newsics.com
ಅಗರ್ತಲಾ: ತ್ರಿಪುರಾದಲ್ಲಿನ ಸುಮಾರು 400 ಉಗ್ರರು ಮುಖ್ಯಮಂತ್ರಿ ಮಾಣಿಕ್ ಸಹಾ ಅವರ ಮುಂದೆ ಶಸ್ತ್ರಾಸ್ತ್ರಗಳನ್ನು ತ್ಯಜಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಉಗ್ರಗಾಮಿಗಳು ನಿಷೇಧಿತ ಉಗ್ರಗಾಮಿ ಸಂಘಟನೆಗಳಾದ ನ್ಯಾಷನಲ್ ಲಿಬರೇಶನ್ ಫ್ರಂಟ್ ಆಫ್ ತ್ರಿಪುರ ಮತ್ತು ಆಲ್ ತ್ರಿಪುರಾ ಟೈಗರ್ ಫೋರ್ಸ್ ಸೇರಿದವರಾಗಿದ್ದಾರೆ.
ಎನ್‌ಎಲ್‌ಎಫ್‌ಟಿ ಮತ್ತು ಎಟಿಟಿಎಫ್‌ನ ಸುಮಾರು 400 ಉಗ್ರಗಾಮಿಗಳು ಜಂಪೂಯಿಜಾಲಾದಲ್ಲಿರುವ ತ್ರಿಪುರಾ ಸ್ಟೇಟ್ ರೈಫಲ್ಸ್ (ಟಿಎಸ್‌ಆರ್) ನ 7 ನೇ ಬೆಟಾಲಿಯನ್‌ನ ಪ್ರಧಾನ ಕಛೇರಿಯಲ್ಲಿ ಸಿಎಂ ಮುಂದೆ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಲಿದ್ದಾರೆ ಎಂದು ಗೃಹ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.