Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ರತನ್ ಟಾಟಾ ಅವರ ನ್ಯಾನೋ ಕಾರಿಗೆ ಸ್ಪೂರ್ತಿಯಾಗಿದ್ದು ಆ ಘಟನೆ; ನಿಮಗೆ ಗೊತ್ತಿರದ ಕಥೆ!
ಪ್ರಮುಖ

ರತನ್ ಟಾಟಾ ಅವರ ನ್ಯಾನೋ ಕಾರಿಗೆ ಸ್ಪೂರ್ತಿಯಾಗಿದ್ದು ಆ ಘಟನೆ; ನಿಮಗೆ ಗೊತ್ತಿರದ ಕಥೆ!

Share
2 Min Read
SHARE

newsics.com

ರತನ್ ಟಾಟಾ ಸಾವಿಗೆ ಇಡೀ ದೇಶವೇ ಕಂಬನಿ ಮಿಡಿದಿದೆ. ರತನ್ ಟಾಟಾ ಮಾಲೀಕತ್ವದ ಟಾಟಾ ಮೋಟಾರ್ಸ್, ದೇಶೀಯ ವಾಹನ ಮಾರುಕಟ್ಟೆಗೆ ಮಹತ್ತರವಾದ ಕೊಡುಗೆ ನೀಡಿದ್ದು, ವಾಣಿಜ್ಯ ಮತ್ತು ಪ್ರಯಾಣಿಕ ವಾಹನಗಳ ಮಾರಾಟಕ್ಕೆ ಹೆಸರುವಾಸಿಯಾಗಿದೆ.

ಅತೀ ಶ್ರೀಮಂತಿಕೆಯಲ್ಲಿ ಜನಿಸಿದ್ದರೂ ಅವರ ಚಿಂತನೆಗಳೆಲ್ಲವೂ ಸಮಾಜದ ತಳ ಮಟ್ಟದ ಜೀವನ ಮಟ್ಟ ಸುಧಾರಿಸುವ ಯೋಜನೆಗಳ ರೂಪಿಸುವುದೇ ಆಗಿದ್ದವು. ಇಂತಹ ರತನ್ ಟಾಟಾ ಅವರು ಬೆಂಗಳೂರಿನಲ್ಲಿ ನಡೆದ ಒಂದು ಘಟನೆಯ ಬಗ್ಗೆ ನೆನಪು ಮಾಡಿಕೊಂಡಿದ್ದರು. ಆ ಘಟನೆಯೇ ಅವರು ನ್ಯಾನೋ ಕಾರ್‌ ಆರಂಭಿಸುವುದಕ್ಕೆ ಸ್ಪೂರ್ತಿಯಾಗಿತ್ತು, ಇದೇ ವಿಚಾರವನ್ನು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದು, ಅವರ ಮಾತುಗಳು ಈಗ ವೈರಲ್ ಆಗುತ್ತಿವೆ.

ಹೌದು, ಬೆಂಗಳೂರಿನಲ್ಲಿ ರತನ್ ಟಾಟಾ ಅವರು ಪ್ರಯಾಣಿಸುತ್ತಿದ್ದ ವೇಳೆ ಒಂದು ಸ್ಕೂಟರ್ ಒಂದು ಅವರ ಕಾರಿನ ಮುಂದೆಯೇ ಸ್ಲಿಪ್ ಆಗಿ ಬಿದ್ದಿತ್ತು. ಈ ವೇಳೆ ನಮ್ಮ ಕಾರು ಚಾಲಕ ಕಾರು ನಿಲ್ಲಿಸಿದ ಆದರೆ ಸ್ಕೂಟರ್‌ ಸ್ಲಿಪ್ ಆದ ಪರಿಣಾಮ ಸ್ಕೂಟರ್‌ನಲ್ಲಿದ್ದವರೆಲ್ಲರೂ ರಸ್ತೆಗೆ ಬಿದ್ದಿದ್ದರು. ಈ ವೇಳೆ ನನಗೆ ನಾವು ಇದಕ್ಕೆನಾದರು ಮಾಡಬೇಕು ಎಂಬ ಯೋಚನೆ ಬಂತು. ನಂತರ ಹಾಗೆಯೇ ಸ್ಕೂಟರಲ್ಲಿ ಸಂಚರಿಸುವವರು ಅಪಘಾತವಾದರೆ ಅಥವಾ ಕೆಳಗೆ ಬಿದ್ದರೆ ಸುರಕ್ಷಿತವಾಗಿರಲು ಸಾಧ್ಯವೇ ಎಂಬ ಬಗ್ಗೆ ಹಲವು ತಿಂಗಳುಗಳು ಪ್ರಯೋಗದಲ್ಲಿ ಕಳೆಯಿತು. ಈ ಪ್ರಕ್ರಿಯೆಯಲ್ಲಿ ನಮಗೆ ಸ್ಕೂಟರ್‌ ರೈಡರ್‌ಗಳನ್ನು ಸುರಕ್ಷಿತವಾಗಿಸಲು ಸಾಧ್ಯವಿಲ್ಲ ಎಂದು ತಿಳಿಯಿತು.

