newsics.com
ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣ ಆರೋಪಿ ದರ್ಶನ್ ಜಾಮೀನು ಅರ್ಜಿ ಕುರಿತ ವಿಚಾರಣೆ ಕಳೆದ ಕೆಲವು ದಿನಗಳಿಂದ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ನಡೆದಿದ್ದು, ದರ್ಶನ್ ಪರ ವಕೀಲ ಸಿವಿ ನಾಗೇಶ್ ಹಾಗೂ ಎಸ್ಪಿಪಿ ಪ್ರಸನ್ನ ಕುಮಾರ್ ನಡುವೆ ತುರುಸಿನ ವಾದ-ಪ್ರತಿವಾದಗಳು ನಡೆದಿವೆ.
ಇಬ್ಬರೂ ವಕೀಲರು ವಾದ ಸರಣಿಯನ್ನು ನ್ಯಾಯಾಲಯದ ಮುಂದಿರಿಸಿದ್ದಾರೆ. ಗುರುವಾರವೂ ವಾದ ನಡೆದಿದ್ದು, ಇಬ್ಬರೂ ವಕೀಲರು ತಮ್ಮ ವಾದಗಳನ್ನು ಅಂತ್ಯಗೊಳಿಸಿದ್ದಾರೆ. ವಾದ- ಪ್ರತಿವಾದ ಆಲಿಸಿದ ನ್ಯಾಯಾಧೀಶರು ಆದೇಶವನ್ನು ಅಕ್ಟೋಬರ್ 14ಕ್ಕೆ ಕಾಯ್ದಿರಿಸಿದ್ದಾರೆ
.
ಅಕ್ಟೋಬರ್ 14 ರಂದು ಎ2 ಆರೋಪಿ ದರ್ಶನ್‌ಗೆ ಜಾಮೀನು ಸಿಗುತ್ತದೆಯೋ ಇಲ್ಲವೋ ಎಂಬುದು ತಿಳಿಯಲಿದೆ. ಅದೇ ದಿನ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ, ಎ8 ರವಿಶಂಕರ್, ಎ8, ಎ11, ಎ12 ಹಾಗೂ ಎ13 ಅವರ ಜಾಮೀನು ಅರ್ಜಿಯ ಆದೇಶವೂ ಅದೇ ದಿನ ಹೊರಬೀಳಲಿದೆ. ಅಕ್ಟೋಬರ್ 14 ರಂದು ಎ13 ದೀಪಕ್ಗೆ ಜಾಮೀನು ಸಿಗುವುದು ಖಾತ್ರಿಯಾಗಿದೆ. ಏಕೆಂದರೆ ದೀಪಕ್ ಗೆ ಜಾಮೀನು ನೀಡಲು ಎಸ್ಪಿಪಿ ತಕರಾರು ಎತ್ತಿಲ್ಲ. ಆದರೆ ಇನ್ನುಳಿದ ಯಾವುದೇ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದಿದ್ದಾರೆ.
ಮಿಲ್ಟನ್ ಚಂಡಮಾರುತ: ಫ್ಲೋರಿಡಾದಲ್ಲಿ ರಣಭೀಕರ ಮಳೆ, 3 ಗಂಟೆಯಲ್ಲಿ 16 ಇಂಚು ಮಳೆ!
ರತನ್ ಟಾಟಾ ಅವರ ನ್ಯಾನೋ ಕಾರಿಗೆ ಸ್ಪೂರ್ತಿಯಾಗಿದ್ದು ಆ ಘಟನೆ; ನಿಮಗೆ ಗೊತ್ತಿರದ ಕಥೆ!