Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > Dasara Special | ಸ್ಕಂದಮಾತೆಯ ಕೃಪಾದೃಷ್ಟಿ: ನವರಾತ್ರಿ ಐದನೇ ದಿನ
ಅನಾವರಣ

Dasara Special | ಸ್ಕಂದಮಾತೆಯ ಕೃಪಾದೃಷ್ಟಿ: ನವರಾತ್ರಿ ಐದನೇ ದಿನ

Share
2 Min Read
SHARE

newsics.com

07.10.2024

ಸಿಂಹಾಸನ ಗತಾನಿತ್ಯಂ
ಪದ್ಮಾಶ್ರಿತ ಕರದ್ವಯಾ |
ಶುಭದಾಸ್ತು ಸದಾದೇವೀ
ಸ್ಕಂದಮಾತಾ ಯಶಸ್ವಿನೀ||

ಈ ತಾಯಿಯ ಸ್ವರೂಪ ಈ ದಿನ ಹೇಗಿರುತ್ತದೆ ಅಂದರೆ, ಸ್ಕಂದನು ಬಾಲರೂಪದಲ್ಲಿ ಆಕೆಯ ತೊಡೆಯ ಮೇಲೆ ಕುಳಿತಿರುತ್ತಾನೆ. ತಾಯಿಗೆ ಈ ರೂಪದಲ್ಲಿ ನಾಲ್ಕು ಭುಜಗಳು. ಬಲಗಡೆಯ ಮೇಲಿನ ಕೈಯಿಂದ ಸ್ಕಂದನನ್ನು ಹಿಡಿದಿದ್ದಾಳೆ. ಬಲಗಡೆಯ ಇನ್ನೊಂದು ಕೈಯಲ್ಲಿ ಕಮಲದ ಪುಷ್ಪವನ್ನು ಹಿಡಿದುಕೊಂಡಿದ್ದಾಳೆ. ಇನ್ನು ಎಡಗಡೆಯ ಮೇಲಿನ ಕೈಯಲ್ಲಿ ವರಮುದ್ರೆ ಇದ್ದು, ಎಡಗಡೆಯ ಮತ್ತೊಂದು ಕೈಯಲ್ಲಿ ಕಮಲವನ್ನೇ ಹಿಡಿದಿದ್ದಾಳೆ.

ಸ್ಕಂದಮಾತಾ ಕಮಲದ ಹೂವಿನ ಆಸನದ ಮೇಲೆ ವಿರಾಜಮಾನಳಾಗಿದ್ದಾಳೆ. ಈ ಕಾರಣಕ್ಕೆ ದೇವಿಯನ್ನು ಪದ್ಮಾಸನಾದೇವಿ ಅಂತಲೂ ಕರೆಯಲಾಗುತ್ತದೆ. ಆಕೆಯ ವಾಹನ ಸಿಂಹವಾಗಿದೆ. ಆರಾಧನೆ ಮಾಡುವವರು ಈ ದಿನ ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಬಹಳ ಮುಖ್ಯ. ಯಾವುದೇ ಕಾರಣದಿಂದಲೂ ಏಕಾಗ್ರತೆ ಕಳೆದುಕೊಳ್ಳಬಾರದು. ಸ್ಕಂದಮಾತಾ ಸ್ವರೂಪದಲ್ಲಿ ದೇವಿಯ ಆರಾಧನೆ ಮಾಡಿದಾಗ ಮನಸ್ಸಿನ ಕೋರಿಕೆಗಳು ಈಡೇರುತ್ತವೆ. ಶಾಂತಿ, ನೆಮ್ಮದಿ ದೊರೆಯುತ್ತದೆ. ಸ್ಕಂದಮಾತಾ ಆರಾಧನೆಯ ವಿಶೇಷ ಏನೆಂದರೆ, ತಾಯಿಯ ಕೈಂಕರ್ಯದ ಜತೆಜತೆಗೆ ಬಾಲರೂಪಿಯಾದ ಸ್ಕಂದನ ಆರಾಧನೆ ಸಹ ಮಾಡಿದಂತಾಗುತ್ತದೆ. ಈ ದೇವಿಯ ಆರಾಧಿಸುವವರಲ್ಲಿ ಅಲೌಕಿಕವಾದ ತೇಜಸ್ಸು ಹಾಗೂ ಕಾಂತಿಯೊಂದು ಇರುತ್ತದೆ.