ಇದೇ ವೇಳೆ ನಾವು ಏಕೆ ಜನರಿಗೆ ಕೈಗೆಟುಕುವ ದರದ ಕಾರನ್ನು ತಯಾರಿಸಬಾರದು ಎಂಬ ಯೋಚನೆ ಬಂತು. ಅತ್ಯಂತ ದುಬಾರಿ ಕಾರು, ಅತ್ಯಂತ ಕಡಿಮೆ ಬೆಲೆಯ ಕಾರು ಹಾಗೂ ಮೋಟರ್ ಬೈಕ್‌ಗಳ ಮಧ್ಯೆ ಏಕೆ ನಾಲ್ಕರಿಂದ ಐದು ಜನ ಪ್ರಯಾಣಿಸುವ ಕುಟುಂಬಕ್ಕೆ ಕೈಗೆಟುಕುವ ಕಾರನ್ನು ನಿರ್ಮಿಸಬಾರದು ಎಂಬ ಯೋಚನೆ ಬಂತು. ಎಲ್ಲಾ ಸ್ಥಿತಿಯಲ್ಲೂ ಕುಟುಂಬವೊಂದು ಪ್ರಯಾಣಿಸುವ ಮೋಟಾರ್ ಬೈಕ್ ಅಲ್ಲ ಕಾರು ಸಾಮಾನ್ಯ ಜನರನ್ನು ತಲುಪಬೇಕು ಎಂಬ ಯೋಚನೆ ಬಂತು ಎಂದು ಟಾಟಾ ಹೇಳಿಕೊಂಡಿದ್ದರು. ಅದರ ಪರಿಣಾಮವೇ ಟಾಟಾ ನ್ಯಾನೋ ಕಾರಿನ ಬಿಡುಗಡೆ.

ಆದರೆ ಟಾಟಾ ಅವರ ಕನಸಿನಂತೆ ಅದು ಭಾರತದಲ್ಲಿ ಅಷ್ಟೊಂದು ಜನಪ್ರಿಯವಾಗಲಿಲ್ಲ, ಬಡವರಿಗೆ ಸಹಾಯವಾಗಲಿ ಎಂದು ಹೊರ ತಂದ ಈ ಕಾರು ಟಾಟಾ ಅವರಿಗೆ ಲಾಭಕ್ಕಿಂತ ಹೆಚ್ಚು ನಷ್ಟವನ್ನೇ ಉಂಟು ಮಾಡಿತ್ತು. ಟಾಟಾ ಕಾರು ಮಾರುಕಟ್ಟೆಗೆ ಬಂದ ಆರಂಭದಲ್ಲಿ ಕೆಲವೆಡೆ ಬೆಂಕಿಗೆ ಆಹುತಿಯಾಗಿತ್ತು. ಇದು ಟಾಟಾ ಅವರ ಕನಸಿಗೆ ಬೆಂಕಿ ಹಚ್ಚಿತ್ತು. ಕಾರಿನ ಬಗ್ಗೆ ಎಲ್ಲೆಡೆ ಅಪಪ್ರಚಾರವಾಯ್ತು. ಪರಿಣಾಮ ಟಾಟಾ ಅವರಿಗೆ ಭಾರಿ ನಷ್ಟವೂ ಆಗಿತ್ತು.

TAGGED:That incident was the inspiration for Tata's Nano car; A story you don't know!
Share This Article
Facebook Twitter Copy Link Print
Previous Article ವಾಶ್ರೂಮ್ನಲ್ಲಿ ನೀವು ಅವಶ್ಯಕತೆಗಿಂತ ಹೆಚ್ಚು ಕಾಲ ಕಳೆಯುತ್ತಿದ್ದೀರಾ..? ಎಚ್ಚರ..
Next Article ಕಲಬುರಗಿ: ಸೈಯದ್ ಪೀರ್ ದರ್ಗಾ ಧ್ವಂಸಗೊಳಿಸಿದ ಕಿಡಿಗೇಡಿಗಳು

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?