newsics.com
ವಾಷಿಂಗ್ಟನ್: ನವೆಂಬರ್ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ಪರಸ್ಪರ ಕೆಸರೆರಚಾಟಕ್ಕೆ ಕಾರಣವಾಗಿದೆ.
ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡೆಮಕ್ರಾಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಬಣದ ಪ್ರಚಾರ ಕಾರ್ಯ ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿದ್ದು, ಮುಂದುವರಿದ ಭಾಗವಾಗಿ ಕಮಲಾ ಹ್ಯಾರಿಸ್ ಚುನಾವಣಾ ರ್ಯಾಲಿ ನಡೆಯುವ ಪ್ರದೇಶದಲ್ಲಿ ಟ್ರಂಪ್ ಅವರ 43 ಅಡಿ ಎತ್ತರದ ಬೆತ್ತಲೆ ಪ್ರತಿಮೆ ಸ್ಥಾಪಿಸಲಾಗಿದೆ.
ಉತಾಹ್ ನಗರವನ್ನು ಸಂಪರ್ಕಿಸುವ ಅಂತಾರಾಜ್ಯ ಹೆದ್ದಾರಿ 15ರ ಬದಿಯಲ್ಲಿ ಈ ಬೆತ್ತಲೆ ಪ್ರತಿಮೆ ಸ್ಥಾಪಿಸಲಾಗಿದೆ. ಪ್ರತಿಮೆಯ ಪೀಠದಲ್ಲಿ ‘ಮೊಂಡ ಮತ್ತು ಅಶ್ಲೀಲ’ ಎಂದು ಬರೆಯಲಾಗಿದೆ.
ಸ್ಪಂಜ್ನಿಂದ ನಿರ್ಮಿಸಲಾಗಿರುವ ಪ್ರತಿಮೆ 6,000 ಎಲ್ಬಿಎಸ್ (ಸುಮಾರು 2 ಸಾವಿರ ಕಿ.ಗ್ರಾಂ.) ತೂಕವಿದೆ. 2016ರಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯ ರೇಸ್ನಲ್ಲಿದ್ದ ಟ್ರಂಪ್ ಅವರ ಬೆತ್ತಲೆ ಪ್ರತಿಮೆ ಸ್ಥಾಪಿಸಲಾಗಿತ್ತು. ಆದರೆ ಅದು ಚಿಕ್ಕ ಗಾತ್ರದ್ದಾಗಿತ್ತು. ಶುಕ್ರವಾರ ಸ್ಥಾಪಿಸಲಾಗಿರುವ ಈ ಪ್ರತಿಮೆ ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.