಂಜೂರು
ಫೆಬ್ರವರಿ 22 – ಕಟಪಾಡಿ
ಮಾರ್ಚ್ 1 – ಪುತ್ತೂರು
ಮಾರ್ಚ್ 8 – ಬಂಗಾಡಿ
ಮಾರ್ಚ್ 15 – ಬಂಟ್ವಾಳ
ಮಾರ್ಚ್ 22 – ಉಪ್ಪಿನಂಗಡಿ
ಮಾರ್ಚ್ 29 – ವೇಣೂರು
ಏಪ್ರಿಲ್ 5 – ಬಳ್ಕುಂಜೆ
ಏಪ್ರಿಲ್ 12 – ಗುರುಪುರ
ಏಪ್ರಿಲ್ 19 – ಶಿವಮೊಗ್ಗ
ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬಯಸುವ ಭಕ್ತರಿಗಿಲ್ಲಿದೆ ಮಹತ್ವದ ಮಾಹಿತಿ
ಪಾಕ್ ಪರ ಘೋಷಣೆ ಕೂಗಿದ ದೇಶದ್ರೋಹಿಗೆ ವಿಶಿಷ್ಟ ಶಿಕ್ಷೆ ವಿಧಿಸಿದ ಹೈಕೋರ್ಟ್
ಹಲವು ದೇಶಗಳಲ್ಲಿ ಯುದ್ಧ ಭೀತಿ: ಅಮೆರಿಕ ಬೆಂಬಲಿತ ಪಡೆ ಮೇಲೆ ರಷ್ಯಾ ದಾಳಿ, ಪುಟಿನ್ ಬೆಂಬಲಿಗರ ಮೇಲೆ ಇಸ್ರೇಲ್ ಆಕ್ರಮಣ