newsics.com
ಇನ್ನು 10 ವರ್ಷಗಳಲ್ಲಿ ಪುರುಷರು ತಮ್ಮ ಲೈಂಗಿಕ ಅಗತ್ಯಗಳನ್ನು ಪೂರೈಸಲು ರೋಬೋಟ್‌ಗಳನ್ನು ಬಳಸುತ್ತಾರೆ. 2025ರ ವೇಳೆಗೆ ರೋಬೋಟ್ ಲೈಂಗಿಕತೆಯ ರೂಪಗಳು ಶ್ರೀಮಂತ ಕುಟುಂಬಗಳಲ್ಲಿ ಹುಟ್ಟಿಕೊಳ್ಳುತ್ತವೆ. ಮಹಿಳೆಯರು ಪುರುಷರ ಜತೆಗಿನ ಲೈಂಗಿಕತೆಗಿಂತ ರೋಬೋಟ್‌ಗಳೊಂದಿಗಿನ ಲೈಂಗಿಕತೆಯನ್ನೇ ಹೆಚ್ಚು ಬಯಸುತ್ತಾರೆ ಎಂದು ‘ದಿ ಸನ್’ ಪತ್ರಿಕೆ ವರದಿಮಾಡಿದೆ.
ಭವಿಷ್ಯಶಾಸ್ತ್ರಜ್ಞ ಡಾ. ಇಯಾನ್ ಪಿಯರ್ಸನ್ ಅವರ ಭವಿಷ್ಯ ಆಧರಿಸಿ ದಿ ಸನ್ ಪತ್ರಿಕೆ ಈ ವರದಿ ಪ್ರಕಟಿಸಿದೆ.
ಇನ್ಮುಂದೆ ಮಹಿಳೆಯರು ರೋಬೋಟ್‌ಗಳನ್ನೇ ಪ್ರೀತಿಸಲು ಪ್ರಾರಂಭಿಸಬಹುದು ಎಂದು ಪಿಯರ್ಸನ್ ಹೇಳಿದ್ದಾರೆ. ಆದರೆ ಅನೇಕರು ಅವರ ಆಲೋಚನೆಗಳನ್ನು ತಳ್ಳಿಹಾಕಿದ್ದಾರೆ.
ಲೈಂಗಿಕ ಆಟಿಕೆಗಳು, ಲೈಂಗಿಕ ಗೊಂಬೆಗಳು ಮತ್ತು ಕೃತಕ ಬುದ್ಧಿಮತ್ತೆ(AI) ಮತ್ತು ರೋಬೋಟ್‌ಗಳ ಮಿಶ್ರಣದಲ್ಲಿ ಬೆಳೆಯುತ್ತಿರುವ ಲೈಂಗಿಕ ಅಗತ್ಯಗಳ ಉದ್ಯಮದ ಬಳಕೆ ಹೆಚ್ಚುತ್ತಿರುವ ಬಗ್ಗೆ ವರದಿ ಉಲ್ಲೇಖಿಸಿದೆ.
ಲೈಂಗಿಕ ಆಟಿಕೆಗಳು ಮತ್ತು ವೈಬ್ರೇಟರ್‌ಗಳು ಮುಖ್ಯವಾಹಿನಿಯ ಸಂಭಾಷಣೆಗಳನ್ನು ಪ್ರವೇಶಿಸುವ ಉದಾಹರಣೆಗಳನ್ನು ಉಲ್ಲೇಖಿಸಿರುವ ಪಿಯರ್ಸನ್, ಅಶ್ಲೀಲತೆಯನ್ನು ನೋಡುವುದಕ್ಕಿಂತ ಮಹಿಳೆಯರಲ್ಲಿ ರೋಬೋಟ್ ಸೆಕ್ಸ್ ಹೆಚ್ಚು ಜನಪ್ರಿಯವಾಗಲು ಹೆಚ್ಚು ಸಮಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
2050ರ ವೇಳೆಗೆ ಸಾಮಾನ್ಯ ಲೈಂಗಿಕತೆಗಿಂತ ರೋಬೋಟ್ ಸೆಕ್ಸ್ ಹೆಚ್ಚು ಸಾಮಾನ್ಯವಾಗಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
‘ದಿ ರೈಸ್ ಆಫ್ ದಿ ರೋಬೋಸೆಕ್ಸುವಲ್ಸ್’ ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿರುವ ದಿ ಸನ್ ಪತ್ರಿಕೆ, 2030ರ ವೇಳೆಗೆ ವರ್ಚುವಲ್ ರಿಯಾಲಿಟಿ ಸೆಕ್ಸ್ ಸಾಮಾನ್ಯವಾಗಲಿದೆ ಎಂದು ಹೇಳಿದೆ. 2035 ರ ವೇಳೆಗೆ ಲೈಂಗಿಕ ಆಟಿಕೆಗಳು ವರ್ಚುವಲ್ ರಿಯಾಲಿಟಿ ಸೆಕ್ಸ್‌ಗೆ ಲಿಂಕ್ ಮಾಡುತ್ತವೆ ಎಂದು ವರದಿ ವಿವರಿಸಿದೆ.
ರಾಜ್ಯದ ಪಿಜಿ, ಹಾಸ್ಟೆಲ್‌ಗಳಲ್ಲಿರುವವರಲ್ಲಿ ಎಚ್‌ಐವಿ ಸೋಂಕು, ಹೆಚ್ಚಿದ ಆತಂಕ
ಬಟ್ಟೆ ಸರಿಯಾಗಿ ಧರಿಸದಿದ್ರೆ ಆ್ಯಸಿಡ್ ಎರಚುವೆ!; ಬೆದರಿಕೆ ಹಾಕಿದ ವ್ಯಕ್ತಿ ಕೆಲಸದಿಂದ ವಜಾ