ಮಕ್ಕಳು ಇಲ್ಲದ ದಂಪತಿ- ಸಂತಾನವನ್ನು ಪಡೆಯುವ ಬಯಕೆ ಇರುವಂಥವರು ಈ ಶರನ್ನವರಾತ್ರಿಯ ಐದನೇ ದಿನದಂದು ಈ ವ್ರತ ಆಚರಿಸಬೇಕು. ಇದನ್ನು ಮಾಡುವುದರಿಂದ ಆ ಜಗಜ್ಜನನಿಯ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಇದೆ. ಶುಭ್ರವಾದ ಬಟ್ಟೆ ಧರಿಸಿ, ಸ್ಕಂದಮಾತೆಗೆ ಬಾಳೆಹಣ್ಣು ಮತ್ತು ಅದರಿಂದ ಮಾಡಿದ ವಸ್ತುಗಳನ್ನು ಅರ್ಪಿಸಬೇಕು. ಇದರಿಂದ ಆ ತಾಯಿ ಸಂತುಷ್ಟಳಾಗುತ್ತಾಳೆ.

ಪೌರಾಣಿಕ ಹಿನ್ನೆಲೆ: ಪುರಾಣದ ಹಿನ್ನೆಲೆಯಂತೆ, ತಾರಕಾಸುರನೆಂಬ ರಾಕ್ಷಸನು ಬ್ರಹ್ಮದೇವರನ್ನು ಕುರಿತು ತಪಸ್ಸು ಮಾಡಿದ. ತಪಸ್ಸಿಗೆ ಒಲಿದ ಬ್ರಹ್ಮನು ತಾರಕಾಸುರನಿಗೆ ಅಮರತ್ವದ ವರ ನೀಡಿದ. ಆದರೂ ಬ್ರಹ್ಮನು ತಾರಕಾಸುರನಿಗೆ, ಜನ್ಮ ಪಡೆದವರು ಮರಣವನ್ನು ಅಪ್ಪಲೇಬೇಕು ಎಂದು ವಿವರಿಸಿದ. ಆಗ ತಾರಕಾಸುರನು, ಶಿವನ ಮಗನಿಂದ ತನಗೆ ಸಾವಾಗಲಿ ಎಂದು ಕೇಳಿಕೊಂಡ. ಏಕೆಂದರೆ ಶಿವನು ಎಂದಿಗೂ ಮದುವೆ ಆಗುವುದಿಲ್ಲ ಮತ್ತು ಮದುವೆಯಾದರೂ ಮಗನು ಜನಿಸುವುದಿಲ್ಲ ಎಂದು ರಾಕ್ಷಸನು ಭಾವಿಸಿದ್ದ.

ಬ್ರಹ್ಮನಿಂದ ವರವನ್ನು ಪಡೆದುಕೊಂಡ ನಂತರದಲ್ಲಿ ತಾರಕಾಸುರನು ಅಮಾಯಕ ಜನರಿಗೆ ಹಿಂಸೆ ಮಾಡಲಾರಂಭಿಸಿದ. ಆ ಜನರು ಶಿವನ ಬಳಿಗೆ ಹೋಗಿ, ತಾರಕಾಸುರನ ವಧೆಗಾಗಿ ಪ್ರಾರ್ಥಿಸಿದರು. ಆ ನಂತರದಲ್ಲಿ ಶಿವನು ಪಾರ್ವತಿಯನ್ನು ವಿವಾಹವಾದ ಹಾಗೂ ಕಾರ್ತಿಕೇಯ ಜನಿಸಿದ. ಕಾರ್ತಿಕೇಯ ಬೆಳೆದ ಮೇಲೆ ರಾಕ್ಷಸನಾದ ತಾರಕಾಸುರನನ್ನು ಕೊಂದ. ಅಂಥ ಸ್ಕಂದನಿಗೆ ತಾಯಿಯಾದ್ದರಿಂದ ಕಾರ್ತಿಕೇಯನು ಅವಳನ್ನು ಸ್ಕಂದಮಾತಾ ಎಂದು ಕರೆದ.

