ಸಿರಿಯಾ ಮೇಲೆ ಇಸ್ರೇಲ್ ದಾಳಿ; ಹಿಜ್ಬುಲ್ಲಾ ಮಾಜಿ ಮುಖ್ಯಸ್ಥ ನಸ್ರಲ್ಲಾ ಅಳಿಯ ಸಾವು

newsics.com ಸಿರಿಯಾ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಮಾಜಿ ಮುಖ್ಯಸ್ಥ ನಸ್ರಲ್ಲಾ ಅಳಿಯ ಸೇರಿ ಮೂವರು ಸಾವನ್ನಪ್ಪಿದ್ದಾರೆ. ಲೆಬನಾನ್‌ನ ಬೈರುತ್‌ನಲ್ಲಿ ಇಸ್ರೇಲಿ ಸೇನೆಯು ಕಾರ್ಯಾಚರಣೆ ತೀವ್ರಗೊಳಿಸಿದೆ. ಹಿಜ್ಬುಲ್ಲಾ ಮಾಜಿ ಮುಖ್ಯಸ್ಥ ಹಸನ್ ನಸ್ರಲ್ಲಾ ಅವರ ಅಳಿಯ ಹಸನ್ ಜಾಫರ್ ಖಾಸಿರ್ ಕೂಡ ಸಾವನ್ನಪ್ಪಿದ್ದಾರೆ. ಇಸ್ರೇಲಿ ಪಡೆಗಳು ನಸ್ರಲ್ಲಾ, ಅವರ ಮಗಳು, ಅಳಿಯ ಮತ್ತು ಹಲವಾರು ಪ್ರಮುಖ ಕಮಾಂಡರ್‌ಗಳು ಸೇರಿದಂತೆ ಅನೇಕ ಹಿಜ್ಬುಲ್ಲಾ ಭಯೋತ್ಪಾದಕರನ್ನು ಕೊಂದಿವೆ.