Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > ದುರ್ಗೆಯ ಸ್ವರೂಪ ಚಂದ್ರಘಂಟಾ: ನವರಾತ್ರಿ ಮೂರನೇ ದಿನ
ಅನಾವರಣಪ್ರಮುಖ

ದುರ್ಗೆಯ ಸ್ವರೂಪ ಚಂದ್ರಘಂಟಾ: ನವರಾತ್ರಿ ಮೂರನೇ ದಿನ

Share
2 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಪಿಂಡಜಪ್ರವರಾರೂಢಾ ಚಂಡಕೋಪಾಸ್ತ್ರಕೈರ್ಯುತಾ |
ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ ||

ಶರನ್ನವರಾತ್ರಿಯ ಮೂರನೇ ದಿನ ಆ ಮಹಾಶಕ್ತಿ ದುರ್ಗೆಯ ಸ್ವರೂಪವನ್ನು ಚಂದ್ರಘಂಟಾ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಚಂದ್ರಘಂಟಾ ದೇವಿಯನ್ನು ಚಂದ್ರಿಕಾ, ರಣಚಂಡಿ ಎಂದೂ ಕರೆಯುತ್ತಾರೆ. ಆ ದೇವಿಯ ವಿಗ್ರಹವನ್ನು ಇರಿಸಿ, ಪೂಜೆ- ಆರಾಧನೆಯನ್ನು ಮಾಡಲಾಗುತ್ತದೆ. ಈ ದೇವಿಯ ಸ್ವರೂಪವು ಶಾಂತ ರೀತಿಯಲ್ಲಿ ಇದ್ದು, ಶ್ರೇಯಸ್ಸನ್ನು ನೀಡುತ್ತದೆ. ತಾಯಿಯ ತಲೆ ಮೇಲೆ ಗಂಟೆಯ ಆಕಾರದಲ್ಲಿ ಅರ್ಧ ಚಂದ್ರ ಇರುವುದರಿಂದ ಈ ಮಾತೆಯನ್ನು ಚಂದ್ರಘಂಟಾ ದೇವಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ಆ ಜಗನ್ಮಾತೆಯ ವರ್ಣನೆ ಈ ರೀತಿ ಇದೆ. ಆಕೆಯ ಶರೀರದ ಬಣ್ಣ ಚಿನ್ನದಂತೆ ಫಳಫಳಿಸುತ್ತದೆ. ಹತ್ತು ಕೈಗಳಿದ್ದು, ಎಲ್ಲದರಲ್ಲೂ ಖಡ್ಗ ಮೊದಲಾದ ಶಸ್ತ್ರ, ಬಾಣಗಳಿವೆ. ಆಕೆಯ ವಾಹನ ಸಿಂಹವಾಗಿದ್ದು, ಯುದ್ಧಕ್ಕೆ ಹೊರಟಂತಹ ಮುದ್ರೆ ಇದೆ. ಆಕೆಯ ಘಂಟೆಯಾಕಾರದ ಚಂದ್ರನ ಶಬ್ದವನ್ನು ಕೇಳಿ ದಾನವರು, ದೈತ್ಯರು, ರಾಕ್ಷಸರು ತಮ್ಮ ಶಕ್ತಿ ಕಳೆದುಕೊಂಡಂತೆ ನಿಶ್ಶಕ್ತರಾಗುತ್ತಾರೆ.

ಚಂದ್ರಘಂಟಾ ದೇವಿಯ ಆರಾಧನೆಯನ್ನು ಯಾರು ಮಾಡುತ್ತಾರೋ ಅಂಥವರ ಸಕಲ ಪಾಪಗಳು ನಶಿಸಿ ಹೋಗುತ್ತವೆ. ಆ ತಾಯಿ ತನ್ನ ಭಕ್ತರ ಕೋರಿಕೆಗಳನ್ನು ಕ್ಷಿಪ್ರವಾಗಿ ಪೂರೈಸುತ್ತಾಳೆ. ಆಕೆಯ ವಾಹನ ಸಿಂಹದಂತೆ ಆರಾಧಕನಾದವನಿಗೆ ಪರಾಕ್ರಮ ಬರುತ್ತದೆ, ನಿರ್ಭಯ ಆಗುತ್ತಾನೆ. ಚಂದ್ರಘಂಟಾ ದೇವಿಯ ಆ ಧ್ವನಿಯ ಮಾತ್ರದಿಂದಲೇ ಪ್ರೇತಬಾಧೆ ಮೊದಲಾದವುಗಳಿಂದ ರಕ್ಷಣೆ ದೊರೆಯುತ್ತದೆ. ಆಕೆಯ ಧ್ಯಾನದಿಂದಲೇ ಹಲವು ಕಷ್ಟಗಳು ನಿವಾರಣೆ ಆಗುತ್ತವೆ.

