newsics.com
ಐಫೋನ್ 16 ಮಾರಾಟದಲ್ಲಿ ರತನ್ ಟಾಟಾ ಮಾಲೀಕತ್ವದ ಟಾಟಾ ಗ್ರೂಪ್ ಎಂಟ್ರಿ ಕೊಟ್ಟಿದೆ. ಟಾಟಾ ಗ್ರೂಪ್ ಮಾಲೀಕತ್ವದ ಬಿಗ್‌ಬಾಸ್ಕೆಟ್ ಇದೀಗ ಐಫೋನ್ 16 ಮಾರಾಟಕ್ಕೆ ಇಳಿದಿದೆ. ಇದು ಅಮೇಜಾನ್, ಫ್ಲಿಪ್‌ಕಾರ್ಟ್ ಆತಂಕವನ್ನು ಹೆಚ್ಚಿಸಿದೆ.
ಬಿಗ್‌ಬಾಸ್ಕೆಟ್ ಆಹಾರ ಪದಾರ್ಥಗಳ ವಿತರಣೆ ಮೂಲಕ ಹೆಚ್ಚು ಜನಪ್ರಿಯವಾಗಿದೆ. ಆದರೆ ಇತ್ತೀಚೆಗೆ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮಾರುಕಟ್ಟೆಗೂ ಪ್ರವೇಶಿಸಿದೆ. ಇದೀಗ ಐಫೋನ್ 16 ಸಿರೀಸ್ ಫೋನ್ ವಿತರಣೆ ಆರಂಭಿಸಿದೆ.
ಐಫೋನ್ ಪ್ರಿಯರು ಆದಷ್ಟು ಬೇಗ ಐಫೋನ್ 16 ಸಿರೀಸ್ ಪಡೆಯಲು ಬಯಸುತ್ತಿದ್ದಾರೆ. ಹೀಗಾಗಿ ಆನ್‌ಲೈನ್ ಮೂಲಕ ಬುಕಿಂಗ್ ಹಾಗೂ ಸ್ಟೋರ್ ಮುಂದೆ ಕ್ಯೂ ನಿಂತಿರುವ ದೃಶ್ಯಗಳು ವೈರಲ್ ಆಗಿತ್ತು. ಇದೀಗ ಟಾಟಾ ಗ್ರೂಪ್‌ನ ಬಿಗ್‌ಬಾಸ್ಕೆಟ್ ಐಫೋನ್ 16 ಬುಕ್ ಮಾಡಿದ 10 ನಿಮಿಷದಲ್ಲಿ ಡೆಲಿವರಿ ಮಾಡಲಿದೆ.
ಬಿಗ್‌ಬಾಸ್ಕೆಟ್ ಮೂಲಕ ಐಫೋನ್ ಖರೀದಿಸುವ ಗ್ರಾಹಕರಿಗೆ ಆ್ಯಪಲ್ ಸ್ಟೋರ್ ಬೆಲೆಯಲ್ಲೇ ಲಭ್ಯವಿದೆ. ಹೀಗಾಗಿ ಗ್ರಾಹಕರಿಗೆ ಬೆಲೆಯಲ್ಲೂ ಯಾವುದೇ ವ್ಯತ್ಯಾಸವಾಗದಂತೆ ಬಿಗ್‌ಬಾಸ್ಕೆಟ್ ನೋಡಿಕೊಂಡಿದೆ.
ಟಾಟಾ ಗ್ರೂಪ್ ಇದೀಗ ಐಫೋನ್ 16 ಸಿರೀಸ್ ಫೋನ್ ವಿತರಣೆಗೆ ಇಳಿದಿರುವುದು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಬಿಗ್‌ಬಾಸ್ಕೆಟ್ ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ತನ್ನದೇ ಆದರ ಡಿಸ್ಕೌಂಟ್ ಆಫರ್ ನೀಡುವ ಕುರಿತು ಚಿಂತಿಸುತ್ತಿದೆ. ಹಂತ ಹಂತವಾಗಿ ಮಾರುಕಟ್ಟೆ ಹಾಗೂ ವಿತರಣೆ ವಿಸ್ತರಿಸಲು ಬಿಗ್‌ಬಾಸ್ಕೆಟ್ ಮುಂದಾಗಿದೆ. ನಂಬಿಕಸ್ಥ ಟಾಟಾ ಗ್ರೂಪ್ ಇದೀಗ ಐಫೋನ್ ವಿತರಣೆ ಮಾರುಕಟ್ಟೆಗೆ ಪ್ರವೇಶ ಪಡೆದಿರುವುದು ಗ್ರಾಹಕರ ವಿಶ್ವಾಸಾರ್ಹತೆ ಹೆಚ್ಚಿಸಿದೆ.
ಕಳೆದ ತಿಂಗಳು ಆ್ಯಪಲ್ ಭಾರತದಲ್ಲಿ ಐಫೋನ್ 16 ಸಿರೀಸ್ ಬಿಡುಗಡೆ ಮಾಡಿದೆ. ಸೆಪ್ಟೆಂಬರ್ 20 ರಿಂದ ಐಫೋನ್ ಮಾರಾಟ ಆರಂಭಗೊಂಡಿದೆ. ಮೊದಲ ದಿನದಿಂದಲೇ ಭಾರೀ ಬೇಡಿಕೆ ವ್ಯಕ್ತವಾಗಿದೆ. ಆ್ಯಪಲ್ ಸ್ಟೋರ್ ಮುಂದೆ ಜನ ರಾತ್ರಿಯಿಂದಲೇ ಕ್ಯೂ ನಿಂತು ಫೋನ್ ಪಡೆದುಕೊಂಡಿದ್ದಾರೆ. ಇನ್ನು ಆನ್‌ಲೈನ್‌ನಲ್ಲಿ ಆಫರ್ ಸೇಲ್ ಮೂಲಕ ಐಫೋನ್ 16 ಸಿರೀಸ್ ಖರೀದಿಸುತ್ತಿದ್ದಾರೆ. ಭಾರತದಲ್ಲಿ ಐಫೋನ್ 16 ಸೀರಿಸ್ 79,900 ರೂಪಾಯಿಂದ ಆರಂಭಗೊಳ್ಳುತ್ತದೆ. ಟಾಪ್ ಮಾಡೆಲ್ ಬೆಲೆ 1.44 ಲಕ್ಷ ರೂಪಾಯಿ ಇದೆ.
ಸಿರಿಯಾ ಮೇಲೆ ಇಸ್ರೇಲ್ ದಾಳಿ; ಹಿಜ್ಬುಲ್ಲಾ ಮಾಜಿ ಮುಖ್ಯಸ್ಥ ನಸ್ರಲ್ಲಾ ಅಳಿಯ ಸಾವು