Dasara Special | ಯಶಸ್ಸು ಕರುಣಿಸುವ ಕೂಷ್ಮಾಂಡಾ: ನವರಾತ್ರಿ ನಾಲ್ಕನೇ ದಿನ

ದುರ್ಗೆಯ ಸ್ವರೂಪ ಚಂದ್ರಘಂಟಾ: ನವರಾತ್ರಿ ಮೂರನೇ ದಿನ

Dasara Special | ದ್ವಿತೀಯಂ ಬ್ರಹ್ಮಚಾರಿಣಿ: ನವರಾತ್ರಿ ಎರಡನೇ ದಿನ

ನವರಾತ್ರಿ ಮೊದಲ ದಿನ: ಶೈಲಪುತ್ರಿ ಸ್ವರೂಪ ಆರಾಧನೆ

TAGGED:Dasara Special | Grace of Skandamata: Navratri is the fifth day
Share This Article
Facebook Twitter Copy Link Print
Previous Article ಟ್ರಾಲಿ ಬ್ಯಾಗ್‌ನಲ್ಲಿ ಮಗುವನ್ನಿರಿಸಿ ಪಾದಯಾತ್ರೆ ಹೊರಟ ದಂಪತಿ!
Next Article Dasara Special | ಸೌಭಾಗ್ಯ ನೀಡುವ ಕಾತ್ಯಾಯಿನಿ: ನವರಾತ್ರಿ ಆರನೇ ದಿನ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಅನಾವರಣಪ್ರಮುಖವಿದೇಶವೈರಲ್

Human Fridge ವಿಪರೀತ ಸೆಕೆಯೆನಿಸಿದರೆ ಅಂದುಕೊಂಡಂತೆ ನೀವು ಫ್ರಿಡ್ಜ್‌ನಲ್ಲೇ ಕೂಲ್ ಆಗಬಹುದು! ಬಂದಿದೆ ಹ್ಯೂಮನ್ ಫ್ರಿಡ್ಜ್!

2 Min Read
ಅನಾವರಣದೇಶ

Puri Jagannath Rath Yatra: ಪುರಿ ಜಗನ್ನಾಥ ರಥಯಾತ್ರೆ: ವಿಶ್ವವಿಖ್ಯಾತ ಭಕ್ತಿಯ ಮಹೋತ್ಸವದ ವಿಶೇಷತೆ ಮತ್ತು ಮಹತ್ವ

1 Min Read
ನೆನಪುಕರ್ನಾಟಕಮನರಂಜನೆವೈರಲ್

Harshika Poonacha’s Retro-Style Baby Bump Photoshoot ರೆಟ್ರೋ ಸ್ಟೈಲ್‌ನಲ್ಲಿ ಬೇಬಿ ಬಂಪ್ ಫೋಟೋಶೂಟ್: ಹರ್ಷಿಕಾ ಪೂಣಚ್ಚ ಹೊಸ ಅವತಾರಕ್ಕೆ ಅಭಿಮಾನಿಗಳ ಮೆಚ್ಚುಗ

1 Min Read
ವಿದೇಶಅನಾವರಣಪ್ರಮುಖವೈರಲ್

Currency Market ಇದು ಜಗತ್ತಿನ ಏಕೈಕ ಕರೆನ್ಸಿ ಮಾರುಕಟ್ಟೆ! ಇಲ್ಲಿ ಹಣವನ್ನೇ ಮಾರ್ತಾರೆ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?