Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > ಸಿದ್ಧಿ ದಯಪಾಲಿಸುವ ಸಿದ್ಧಿದಾತ್ರೀ: ನವರಾತ್ರಿ ಒಂಬತ್ತನೇ ದಿನ
ಅನಾವರಣಪ್ರಮುಖ

ಸಿದ್ಧಿ ದಯಪಾಲಿಸುವ ಸಿದ್ಧಿದಾತ್ರೀ: ನವರಾತ್ರಿ ಒಂಬತ್ತನೇ ದಿನ

Share
2 Min Read
SHARE

newsics.com

11.10.2024

ಸಿದ್ಧಗಂಧರ್ವಯಕ್ಷಾದ್ವೈ
ರಸುರೈರಮರೈರಪಿ | ಸೇವ್ಯಮಾನಾಸದಾಭೂಯಾತ್
ಸಿದ್ಧಿದಾ ಸಿದ್ಧಿದಾಯಿನೀ ||

ನವರಾತ್ರಿಯ ಒಂಬತ್ತನೇ ದಿನ ದೇವಿಯ ಸ್ವರೂಪದ ಹೆಸರು ಸಿದ್ಧಿದಾತ್ರೀ. ಹೆಸರೇ ಸೂಚಿಸುವಂತೆ ಸಿದ್ಧಿಯನ್ನು ಅನುಗ್ರಹಿಸುವವಳು ಅಥವಾ ನೀಡುವವಳು ಈ ಮಹಾತಾಯಿ.

ಮಾರ್ಕಂಡೇಯ ಪುರಾಣದ ಪ್ರಕಾರ ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಮ್ಯ, ಈಶಿತ್ವ ಹಾಗೂ ವಶಿತ್ವ ಹೀಗೆ ಎಂಟು ಸಿದ್ಧಿಗಳನ್ನು ಹೇಳಲಾಗಿದೆ. ಜಗಜ್ಜನನಿಯನ್ನು ಆರಾಧನೆ ಮಾಡುವುದರಿಂದ, ಅದರಲ್ಲೂ ಶರನ್ನವರಾತ್ರಿಯ ಒಂಬತ್ತನೇ ದಿನದಂದು ಸಿದ್ಧಿದಾತ್ರೀ ಸ್ವರೂಪದಲ್ಲಿ ಆರಾಧಿಸುವುದರಿಂದ ಈ ಎಲ್ಲ ಸಿದ್ಧಿಗಳು ಪ್ರಾಪ್ತವಾಗುತ್ತವೆ.

ದೇವಿಪುರಾಣದಲ್ಲಿನ ಉಲ್ಲೇಖದ ಪ್ರಕಾರ, ಆ ಮಹಾಶಿವನಿಗೆ ಇವಳ ಕೃಪೆಯಿಂದಲೇ ಈ ಎಲ್ಲ ಸಿದ್ಧಿಗಳು ದೊರೆತಿತ್ತು. ಅಷ್ಟೇ ಅಲ್ಲ, ಸಿದ್ಧಿದಾತ್ರೀ ಅನುಗ್ರಹದಿಂದಲೇ ಶಿವನ ಅರ್ಧಶರೀರವು ದೇವಿಯದಾಗಿತ್ತು. ಆದ್ದರಿಂದಲೇ ಶಿವನು ಜಗತ್ತಿನಲ್ಲಿ ಅರ್ಧನಾರೀಶ್ವರ ಎಂಬ ಹೆಸರಿನಿಂದ ಪ್ರಖ್ಯಾತನಾದ, ಆದರ್ಶನಾದ.

ಸಿದ್ಧಿದಾತ್ರೀ ದೇವಿಯ ಸ್ವರೂಪ:

ಈ ದೇವಿಗೆ ನಾಲ್ಕು ಭುಜಗಳು. ವಾಹನ ಸಿಂಹ. ಈಕೆ ಕಮಲದ ಹೂವಿನ ಮೇಲೆ ಕುಳಿತಿದ್ದಾಳೆ. ತಾಯಿಯ ಕೆಳಗಿನ ಬಲಗೈಯಲ್ಲಿ ಚಕ್ರವಿದೆ, ಮೇಲಿನದರಲ್ಲಿ ಗದೆ ಇದೆ. ಎಡಗಡೆಯ ಕೆಳಗಿನ ಕೈಯಲ್ಲಿ ಶಂಖ ಹಿಡಿದಿದ್ದರೆ, ಮೇಲಿನ ಕೈಯಲ್ಲಿ ಕಮಲದ ಹೂವಿದೆ.

ಯಾರು ಶರನ್ನವರಾತ್ರಿಯ ಒಂಬತ್ತನೇ ದಿನದಂದು ಈ ಸಿದ್ಧಿದಾತ್ರೀ ದೇವಿಯ ಆರಾಧನೆ ಮಾಡುತ್ತಾರೋ ಅಂಥವರಿಗೆ ಎಲ್ಲ ಸಿದ್ಧಿಗಳನ್ನು ಆ ತಾಯಿ ಅನುಗ್ರಹಿಸುತ್ತಾಳೆ. ಈ ಸೃಷ್ಟಿಯಲ್ಲಿ ಆ ವ್ಯಕ್ತಿಗೆ ನಿಲುಕಲಾರದ್ದು ಎಂಬುದು ಯಾವುದೂ ಇರುವುದಿಲ್ಲ.

