newsics.com
ರಾಜಸ್ಥಾನ: ಅಣಕು ಕಾರ್ಯಾಚರಣೆಯಲ್ಲಿ ಬೆಂಕಿ ನಂದಿಸುವ ವೇಳೆ ಸ್ಫೋಟ ಸಂಭವಿಸಿದ ಪರಿಣಾಮ 24 ವರ್ಷದ ಅಗ್ನಿವೀರ್ ಯೋಧರೊಬ್ಬರು ಮೃತಪಟ್ಟ ಘಟನೆ ರಾಜಸ್ಥಾನ್‌ನ ಭರತ್‌ಪುರ್‌ನಲ್ಲಿ ಸಂಭವಿಸಿದೆ.
ಗೋಲಪುರದಲ್ಲಿರುವ ಸೇನಾ ಪ್ರದೇಶದಲ್ಲಿ ಶನಿವಾರ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಅಣಕು ಪ್ರದರ್ಶನದ ವೇಳೆ ಸ್ಫೋಟಗೊಂಡ ಪರಿಣಾಮ ಸೌರಭ್ ಪಾಲ್ ಎಂಬುವರು ಗಾಯಗೊಂಡರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯೋಜನವಾಗಲಿಲ್ಲ.
ಮೃತ ಸೌರಭ್ ಪಾಲ್ ಉತ್ತರ ಪ್ರದೇಶದ ಖನ್ನೌಜ್ ನಲ್ಲಿ ಜಿಲ್ಲೆಯ ಭಕಾರ ಗ್ರಾಮದ ನಿವಾಸಿ ಎಂದು ಡಿಎಸ್ ಪಿ ಅನಿಲ್ ಜೊಸೊರಿಯಾ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ನೂತನ ಅಗ್ನಿವೀರ್ ಯೋಜನೆಯಡಿ ಸೌರಭ್ ಪಾಲ್ ಭಾರತೀಯ ಸೇನೆಗೆ 2023ರಲ್ಲಿ ಸೇರಿದ್ದರು.