ಅಂದಹಾಗೆ, ಚಂದ್ರಘಂಟಾ ದೇವಿಯು ಶುಕ್ರ ಗ್ರಹದ ಅಧಿದೇವತೆ ಆಗಿದ್ದು, ಭೂಮಿಯ ಮೇಲಿರುವ ಎಲ್ಲ ಜೀವಿಗಳಿಗೂ ಸಂತೋಷ ನೀಡುವ ತಾಯಿ ಆಕೆ. ದೇವಿಯ ಆರಾಧನೆಯಿಂದ ಸಂಪತ್ತು, ಸಮೃದ್ಧಿ ದೊರೆಯುತ್ತದೆ. ತಾಯಿಯ ಆಶೀರ್ವಾದದಿಂದ ಮನೆಯಲ್ಲಿ ಯಾವತ್ತಿಗೂ ಆಹಾರದ ಕೊರತೆ ಬಾರದು.

ಪೂಜಾ ವಿಧಿ

ಚಂದ್ರಘಂಟಾ ದೇವಿಗೆ ಮಲ್ಲಿಗೆ ಹೂವು ಅರ್ಪಿಸಿ, ಪೂಜೆ ಮಾಡಿ ಹಾಗೂ ಭಕ್ತಿಯಿಂದ ಧ್ಯಾನ ಮಾಡಬೇಕು. ಇದರ ಜತೆಗೆ 16 ಬಗೆಯ ಅರ್ಪಣೆ ನೀಡಿ, ಆರತಿ ಮಾಡಬೇಕು. ಕೆಂಪು ಬಣ್ಣದ ಬಟ್ಟೆಯ ಅಲಂಕಾರ ಮಾಡಿದಲ್ಲಿ ಆ ತಾಯಿಯು ಆರಾಧಕರ ಕುಟುಂಬಕ್ಕೆ ಶ್ರೇಯಸ್ಸನ್ನು ನೀಡುತ್ತಾಳೆ.

ಚಂದ್ರಘಂಟಾ ದೇವಿಯ ಕಥೆ

ಆ ಜಗಜ್ಜನನಿಯು ಶಿವನನ್ನು ವಿವಾಹ ಆಗಬೇಕಾದ ಸಂದರ್ಭದಲ್ಲಿ ಆ ಮಹಾದೇವ ತನ್ನ ಸಕಲ ಗಣಗಳ ಜತೆಗೆ ಮದುವೆ ನಡೆಯುವ ಸ್ಥಳವನ್ನು ಪ್ರವೇಶಿಸುತ್ತಾನೆ. ಆ ಭಯಂಕರವಾದ ರೂಪವನ್ನು ಕಂಡು ಮಾತೆ ಮೂರ್ಛೆ ಹೋಗುತ್ತಾಳೆ. ಆ ಚಂದ್ರಘಂಟಾ ರೂಪದಲ್ಲಿ ಕಾಣಿಸಿಕೊಂಡ ದೇವಿಯು, ಶಿವನು ರಾಜಕುಮಾರನಂತೆ ಕಾಣಿಸಿಕೊಳ್ಳಬೇಕು ಎಂದು ಪ್ರಾರ್ಥಿಸಿದಾಗ ಅದರಂತೆಯೇ ಶಿವನು ರೂಪ ತಾಳುತ್ತಾನೆ. ಆಗ ಶಿವ- ಪಾರ್ವತಿಯ ವಿವಾಹ ನೆರವೇರುತ್ತದೆ.

ಚಂದ್ರಘಂಟಾ ದೇವಿಯು ಧೈರ್ಯ, ಪರಾಕ್ರಮ ಹಾಗೂ ಸೌಂದರ್ಯದ ಪ್ರತೀಕವಾಗಿದ್ದು, ಕೆಂಪು ಬಣ್ಣದ ವಸ್ತ್ರಗಳಿಂದ ತಾಯಿಗೆ ಅಲಂಕಾರ ಮಾಡಲಾಗುತ್ತದೆ. ಅಲ್ಲದೆ, ಕೆಂಪು ಬಣ್ಣದ ಹೂವುಗಳಿಂದ ಪೂಜೆ ಮಾಡಲಾಗುತ್ತದೆ.

Dasara Special | ದ್ವಿತೀಯಂ ಬ್ರಹ್ಮಚಾರಿಣಿ: ನವರಾತ್ರಿ ಎರಡನೇ ದಿನ

ನವರಾತ್ರಿ ಮೊದಲ ದಿನ: ಶೈಲಪುತ್ರಿ ಸ್ವರೂಪ ಆರಾಧನೆ

TAGGED:Chandraghanta form of Durga: Third day of Navratri
Share This Article
Facebook Twitter Copy Link Print
Previous Article ಮಹಿಳೆಯರ ಒಳ ಉಡುಪಿನ ಬಗ್ಗೆ ಲಾಯರ್ ಜಗದೀಶ್ ಮಾತು; ಏನಿದು ವಿವಾದ?
Next Article ಶುಭ ದಿನ… ಇಂದಿನ ಪಂಚಾಂಗ, ದಿನ ಭವಿಷ್ಯ, 05-10-2024, ಶನಿವಾರ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?