ನವರಾತ್ರಿಯಲ್ಲಿ ದೇವಿಯ ಒಂಬತ್ತು ಸ್ವರೂಪಗಳನ್ನು ವಿವರಿಸುತ್ತ ಕೊನೆಯದಾಗಿ ಬರುವುದು ಸಿದ್ಧಿದಾತ್ರೀ ದೇವಿ ಸ್ವರೂಪವಾಗಿದೆ. ಉಳಿದ ಎಂಟು ದಿನಗಳಂತೆ ಒಂಬತ್ತನೇ ದಿನದಂದು ಸಹ ಈ ದೇವಿಯ ಆರಾಧನೆ ಮಾಡುವುದರಿಂದ ಆರಾಧಕರ ಲೌಕಿಕ-ಪಾರಮಾರ್ಥಿಕ ಎಲ್ಲ ಬಗೆಯ ಕೋರಿಕೆಗಳು ನೆರವೇರುತ್ತವೆ. ಆ ಭಗವತಿ ಸಿದ್ಧಿದಾತ್ರೀ ದೇವಿ ಅನುಗ್ರಹಿಸಿದ ಮೇಲೆ ಬೇರೆ ಯಾವ ಕೃಪೆ, ಅನುಗ್ರಹ, ರಕ್ಷಣೆ ಆ ಆರಾಧಕರಿಗೆ ಅಗತ್ಯವಿರುವುದಿಲ್ಲ.

ಹದಿನೆಂಟು ಸಿದ್ಧಿಗಳ ಹೆಸರು:

ಅಣಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಮ್ಯ, ಮಹಿಮಾ, ಈಶಿತ್ವ ಹಾಗೂ ವಶಿತ್ವ, ಸರ್ವಕಾಮಾವಸಾಯಿತಾ, ಸರ್ವಜ್ಞತ್ವ, ದೂರಶ್ರವಣ, ಪರಕಾಯ ಪ್ರವೇಶನ, ವಾಕ್ ಸಿದ್ಧಿ, ಕಲ್ಪವೃಕ್ಷತ್ವ, ಸೃಷ್ಟಿ, ಸಂಹಾರಕರಣಸಾಮರ್ಥ್ಯ, ಅಮರತ್ವ, ಸರ್ವನ್ಯಾಯಕತ್ವ, ಭಾವನಾ ಸಿದ್ಧಿ.

Dasara Special | ಅಲೌಕಿಕ ಸಿದ್ಧಿಗಳನ್ನು ನೀಡುವ ಮಹಾಗೌರಿ: ನವರಾತ್ರಿ ಎಂಟನೇ ದಿನ

Dasara Special | ಪಾಪಗಳನ್ನು ಸಂಹರಿಸುವ ಕಾಲರಾತ್ರಿ: ನವರಾತ್ರಿ ಏಳನೇ ದಿನ

Dasara Special | ಸೌಭಾಗ್ಯ ನೀಡುವ ಕಾತ್ಯಾಯಿನಿ: ನವರಾತ್ರಿ ಆರನೇ ದಿನ

Dasara Special | ಸ್ಕಂದಮಾತೆಯ ಕೃಪಾದೃಷ್ಟಿ: ನವರಾತ್ರಿ ಐದನೇ ದಿನ

Dasara Special | ಯಶಸ್ಸು ಕರುಣಿಸುವ ಕೂಷ್ಮಾಂಡಾ: ನವರಾತ್ರಿ ನಾಲ್ಕನೇ ದಿನ

ದುರ್ಗೆಯ ಸ್ವರೂಪ ಚಂದ್ರಘಂಟಾ: ನವರಾತ್ರಿ ಮೂರನೇ ದಿನ

Dasara Special | ದ್ವಿತೀಯಂ ಬ್ರಹ್ಮಚಾರಿಣಿ: ನವರಾತ್ರಿ ಎರಡನೇ ದಿನ

ನವರಾತ್ರಿ ಮೊದಲ ದಿನ: ಶೈಲಪುತ್ರಿ ಸ್ವರೂಪ ಆರಾಧನೆ

TAGGED:Siddhidatri which bestows Siddhi: Navratri is the ninth day
Share This Article
Facebook Twitter Copy Link Print
Previous Article ಶುಭೋದಯ‌… ಇಂದಿನ ಪಂಚಾಂಗ, 11-10-2024, ಶುಕ್ರವಾರ, ದುರ್ಗಾಷ್ಟಮಿ
Next Article 4 ವರ್ಷಗಳಿಂದ ಮಗಳ ಮೇಲೆ ಅತ್ಯಾಚಾರ – ಆರೋಪಿಗಾಗಿ ಹುಡುಕಾಟ

Popular Posts

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read

You Might Also Like

ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read
ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read
ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?